ಕೊರೊನಾ ಹಿನ್ನೆಲೆ NEET – PG ಪರೀಕ್ಷೆ 4 ತಿಂಗಳು ಮುಂದೂಡಿಕೆ

ನವದೆಹಲಿ : ಕೊರೊನಾ ಸೋಂಕು ದೇಶದಾದ್ಯಂತ ಅಧಿಕವಾಗುತ್ತಿದ್ದು, ಎರಡನೇ ಅಲೆಯ ತೀವ್ರತೆ ಹೆಚ್ಚಿದೆ. ಹೀಗಾಗಿ NEET – PG ಪರೀಕ್ಷೆಗಳನ್ನು ಕನಿಷ್ಠ ನಾಲ್ಕು ತಿಂಗಳ ಕಾಲ ಮುಂದೂಡಿಕೆ ಮಾಡಲಾಗಿದೆ‌ ಎಂದು ಕೇಂದ್ರ ಸರಕಾರ ಘೋಷಿಸಿದೆ.

ಅಗಸ್ಟ್ ತಿಂಗಳಲ್ಲಿ ನೀಟ್ ಪಿಜಿ ಪರೀಕ್ಷೆಗಳನ್ನು ನಡೆಸುವು ದಾಗಿ ಈ ಹಿಂದೆ ಕೇಂದ್ರ ಸರಕಾರ ಘೋಷಣೆ ಮಾಡಿತ್ತು. ಆದರೆ ಇದೀಗ ನೀಟ್-ಪಿಜಿಯನ್ನ ಕನಿಷ್ಠ 4 ತಿಂಗಳವರೆಗೆ ಮುಂದೂಡುವ ನಿರ್ಧಾರ ಮಾಡಿದೆ. ಆದ್ದರಿಂದ ಆಗಸ್ಟ್ 31ರ‌ ಮೊದಲು ಪರೀಕ್ಷೆ ನಡೆಯುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.ಪರೀಕ್ಷೆ ನಡೆಸುವ ಮೊದಲು ವಿದ್ಯಾರ್ಥಿಗಳಿಗೆ ಕನಿಷ್ಠ 1 ತಿಂಗಳ ಕಾಲಾವಕಾಶವನ್ನು ನೀಡಲಾಗುತ್ತದೆ. 

ನೀಟ್ ಹಾಗೂ ಪಿಜಿ ಪರೀಕ್ಷೆ ಮುಂದೂಡಿಕೆಯಾಗಿರುವ ಹಿನ್ನೆಲೆ ಹೆಚ್ಚಿನ ವೈದ್ಯರನ್ನು ಹಾಗೂ ಸಿಬ್ಬಂದಿಗಳನ್ನು ಕೋವಿಡ್ ನಿರ್ವಹಣಾ ಕಾರ್ಯಕ್ಕೆ ಬಳಸಿಕೊಳ್ಳಲು ಸರ್ಕಾರ ಮುಂದಾಗಿದೆ.

 
 
 
 
 
 
 
 
 
 
 

Leave a Reply