ಶ್ರೀ ಶಾಂತಿಮತೀ ಪ್ರತಿಷ್ಠಾನ ದ ಸಾಧಕರೆಡೆ ನಮ್ಮ ನಡೆ ಕಾರ್ಯಕ್ರಮ

ಶ್ರೀ ಶಾಂತಿಮತೀ ಪ್ರತಿಷ್ಠಾನ ದ ಸಾಧಕರೆಡೆ ನಮ್ಮ ನಡೆ ಕಾರ್ಯಕ್ರಮ ದ ಅಂಗವಾಗಿ ನಿನ್ನೆ ಸಂಜೆ ಉಡುಪಿಯ ಕನ್ನರ್ಪಾಡಿಯ ಡಾ.ಉಷಾ ಚಡಗ ಅವರನ್ನು ಗೌರವಿಸಲಾಯಿತು, ತಮ್ಮ 75 ನೇ ಇಳಿ ವಯಸ್ಸಿನಲ್ಲಿ ಸಂಸ್ಕೃತ ಭಾಷೆಯನ್ನು ಕಲಿತು ಉಡುಪಿಯ ಸಂಸ್ಕೃತ ಕಾಲೇಜಿನಲ್ಲಿ ಸಾಹಿತ್ಯ ಹಾಗೂ ವೇದಾಂತ ವಿದ್ವತ್ ಪದವಿ ಪಡೆದು ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ ರ ಮಾರ್ಗದರ್ಶನದಲ್ಲಿ ಮಾಧ್ವ ತತ್ವದ ವಿಷಯದಲ್ಲಿ ಮಂಡಿಸಿದ ಮಹಾಪ್ರಬಂಧ ಕ್ಕೆ ಮಂಗಳೂರು ವಿಶ್ವವಿದ್ಯಾಲಯ ವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ, ಅವರ ಈ ಸಾಧನೆಯನ್ನು ಮನಗಂಡು ಶ್ರೀ ಶಾಂತಿಮತೀ ಪ್ರತಿಷ್ಠಾನ ವು ಅವರನ್ನು, ನಿನ್ನೆ ಸಂಜೆ ಶ್ರೀಯುತರ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಗೌರವಿಸಿತು, ಈ ಕಾರ್ಯಕ್ರಮದಲ್ಲಿ ಶಾಂತಿಮತೀ ಪ್ರತಿಷ್ಠಾನ ದ ಅಧ್ಯಕ್ಷರು ಹಾಗೂ ಸದಸ್ಯರು, ಶ್ರೀಯುತರ ಹಿತೈಷಿಗಳು ಭಾಗವಹಿಸಿದ್ದರು. ಗೌರವ ಸ್ವೀಕರಿಸಿ ಮಾತನಾಡಿದ ಉಷಾ ಚಡಗ ನನ್ನ ಈ ಸಾಧನೆಗೆ ಬನ್ನಂಜೆ ಗೋವಿಂದಾಚಾರ್ಯ ಹಾಗೂ ನನ್ನ ಪತಿಯೇ ಪ್ರೇರಣೆ ಎಂದರು,ಡಾ.ವಿಜಯ ಮಂಜರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು, ಅಧ್ಯಕ್ಷರಾದ ಚಂದ್ರಶೇಖರ ಅಡಿಗಳು ಧನ್ಯವಾದ ಸಮರ್ಪಣೆಗೈದು ರಾಮಚಂದ್ರ ಉಡುಪ ಕಾರ್ಯಕ್ರಮ ನಿರೂಪಿಸಿದರು, ಉಷಾ ಚಡಗ ಅವರ ಪತಿ ಇಸ್ರೋದ ನಿವೃತ್ತ ವಿಜ್ಞಾನಿ ರಾಮಕೃಷ್ಣ ಚಡಗ ಉಪಸ್ಥಿತರಿದ್ದು ಇಸ್ರೋದ ತಮ್ಮ ಅನುಭವಗಳನ್ನು ಹಂಚಿಕೊಂಡರು, ಲಘು ಉಪಹಾರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

 
 
 
 
 
 
 
 
 
 
 

Leave a Reply