ಸಂಸ್ಕೃತಿ ವಿಶ್ವ ಪ್ರತಿಷ್ಠಾನದಿಂದ ಸಂಸ್ಕೃತಿ ಉತ್ಸವ ಹಾಗೂ ‘ವಿಶ್ವಪ್ರಭಾ’ ಪುರಸ್ಕಾರ ಸಮಾರಂಭ

ಇದೇ ಬರುವ ಏಪ್ರಿಲ್ 3 ಮತ್ತು 4 ರಂದು ಉಡುಪಿಯ ಎಂಜಿಎಂ ಕಾಲೇಜಿನ ಮುದ್ದಣ್ಣ ಮಂಟಪದಲ್ಲಿ ಸಂಜೆ 5 45ರಿಂದ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ , ಎಂಜಿಎಂ ಕಾಲೇಜು ಉಡುಪಿ ಇವರ ಸಹಕಾರದಿಂದ ಎರಡು ದಿನ ‘ಸಂಸ್ಕೃತಿ ಉತ್ಸವ ‘ ನಡೆಯಲಿದೆ .

ಏಪ್ರಿಲ್ 3 ರಂದು ಉದ್ಘಾಟನಾ ಸಮಾರಂಭ ನಡೆಯಲಿದ್ದು, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರಾದ ರಮೇಶ್ ಬೇಗಾರ್ ಉದ್ಘಾಟಿಸಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಉಡುಪಿಯ ಶಾಸಕರಾದ ಕೆ ರಘುಪತಿ ಭಟ್ ವಹಿಸಲಿದ್ದಾರೆ. ಪ್ರತಿಷ್ಠಾನದ ಸ್ಮರಣ ಸಂಚಿಕೆ ‘ಪ್ರಭಾವಳಿ’ ‘ಯನ್ನು ರವೀಂದ್ರ ಪೂಜಾರಿಯವರು ಬಿಡುಗಡೆ ಗೊಳಿಸಲಿದ್ದಾರೆ.

ಎಂ.ಜಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ| ದೇವಿದಾಸ್ ಎಸ್. ನಾಯ್ಕ , ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕುಮಾರ್ ಬೆಕ್ಕೇರಿ ಉಪಸ್ಥಿತರಿರುತ್ತಾರೆ. ಸಭಾ ಕಾರ್ಯಕ್ರಮದ ನಂತರ ಶಿವಮೊಗ್ಗ ರಂಗಾಯಣದಿಂದ ‘ಚಾಣಕ್ಯ ಪ್ರಪಂಚ’ ನಾಟಕ ಪ್ರದರ್ಶನಗೊಳ್ಳಲಿದೆ.

ಏಪ್ರಿಲ್ 4ರಂದು ಮೂಡಬಿದ್ರೆಯ ಡಾ| ಎಂ ಮೋಹನ್ ಆಳ್ವ ಅವರಿಗೆ ಶ್ರೀಮತಿ ಪ್ರಭಾವತಿ ಹಾಗೂ ಉಡುಪಿ ವಿಶ್ವನಾಥ್ ಶೆಣೈ ಪ್ರಾಯೋಜಿತ ‘ವಿಶ್ವಪ್ರಭಾ’ ಪುರಸ್ಕಾರವನ್ನು ನೀಡಲಾಗುವುದು. ಪುರಸ್ಕಾರವು ಪ್ರಶಸ್ತಿ ಪತ್ರದೊಂದಿಗೆ ಫಲಕ, ನಗದು ರೂಪಾಯಿ ಒಂದು ಲಕ್ಷ ಒಳಗೊಂಡಿರುತ್ತದೆ.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನ್ಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ವಹಿಸಲಿದ್ದು, ಅಭಿನಂದನಾ ಭಾಷಣವನ್ನು ಪ್ರೊ. ಎಂ. ಎಲ್ ಸಾಮಗ ಮಾಡಲಿದ್ದಾರೆ . ಮುಖ್ಯ ಅತಿಥಿಗಳಾಗಿ ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ಬಸ್ತಿ ವಾಮನ ಶೆಣೈ, ತುಳುಕೂಟದ ಅಧ್ಯಕ್ಷರಾದ ಇಂದ್ರಾಳಿ ಜಯಕರ ಶೆಟ್ಟಿ, ರಂಗಾಯಣದ ನಿರ್ದೇಶಕರಾದ ಸಂದೇಶ್ ಜವಳಿ ಉಪಸ್ಥಿತರಿರುತ್ತಾರೆ.

ಸಭಾ ಕಾರ್ಯಕ್ರಮಕ್ಕೂ ಮೊದಲು ಪ್ರತಿಷ್ಠಾನದ ಯುವ ಬಳಗದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು , ಸಭಾ ಕಾರ್ಯಕ್ರಮದ ನಂತರ ಶಿವಮೊಗ್ಗ ರಂಗಾಯಣದ ನಾಟಕ ‘ಹಕ್ಕಿಕಥೆ’ ನಡೆಯಲಿದೆ ಎಂದು ವಿಶ್ವಪ್ರಭಾ ಪುರಸ್ಕಾರ ಸಮಿತಿಯ ಸಂಚಾಲಕ ಮರವಂತೆ ನಾಗರಾಜ್ ಹೆಬ್ಬಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರು.

 
 
 
 
 
 
 
 
 
 
 

Leave a Reply