ಕೋವಿಡ್ 19 ನಿಂದ ಆಶಾ ಕಾರ್ಯಕರ್ತೆಯರ ಮೌಲ್ಯ ಜಗತ್ತಿಗೆ ಅನಾವರಣ:

ಕರೋನಾ ತಪಾಸಣಾ ಶಿಬಿರ ಉದ್ಘಾಟಿಸಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ ಕೋವಿಡ್ 19 ಮಾರಕ ಸೋಂಕು ಅವರಿಸುತ್ತಿದ್ದಂತೆ ಮನುಷ್ಯನ ಜೀವನ ಶೈಲಿಯ ಮೇಲೆ ಗಮನಾರ್ಹ ಬದಲಾವಣೆಗಳನ್ನು ತಂದಿದಲ್ಲದೆ ಈ ಕಾಯಿಲೆ ಯನ್ನು ತಡೆಗಟ್ಟುವಲ್ಲಿ ಮತ್ತು ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವಲ್ಲಿ ಸಾಮಾನ್ಯ ಜನರನ್ನು ನಿಕಟವಾಗಿ ಸಂಪರ್ಕಿಸುವ ಆಶಾ ಕಾರ್ಯಕರ್ತೆಯರ ಮೌಲ್ಯವು ಜಗತ್ತಿಗೆ ಅನಾವರಣಗೊಂಡಿತು.

ಆಶಾ ಕಾರ್ಯಕರ್ತರಂತೆಯೇ ಅರೋಗ್ಯ ಇಲಾಖೆಯ ಸಿಬ್ಬಂದಿಗಳು ವೈದ್ಯರುಗಳು ಕೇವಲ ಕರ್ತವ್ಯಪ್ರಜ್ಞೆಯಿಂದ ಕೆಲಸ ಮಾಡುವುದರ ಹೊರತಾಗಿ ಮಾನವೀಯ ಮೌಲ್ಯಗಳ ಬೆಳಕನ್ನು ಚೆಲ್ಲುವ ಕೆಲಸಗಳನ್ನು ಪರಿಣಾಮಕಾರಿಯಾಗಿ ಮಾಡಿದರು, ಸಹೃದಯ ಪ್ರೀತಿಯನ್ನು ಹಂಚಿದರು ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ ಹೇಳಿದರು.

ಅವರು ಭಾನುವಾರ ಉಡುಪಿ ಇಂದ್ರಾಳಿ ಇಂಗ್ಲಿಷ್ ಮಾದ್ಯಮ ಶಾಲೆಯಲ್ಲಿ ರಾಷ್ಟ್ರೀಯ ನಗರ ಅರೋಗ್ಯ ಅಭಿಯಾನ, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಇಂದ್ರಾಳಿ, ಸಗ್ರಿ, ಕಸ್ತೂರ್ಬಾ ನಗರ ವಾರ್ಡ್ ಸಮಿತಿ, ನಗರ ಪ್ರಾಥಮಿಕ ಅರೋಗ್ಯ ಕೇಂದ್ರ ಮಣಿಪಾಲ ಮತ್ತು ರೋಟರಿ ಕ್ಲಬ್ ಉಡುಪಿ ರಾಯಲ್ ಆಶ್ರಯದಲ್ಲಿ ಆಯೋಜಿಸಿದ ಉಚಿತ ಅರೋಗ್ಯ ತಪಾಸಣಾ ಶಿಬಿರ , ಕಡ್ಡಾಯ ಕೋವಿಡ್ ಪರೀಕ್ಷೆ, ಯೋಗ ಕಾರ್ಯಾಗಾರ ಮತ್ತು ಮಾಹಿತಿ, ಫಿಟ್ ಇಂಡಿಯಾ ಅರೋಗ್ಯ ರಕ್ಷಣಾ ಅಭಿಯಾನ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮ ಸಂಯೋಜಕರ ವತಿಯಿಂದ ಶಾಲೆಯನ್ನು ನೈರ್ಮಲೀಕರಣ ಗೊಳಿಸಲಾಯಿತು. ಉಡುಪಿ ತಾಲೂಕು ಯುವಜನ ಸಬಲೀಕರಣ ಹಾಗು ಕ್ರೀಡಾ ಇಲಾಖೆಯ ಅಧಿಕಾರಿ ಅಲ್ವಿನ್ ಅಂದ್ರಾದೆ ಯವರು ದೈಹಿಕ ಸಕ್ಷಮತೆಯ ಬಗ್ಗೆ ಕಾರ್ಯಾಗಾರ ನಡೆಸಿದರು. ಯೋಗ ಶಿಕ್ಷಕ ಪ್ರಕಾಶ್ ನಾಯಕ್ ಯೋಗ ಮಾಹಿತಿ ಕಾರ್ಯಾಗಾರ ನಡೆಸಿದರು.

ಕೋವಿಡ್ 19 ಸಂದರ್ಭದಲ್ಲಿ ಮನೆ ಮನೆಗೆ ತೆರಳಿ ಕೋವಿಡ್ ಪರೀಕ್ಷಾ ಮಾದರಿ ಸಂಗ್ರಹಿಸುತ್ತಿರುವ ಸೌಮ್ಯ ಅವರನ್ನು ಸನ್ಮಾನಿಸಲಾಯಿತು. ರಾಯಲ್ ಅಧ್ಯಕ್ಷ ಮಂಜುನಾಥ್ ಮಣಿಪಾಲ ಸಮಾರಂಭದ ಅಧ್ಯಕ್ಷತೆ ವಹಿಸಿದರು. ಉಡುಪಿ ತಾಲೂಕು
ವೈದ್ಯಾಧಿಕಾರಿ ಡಾ. ನಾಗರತ್ನ ಶಾಸ್ತ್ರಿ, ಮಕ್ಕಳ ತಜ್ಞ ಡಾ. ಅಮರನಾಥ್ ಶಾಸ್ತ್ರೀ, ಮಣಿಪಾಲ ಪ್ರಾಥಮಿಕ ಅರೋಗ್ಯ
ಕೇಂದ್ರದ ವೈದ್ಯಾಧಿಕಾರಿ ಡಾ. ವಿದ್ಯಾ, ರೋಟರಿ ಸಂಸ್ಥೆಯ ಡಾ. ಸುರೇಶ ಶೆಣೈ, ನಗರಸಭಾ ಸದಸ್ಯರಾದ ಅಶೋಕ್
ನಾಯ್ಕ, ರಾಜು, ಭಾರತೀ ಪ್ರಶಾಂತ್, ಮತ್ತಿತರರು ಹಾಜರಿದ್ದರು.

ಕಾರ್ಯಕ್ರಮ ಸಂಯೋಜಕ ರತ್ನಾಕರ್ ಇಂದ್ರಾಳಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸುಜಲಾ ಸತೀಶ್ ವಂದಿಸಿದರು. ನಗರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸರೋಜಾ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply