ಅಕ್ಸಿಜನ್‌ ಸಿಗದೇ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 20ಕ್ಕೂ ಅಧಿಕ ಜನರ ಮೃತ್ಯು

ಚಾಮರಾಜನಗರ : ಭಾನುವಾರ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಅಕ್ಸಿಜನ್‌ ಸಿಗದೇ 20ಕ್ಕೂ ಅಧಿಕ ಮಂದಿ ಕರೊನ ಸೋಂಕಿತರು ಮೃತಪಟ್ಟ ಘಟನೆ ನಡೆದಿದೆ. ರವಿವಾರ ನಡುರಾತ್ರಿಯಲ್ಲಿ ಈ ಅವಘಡ ನಡೆದಿದ್ದು, ಕರೊನ ಸೋಂಕಿತರಿಗಾಗಿ ಚಿಕಿತ್ಸೆ ನೀಡಲಾಗುತ್ತಿದ್ದ ಕೊಠಡಿಗೆ ಅಕ್ಸಿಜನ್‌ ತಲುಪದೆ ಏಕಾಏಕಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಇಂದು ಘಟನ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ, ಪರಿಶೀಲನೆ ನಡೆಸಿ ಘಟನೆಯಲ್ಲಿ ಸಾವನ್ನಪ್ಪಿರುವವರು ನಾನಾ ಕಾರಣದಿಂದ ಮೃತಪಟ್ಟಿದ್ದರೆ ಅಂತ ಜಿಲ್ಲಾಧಿಕಾರಿ ಹೇಳುತ್ತಿದ್ದಾರೆ.ಆದರೆ ತನಿಖೆ ಬಳಿಕ ಮಾತ್ರ ಈ ಬಗ್ಗೆ ಸತ್ಯ ತಿಳಿದು ಬಂದಿದೆ.

ಆಸ್ಪತ್ರೆ ಮುಂದೆ ನೂರಾರು ಮಂದೆ ನೆರೆದಿದ್ದು, ಪರಿಸ್ಥಿತಿಯನ್ನು ನಿಭಾಯಿಸಲು ಪೊಲೀಸರು ಸ್ಥಳದಲ್ಲಿದ್ದಾರೆ. ಇನ್ನೂ ಸಿಎಂ ಬಿಎಸ್‌ವೈ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು, ಡಿಸಿಯನ್ನು ತರಾಟೆಗೆ ತೆಗೆದುಕೊಂಡಿದ್ದು, ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ, ಘಟನೆಯ ಹೊಣೆಯನ್ನು ಯಾರು ಹೊತ್ತಿಕೊಳ್ಳುತ್ತಾರೆ ಅಂಥ ಪ್ರಶ್ನಿಸಿದ್ದಾರೆ.ಈ ಬೇಜವಾಬ್ದಾರಿ ತನಕ್ಕೆ ಜಿಲ್ಲಾಸ್ಪತ್ರೆಯ ಮೇಲೆ ಮೃತರ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

 
 
 
 
 
 
 
 
 
 
 

Leave a Reply