Janardhan Kodavoor/ Team KaravaliXpress
24.6 C
Udupi
Thursday, June 30, 2022
Sathyanatha Stores Brahmavara

ಉಚಿತ ಆರೋಗ್ಯ ಶಿಬಿರ

ಉಡುಪಿ :- ಹಿರಿಯ ನಾಗರಿಕರ ಕನಸಿನ ಮನೆ ವೃದ್ದಾಶ್ರಮ ಉದ್ಯಾವರದಲ್ಲಿ ಮೇ.28 ರಂದು ಉಚಿತ ಆರೋಗ್ಯ ಶಿಬಿರ ನಡೆಯಿತು.

ಜಯಂಟ್ಸ್ ಗ್ರೂಪ್ ಬ್ರಹ್ಮಾವರ, ಭಾರತೀಯ ಜನ್ ಔಷಧ ಕೇಂದ್ರ , ವೈದ್ಯಕೀಯ ಪ್ರತಿನಿಧಿಗಳ ಸಂಘ ಹಾಗೂ ಶಿವಾನಿ ಡಯೋಗ್ನೋ ಸ್ಟಿಕ್ ಸೆಂಟರ್ ಉಡುಪಿ ಇದರ ಆಶ್ರಯದಲ್ಲಿ ನಡೆದ ಕಾಯ೯ಕ್ರಮದಲ್ಲಿ ಎಲ್ಲಾ ನಿವಾಸಿಗಳಿಗೆ ಔಷಧ ಮತ್ತು ವೈದ್ಯಕೀಯ ಉಪಕರಣ ನೀಡಲಾಯಿತು.

ಈ ಸಂದಭ೯ದಲ್ಲಿ ಮಾತನಾಡಿದ ಜಯಂಟ್ಸ್ ಫೆಡರೇಶನ್ ಮಾಜಿ ಅಧ್ಯಕ್ಷ ಮಧುಸೂಧನ್ ಹೇರೂರು, ನಾವು ಸಮಾಜದಲ್ಲಿ ಸೇವೆ ಮಾಡುವ ಮೂಲಕ ಜೀವನದಲ್ಲಿ ಸಾಧನೆ ಮಾಡಬಹುದು. ಉತ್ತಮ ಕೆಲಸ ದೇವ ಸೇವೆಗೆ ಸರಿ ಎಂದರು
ಶಿವಾನಿ ಸೆಂಟರ್ ಮುಖ್ಯಸ್ಥ ಡಾ| ಶಿವಾನಂದ ನಾಯಕ್, ಆರೋಗ್ಯ ಮಾಹಿತಿ ನೀಡಿದರು,
ವೇದಿಕೆಯಲ್ಲಿ ವೈದ್ಯಕೀಯ ಪ್ರತಿನಿಧಿ ಸಂಘದ ಕಾಯ೯ದಶಿ೯ ಪ್ರಸನ್ನ ಕಾರಂತ್, ಅಣ್ಣಯ್ಯದಾಸ್, ಜೋಸೆಫ್ , ಆಶ್ರಮದ ಸೀಮಾ, ಶಿವಾನಂದ ಮುಂತಾದವರಿದ್ದರು.
ಜಯಂಟ್ಸ್ ಅಧ್ಯಕ್ಷ ಸುಂದರ ಪೂಜಾರಿ ಮೂಡುಕುಕ್ಕುಡೆ ವಂದಿಸಿದರು. ರಾಘವೇಂದ್ರ ಕವಾ೯ಲು ನಿರೂಪಿಸಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!