ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಪಾಸಿಟ್ರಾನ್ ಎಮಿಷನ್ ಟೊಮೊಗ್ರಫಿ ಮತ್ತು ಕಂಪ್ಯೂಟರೀಕೃತ ಟೊಮೊಗ್ರಫಿ (PET-CT) ಉದ್ಘಾಟನೆ

​​ಮಣಿಪಾಲ್ ಹೆಲ್ತ್‌ಮ್ಯಾಪ್ ಡಯಾಗ್ನೋಸ್ಟಿಕ್ ಪ್ರೈವೇಟ್ ಲಿಮಿಟೆಡ್ ನಿಂದ – ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಪಾಸಿಟ್ರಾನ್ ಎಮಿಷನ್ ಟೊಮೊಗ್ರಫಿ ಮತ್ತು ಕಂಪ್ಯೂಟರೀಕೃತ ಟೊಮೊಗ್ರಫಿ (PET-CT) ಉದ್ಘಾಟನೆ. ಮಣಿಪಾಲ್ ಹೆಲ್ತ್‌ಮ್ಯಾಪ್ ಡಯಾಗ್ನೋಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಅತ್ಯಾಧುನಿಕ ಪೊಸಿಟ್ರಾನ್ ಎಮಿಷನ್ ಟೊಮೊ ಗ್ರಫಿ (PET-CT) ಸೌಲಭ್ಯವನ್ನು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಶನಿವಾರ ಉದ್ಘಾಟಿಸಲಾಯಿತು. ಪೆಟ್/ಸಿಟಿ ಎಂಬುದು ಒಂದು ನ್ಯೂಕ್ಲಿಯರ್ ಮೆಡಿಸಿನ್ ತಂತ್ರವಾಗಿದ್ದು, ಒಂದೇ ಮಷೀನ್ ನಲ್ಲಿ, ಪಾಸಿಟ್ರಾನ್ ಎಮಿಷನ್ ಟೊಮೊಗ್ರಫಿ (PET) ಸ್ಕ್ಯಾನರ್ ಮತ್ತು ಎಕ್ಸರೇ ಕಂಪ್ಯೂಟೆಡ್ ಟೊಮೊಗ್ರಫಿ (CT) ಸ್ಕ್ಯಾನರ್ ನ್ನು ಸಂಯೋಜಿಸುತ್ತದೆ, ಒಂದೇ ಅವಧಿಯಲ್ಲಿ ಎರಡೂ ಸಾಧನಗಳಿಂದ ಅನುಕ್ರಮ ಚಿತ್ರಗಳನ್ನು ಪಡೆದುಕೊಳ್ಳುತ್ತದೆ. ನಂತರ ಒಟ್ಟಿಗೆ ಸಂಯೋಜಿತ ಸೂಪರ್‌ಪೋಸ್ಡ್ (ಸಹ-ನೋಂದಾ ಯಿತ) ಚಿತ್ರವನ್ನು ನೀಡು ತ್ತದೆ.
ಪಾಸಿಟ್ರಾನ್ ಎಮಿಷನ್ ಟೊಮೊಗ್ರಫಿ ಮತ್ತು ಕಂಪ್ಯೂಟರೀಕೃತ ಟೊಮೊಗ್ರಫಿ (PET-CT) ಅನ್ನು ಮಣಿಪಾಲ ಶಿಕ್ಷಣ ಮತ್ತು ವೈದ್ಯಕೀಯ ಸಮೂಹದ ಅಧ್ಯಕ್ಷರಾದ ಡಾ.ರಂಜನ್ ಆರ್ ಪೈ ಉದ್ಘಾಟಿಸಿದರು, ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ) ಯ ಸಹ ಕುಲಾಧಿಪತಿಗಳಾದ ಡಾ.ಎಚ್.ಎಸ್. ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು, ಮಾಹೆ ಮಣಿಪಾಲದ ಉಪಕುಲಪತಿ ಲೆ. ಜ. ಡಾ. ವೆಂಕಟೇಶ್ ಅತಿಥಿಗಳಾಗಿ ಪಾಲ್ಗೊಂಡಿದ್ದರು, ಮಾಹೆ ಮಣಿಪಾಲದ ಕುಲಸಚಿವರಾದ ಡಾ . ನಾರಾಯಣ ಸಭಾಹಿತ್, ಕೆ ಎಂ ಸಿ ಡೀನ್ ಡಾ.ಶರತ್ ಕೆ ರಾವ್, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮುಖ್ಯ ನಿರ್ವಹಣಾಧಿಕಾರಿ  ಸಿ ಜಿ ಮುತ್ತಣ ಮತ್ತು ವೈದ್ಯಕೀಯ ಅಧೀಕ್ಷಕರಾದ ಡಾ.ಅವಿನಾಶ್ ಶೆಟ್ಟಿ, ಹೆಲ್ತ್‌ಮ್ಯಾಪ್ ಡಯಾಗ್ನೋಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್‌ನ ಪ್ರಾದೇಶಿಕ ಮುಖ್ಯಸ್ಥ ಡಾ.ಸಂದೀಪ್ ಬಲ್ಲಾಳ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಎಂ. ಡಿ. ವೆಂಕಟೇಶ್ ಅವರು, “ನ್ಯೂಕ್ಲಿಯರ್ ಮೆಡಿಸಿನ್, ವೈದ್ಯಕೀಯ ಕ್ಷೇತ್ರದ ವಿಶೇಷ ಶಾಖೆಯಾಗಿದ್ದು, ಇದು ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ ರೋಗನಿರ್ಣಯ ಮತ್ತು ಚಿಕಿತ್ಸೆಗಾಗಿ ರೇಡಿಯೊ ನ್ಯೂಕ್ಲೈಡ್‌ಗಳನ್ನು ಬಳಸುತ್ತದೆ. ರೋಗದ ನಿರ್ದಿಷ್ಟ ಲಿಗಂಡ್ ಅನ್ನು ರೇಡಿಯೊನ್ಯೂಕ್ಲೈಡ್‌ಗೆ ಜೋಡಿಸಲಾಗಿದ್ದು, ಇದನ್ನು ರೋಗಿ ಗಳಿಗೆ ಚುಚ್ಚುಮದ್ದಾಗಿ ನೀಡಿದಾಗ, ರೋಗ ಪೀಡಿತ ಕೋಶ / ಅಂಗದ ಮೇಲೆ ವ್ಯಕ್ತಪಡಿಸಿದ ನಿರ್ದಿಷ್ಟ ಗ್ರಾಹಕವನ್ನು ಪತ್ತೆ ಹಚ್ಚಿ ಅದಕ್ಕೆ ಅಂಟಿಕೊಳ್ಳುತ್ತದೆ ಮತ್ತು ಬಂಧಿಸುತ್ತದೆ. ಸ್ಪೆಕ್ಟ್/ಸಿ ಟಿ ಮತ್ತು ಪೆಟ್/ಸಿ ಟಿ ಗಳಂತಹ ಎರಡು ಸುಧಾರಿತ ಇಮೇಜಿಂಗ್ ಸಾಧನಗಳನ್ನು ರೋಗನಿರ್ಣಯದ ಉದ್ದೇಶಕ್ಕಾಗಿ ಬಳಸಲಾಗುತ್ತದೆ. ಕಸ್ತೂರ್ಬಾ ಆಸ್ಪತ್ರೆ ಮಣಿಪಾಲವು ಈಗ ಈ ಹೊಸ ಯಂತ್ರ ದೊಂದಿಗೆ ಅತ್ಯಾಧುನಿಕ ಸ್ಪೆಕ್ಟ್/ಸಿ ಟಿ ಮತ್ತು ಪೆಟ್/ಸಿ ಟಿ ಎರಡನ್ನೂ ಹೊಂದಿದೆ. ರೋಗಗಳ ನಿಖರತೆ ಪತ್ತೆಹಚ್ಚಲು ಮತ್ತು ಸಮ ಯೋಚಿತ ಚಿಕಿತ್ಸೆಯನ್ನು ನೀಡಲು PET/CT ಯಂತಹ ಸೌಲಭ್ಯ ವೈದ್ಯರಿಗೆ ಬಹಳ ಮುಖ್ಯ.” ಎಂದರು ಮತ್ತು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಅತ್ಯಾಧುನಿಕ ಈ ಸೌಲಭ್ಯವನ್ನು ಪರಿಚಯಿಸಿದ್ದಕ್ಕಾಗಿ ಅವರು ಹೆಲ್ತ್ ಮ್ಯಾಪ್ ತಂಡವನ್ನು ಅಭಿನಂದಿಸಿದರು”.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಎಚ್.ಎಸ್. ಬಲ್ಲಾಳ್ ಅವರು, ಕಸ್ತೂರ್ಬಾ ಆಸ್ಪತ್ರೆಯಲ್ಲಿ ಸುಧಾರಿತ ಪಾಸಿಟ್ರಾನ್ ಎಮಿಷನ್ ಟೊಮೊಗ್ರಫಿ (PET-CT)ಸೌಲಭ್ಯವನ್ನು ಪರಿಚಯಿಸಿದ್ದಕ್ಕಾಗಿ ಹೆಲ್ತ್ ಮ್ಯಾಪ್ ಡಯಾಗ್ನೋಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್ (HDPL) ನ್ನು ಅಭಿನಂದಿಸಿದರು ಮತ್ತು ಮಾತನಾಡುತ್ತ, “PET” ಭಾಗವು ರೋಗದ ಕ್ರಿಯಾತ್ಮಕ ಅಂಶವನ್ನು, ರೋಗಪೀಡಿತ ಜೀವಕೋಶದ ಯಾವುದೇ ಅಸಹಜ ಕ್ರಿಯೆ, ಆಣ್ವಿಕ ಪರಸ್ಪರ ಕ್ರಿಯೆಗಳು ಮತ್ತು ಮಾನವ ದೇಹದೊಳಗಿನ ಮಾರ್ಗಗಳನ್ನು ಪತ್ತೆ ಮಾಡುತ್ತದೆ. CT ಭಾಗವು ರೋಗಪೀಡಿತ ಭಾಗದ ಅಂಗರಚನಾ ಗುಣಲಕ್ಷಣಗಳನ್ನು ನೀಡುತ್ತದೆ. ಎರಡು ಒಟ್ಟಾಗಿ ಪ್ರಬಲವಾದ ಇಮೇಜಿಂಗ್(ಚಿತ್ರಣ) ಸಾಧನವಾಗಿ ವಿವಿಧ ರೋಗಗಳ ನಿಖರ ನಿರ್ವಹಣೆಗೆ ಸಹಾಯ ಮಾಡುತ್ತದೆ.” ಎಂದರು.

ಡಾ. ಸಂದೀಪ್ ಬಲ್ಲಾಳ್ ಅವರು ಮಣಿಪಾಲ್ ಹೆಲ್ತ್‌ಮ್ಯಾಪ್ ಡಯಾಗ್ನೋಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್ ಬಗ್ಗೆ ಅವಲೋಕನ ನೀಡಿದರು. ನ್ಯೂಕ್ಲಿಯರ್ ಮೆಡಿಸಿನ್ ವಿಭಾಗದ ಮುಖ್ಯಸ್ಥರಾದ ಡಾ. ಸುಮೀತ್ ಸುರೇಶ್ ಮಾಲಾಪುರೆ ಅವರು ಅತಿಥಿಗಳಿಗೆ ಹೊಸದಾಗಿ ಉದ್ಘಾಟನೆಗೊಂಡ ಸುಧಾರಿತ PET-CT ಉಪಕರಣದ ಬಗ್ಗೆ ಸಂಕ್ಷಿಪ್ತ ಪರಿಚಯ ನೀಡಿದರು.

 
 
 
 
 
 
 
 
 
 
 

Leave a Reply