ಅಮೇರಿಕಾದ ನೂತನ ಅಧ್ಯಕ್ಷರಿಂದ ಭಾರತಕ್ಕೆ ಸಿಗಲಿದೆ ಭರ್ಜರಿ ಉಡುಗೊರೆ

ಅಮೇರಿಕಾ: ಅಮೆರಿಕಾದ ನೂತನ ಅಧ್ಯಕ್ಷ ಬಿಡೆನ್ ಭಾರತಕ್ಕೆ ಸದ್ಯದಲ್ಲೇ ಹೊಸ ಉಡುಗೊರೆಯೊಂದನ್ನು ನೀಡಲಿದ್ದಾರೆ. ಹೌದು ಅಮೇರಿಕಾದಲ್ಲಿ ಸೂಕ್ತ ದಾಖಲೆಗಳಿಲ್ಲದೆ ನೆಲೆಸಿರುವ ಭಾರತದ 5 ಲಕ್ಷ ಜನರು ಸೇರಿದಂತೆ ಸುಮಾರು 1 ಕೋಟಿ 10 ಲಕ್ಷ ವಲಸಿಗರಿಗೆ ಅಮೆರಿಕದ ಪೌರತ್ವ ನೀಡುವ ಬಗ್ಗೆ ಮಾರ್ಗದರ್ಶಿ ಸೂತ್ರಗಳನ್ನ ರೂಪಿಸಲು ಜೋ ಬಿಡೆನ್ ಯೋಚಿಸಿದ್ದಾರೆ.

ಈ ಕುರಿತು ಪ್ರಚಾರ ಕಾರ್ಯ ತಂಡವು ಬಿಡುಗಡೆ ಮಾಡಿರುವ ನೀತಿ ನಿರೂಪಣಾ ದಾಖಲೆಗಳಂತೆ, ಪ್ರತಿ ವರ್ಷ ಕನಿಷ್ಠ 95 ಸಾವಿರ ವಲಸಿಗರು ಅಮೆರಿಕದಲ್ಲಿ ಪ್ರವೇಶ ಪಡೆಯುವ ಬಗ್ಗೆಯೂ ಯೋಜನೆಯನ್ನು ಬಿಡನ್ ರೂಪಿಸಲಿದ್ದಾರೆ. ಈ ನೀತಿ ಕಡತದ ಪ್ರಕಾರ, ವಲಸೆ ಸುಧಾರಣಾ ಕಾನೂನು ಜಾರಿಗೊಳಿಸುವುದಕ್ಕೆ, ಅದಕ್ಕೆ ಸಂಬಂಧಿಸಿದ ಮಸೂದೆ ಸಿದ್ಧಪಡಿಸಿ ಅಂಗೀಕರಿಸುವುದ ಕ್ಕಾಗಿ ಬಿಡೆನ್ ಅವರು ಶೀಘ್ರವೇ ಕೆಲಸ ಪ್ರಾರಂಭಿಸಲಿದ್ದಾರೆ.

ಒಂದು ಕುಟುಂಬ ಒಟ್ಟಿಗೇ ಇರಬೇಕು ಎಂಬುದಕ್ಕೆ ಆದ್ಯತೆ ನೀಡಲು ವಲಸೆ ಸುಧಾರಣಾ ನೀತಿ ಕುರಿತು ಶಾಸನ ರೂಪಿಸಲಿದೆ. ಕುಟುಂಬ ಆಧಾರಿತ ವಲಸೆಗೆ ಬಿಡೆನ್‌ ಆಡಳಿತ ಬೆಂಬಲಿಸಲಿದೆ. ಅವಿಭಕ್ತ ಕುಟುಂಬದ ಹಿತಾಸಕ್ತಿ ಕಾಪಾಡುವುದು ಅಮೆರಿಕದ ಪ್ರಮುಖ ನೀತಿಯಾಗಿ ರಲಿದೆ ಎಂದು ದಾಖಲೆಗಳು ಹೇಳಿವೆ.

Leave a Reply