Janardhan Kodavoor/ Team KaravaliXpress
30.6 C
Udupi
Tuesday, August 16, 2022
Sathyanatha Stores Brahmavara

ಉಡುಪಿ: ಕೊರೊನಾ ಹಿನ್ನೆಲೆಯಲ್ಲಿ 5 ಕಡೆ ಕಂಟೈನ್ ಮೆಂಟ್ ವಲಯ

: ಜಿಲ್ಲೆಯಲ್ಲಿ ಮಂಗಳವಾರ 73 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 9 ಮಂದಿ ಗುಣಮುಖರಾಗಿದ್ದಾರೆ.

5 ಕಡೆ ಕಂಟೈನ್ಮೆಂಟ್ ವಲಯ: ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉಡುಪಿಯ ಎಂಐಟಿ ಕ್ಯಾಂಪಸ್‌ನ 7 ಹಾಗೂ 10ನೇ ಬ್ಲಾಕ್, ನ್ಯೂ ಇಂಟರ್ ನ್ಯಾಶನಲ್ ಹಾಸ್ಟೆಲ್, ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಪರ್ಕಿಸುವ ಬಳಿ ಇರುವ 2 ಅಪಾರ್ಟ್‌ಮೆಂಟ್‌ಗಳನ್ನು ಕಂಟೈನ್ಮೆಂಟ್ ವಲಯ ಮಾಡಲಾಗಿದೆ.

ಮಾಧ್ಯಮದ ಜೊತೆ ಮಾತನಾಡಿದ ಜಿಲ್ಲಾಧಿಕಾರಿ ಕೂರ್ಮಾ ರಾವ್, ಕೋವಿಡ್ ಸೋಂಕಿತರ ಸಂಖ್ಯೆ ಅಲ್ಪ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶೈಕ್ಷಣಿಕ ಕೇಂದ್ರಗಳಲ್ಲಿ ಪರೀಕ್ಷೆ ಪ್ರಮಾಣ ಹೆಚ್ಚಿಸಿದ್ದೇವೆ. ಮುಖ್ಯವಾಗಿ ಮಣಿಪಾಲದಲ್ಲಿ ಹೊರ ರಾಜ್ಯ ಮತ್ತು ಹೊರ ದೇಶಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಅಲ್ಲಿ ಹೆಚ್ಚು ಹೆಚ್ಚು ಪರೀಕ್ಷೆಗಳನ್ನು ನಡೆಸಲು ಆರೋಗ್ಯ ಇಲಾಖೆ ಗಮನ ಹರಿಸುತ್ತಿದೆ ಎಂದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!