ವೃತ್ತಿಪರ ಮಹಿಳೆಯರಿಗೆ ಆಯುರ್ವೇದ ಉಪಚಾರಗಳು

ವೇದ ಕಾಲದಿಂದಲೂ ಕೂಡ ಮಹಿಳೆಯರಿಗೆ ಸಮಾಜದಲ್ಲಿ ಪ್ರಾಮುಖ್ಯತೆ ಕೊಡಲಾಗಿತ್ತು. ಅಥರ್ವ ವೇದದಲ್ಲಿ ಮಹಿಳೆಯರ ಪ್ರಾಮುಖ್ಯತೆಯನ್ನು ಉಲ್ಲೇಖಿಸಲಾಗಿದೆ .

यत्र नार्यस्तु पूज्यन्ते रमन्ते तत्र देवताः ।
यत्रैतास्तु न पूज्यन्ते सर्वास्तत्राफलाः क्रियाः ॥

ಯಾರು ಮಹಿಳೆಯರಿಗೆ ಗೌರವ ನೀಡ್ತಾರೆ ಅವರಿಗೆ ಸದಾ ದೇವರ ಕೃಪೆ ಇರುತ್ತೆ ಮತ್ತು ಅವರ ಎಲ್ಲ ಕೆಲಸ ಕಾರ್ಯಗಳು ಸುಗಮವಾಗಿ ಸಾಗುತ್ತದೆ . ಇಂದಿನ ಕಾಲದ ಮಹಿಳೆಯರು ಸಾಂಸಾರಿಕ ಹಾಗೂ ಸಾಮಾಜಿಕ ಜವಾಬ್ದಾರಿಗಳನ್ನು ನಿರ್ವಹಿಸುತ್ತಾ ಇರುತ್ತಾರೆ. ಹಾಗಾಗಿ ಅವರಿಗೆ ಮನೆ ಮತ್ತು ವೃತ್ತಿ ಜೀವನದ ಒತ್ತಡಗಳನ್ನು ನಿಭಾಯಿಸಬೇಕಾಗುತ್ತದೆ. ಇದರಿಂದ ಅವರಿಗೆ ಬಹಳಷ್ಟು ಆರೋಗ್ಯ ಸಮಸ್ಯೆಗಳು ಬರುವ ಸಾಧ್ಯತೆಗಳು ಇರುತ್ತದೆ. ಬಾಲ್ಯದಿಂದ ವೃದ್ದಾಪ್ಯದವರೆಗೂ ಬರುವಂತಹ ಆರೋಗ್ಯ ಸಮಸ್ಯೆಗಳು ಅಂದರೆ ಋತುಚಕ್ರದ ಸಮಸ್ಯೆಗಳು, ಹಾರ್ಮೋನ್ಗಳ ಅಸಮತೋಲನಗಳು, ಅಪೌಷ್ಟಿಕತೆ, ಮೆಟಬಾಲಿಸಂ ಸಮಸ್ಯೆ ಗಳು, ಬಂಜೆತನದ ಸಮಸ್ಯೆಗಳು, ಸಂಧಿವಾತ, ಸ್ಥನ ಮತ್ತು ಒವೇರಿಯನ್ ಕ್ಯಾನ್ಸರ್, ಗರ್ಭಧಾರಣೆ ಮತ್ತು ಆ ಸಮಯದಲ್ಲಿ ಬರುವಂತಹ ತುರ್ತು ಪರಿಸ್ಥಿತಿಗಳು ಇತ್ಯಾದಿ .

ಆಯುರ್ವೇದದಲ್ಲಿ, ಮಹಿಳೆಯರ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಬಹಳಷ್ಟು ಗಿಡ ಮೂಲಿಕೆಗಳ ಉಲ್ಲೇಖ ಇದೆ.
1) ಶತಾವರಿ : ಹಾರ್ಮೋನ್ಗಳ ಅಸಮತೋಲನಗಳನ್ನು ಸರಿಪಡಿಸುವಂತಹ ಶಕ್ತಿ ಶತಾವರಿ ಯಲ್ಲಿ ಇದೇ. ಹಾಗಾಗಿ ಇದನ್ನು                      ಬಂಜೆತನದ ಸಮಸ್ಯೆ, ಅನಿಯಮಿತ ಋತುಸ್ರಾವ, ಸ್ತನಪಾನ, ಇತ್ಯಾದಿ .
2) ಅಶೋಕ : ಅತಿ ಋತುಸ್ರಾವ, ಗರ್ಭ ರಕ್ತ ಸ್ರಾವ ಪಾನ ಸಮಸ್ಯೆಗಳಲ್ಲಿ ಈ ಗಿಡಮೂಲಿಕೆ ತುಂಬಾ ಸಹಾಯಕಾರಿ .
3) ಆಮಲಕಿ : ಉದ್ವೇಗ, ರಕ್ತಹೀನತೆ, ಅಸ್ಥಿರಂಧ್ರತೆ ಇತ್ಯಾದಿ ಕಾಯಿಲೆಗಳಲ್ಲಿ ಆಮಲಕಿ ಬಹಳ ಉಪಯುಕ್ತ.
4) ಯಷ್ಟಿಮಧು : ಮೂತ್ರದ ಅಸ್ವಸ್ಥತೆಗಳು ಹಾಗೂ ಪ್ರಿ ಮೆನ್ಸ್ಟ್ರುವಲ್ ಸಿಂಡ್ರೋಮ್ ನಂತಹ ಕಾಯಿಲೆಗಳಲ್ಲಿ ಈ ಗಿಡ ಮೂಲಿಕೆ                     ಬಹಳ ಉಪಯುಕ್ತ.
5) ಕುಮಾರಿ : ಅತಿಯಾದ ಬಿಳಿ ಸ್ರಾವದ ಸಮಸ್ಯೆಗಳಲ್ಲಿ ಕುಮಾರಿ ಬಹಳ ಉಪಯುಕ್ತ .

ಪ್ರಮುಖವಾಗಿ ಆಯುರ್ವೇದ ಚಿಕಿತ್ಸೆಗಳು ಅಗ್ನಿ ದೀಪನ ಆಮ ಪಾಚನ ಮತ್ತು ಶೋಧನ ಕ್ರಿಯೆಗಳಿಗೆ ಹೆಚ್ಚಾಗಿ ಕೇಂದ್ರೀ ಕರಿಸಿದೆ.ಅಶೋಕ, ಶತಾವರಿ, ಗೂಡುಚಿ, ಜೀವಂತಿ, ಪುನರ್ನವ ಇಂತಹ ಗಿಡಮೂಲಿಕೆಗಳ ಉಲ್ಲೇಖವು ಮಹಿಳೆಯರ ಸಮಸ್ಯೆಗಳಿಗೆ ಉಲ್ಲೇಖಿಸಲಾಗಿದೆ .

ಕೆಲವೊಂದು ಯೋಗಾಸನಗಳು ; ಧನುರಾಸನ ,ಉಷ್ಟಾಸನ ಜಾನುಶೀರ್ಷಾಸನ ,ಭುಜಂಗಾಸನ ಇತ್ಯಾದಿಗಳ ನಿಯಮಿತ ಅಭ್ಯಾಸಗಳಿಂದ ಋತುಚಕ್ರದ ಕಾಲದಲ್ಲಿ ಬರುವಂಥ ಸಮಸ್ಯೆ ಗಳನ್ನು ಪರಿಹಾರ ಮಾಡಿಕೊಳ್ಳಬಹುದು . ಇದಲ್ಲದೆ ಪ್ರಾಣಾಯಾಮಗಳು ,ಪ್ರಮುಖವಾಗಿ ನಾಡಿ ಶುದ್ಧಿ ಪ್ರಾಣಾಯಾಮ, ಭ್ರಾಮರಿ, ಓಂಕಾರ ಇವೆಲ್ಲದರ ನಿಯಮಿತ ಅಭ್ಯಾಸದಿಂದ ಖಿನ್ನತೆ, ಹಾರ್ಮೋನ್ ಗಳ ಅಸಮತೋಲನಗಳನ್ನು ನಿವಾರಿಸಿಕೊಳ್ಳಬಹುದು.

Leave a Reply