ಅಂಬಲಪಾಡಿ ದೇವಸ್ಥಾನದ ವಠಾರದಲ್ಲಿ ಉಚಿತ ಅರೋಗ್ಯ ತಪಾಸಣೆ, ಮಾಹಿತಿ ಮತ್ತು ರಕ್ತದಾನ ಶಿಬಿರ

ಉಡುಪಿ : ಏಪ್ರಿಲ್ 11 ಆದಿತ್ಯವಾರದಂದು ಅಂಬಲಪಾಡಿಯ ಶ್ರೀ ಜನಾರ್ಧನ ಮಹಾಕಾಳಿ ದೇವಸ್ಥಾನ, ಬುಡಕಾನ್ ಕರಾಟೆ ಮತ್ತು ಸ್ಪೋರ್ಟ್ಸ್ ಅಸೋಸಿಯೇಷನ್, ಮತ್ತು ಅಭಯಹಸ್ತ ಹೆಲ್ಪ್ ಲೈನ್ ಇವರ ಸಂಯುಕ್ತ ಆಶ್ರಯದಲ್ಲಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ನುರಿತ ತಜ್ಞರಿಂದ ಉಚಿತ ಅರೋಗ್ಯ ತಪಾಸಣಾ ಶಿಬಿರ ಮತ್ತು ಜಾಗೃತಿ ಕಾರ್ಯಕ್ರಮ,ಕ್ಕ ಹಾಗೂ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ರಕ್ತ ಕೇಂದ್ರದ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ. 

ಈ ಶಿಬಿರವು ಬೆಳೆಗ್ಗೆ 9.00ರಿಂದ ಮದ್ಯಾಹ್ನ 1.00ರ ತನಕ ಅಂಬಲಪಾಡಿ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ. ಶಿಬಿರದಲ್ಲಿ ಕಸ್ತೂರ್ಬಾ ಆಸ್ಪತ್ರೆಯ ಹೃದ್ರೋಗ ವಿಭಾಗ, ಸಾಮಾನ್ಯ ವೈದ್ಯಕೀಯ ವಿಭಾಗ, ಕಿವಿ ಮೂಗು ಗಂಟಲು ವಿಭಾಗ, ಚರ್ಮ ರೋಗ ವಿಭಾಗ, ಮೂಳೆ ಮತ್ತು ಕೀಲಿನ ವಿಭಾಗ, ನೇತ್ರ ವಿಭಾಗ, ಮಕ್ಕಳ ವಿಭಾಗ, ವಾಕ್ ಮತ್ತು ಶ್ರವಣ ವಿಭಾಗ ಮತ್ತು ಒಕ್ಕ್ಯುಪೇಷನಲ್ ವಿಭಾಗಗಳ ತಜ್ಞರು ಪಾಲ್ಗೊಳ್ಳಲಿದ್ದಾರೆ. ಮಧುಮೇಹ ಮತ್ತು ಪಾದದ ತಪಾಸಣೆ, ಇ ಸಿ ಜಿ , ಬಿ ಪಿ ಮತ್ತು ಕಣ್ಣಿನ ತಪಾಸಣೆಯನ್ನು ಉಚಿತವಾಗಿ ಮಾಡಲಾಗುವುದು. ಅಗತ್ಯವುಳ್ಳವರಿಗೆ ಉಚಿತವಾಗಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಮತ್ತು ಇತರ ಚಿಕಿತ್ಸೆಗಳನ್ನು ಆಸ್ಪತ್ರೆಯಲ್ಲಿ ನಡೆಸಲಾಗುವುದು. ಜನರು ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ಆಯೋಜಕರು ವಿನಂತಿಸಿದ್ದಾರೆ. ಶಿಬಿರಕ್ಕೆ ಬರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಬರುವಂತೆ ತಿಳಿಸಿಲಾಗಿದೆ.ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 8197102727 ಸಂಪರ್ಕಿಸಬಹುದು.

 
 
 
 
 
 
 
 
 
 
 

Leave a Reply