ಉಡುಪಿ ಆದರ್ಶ ಸಮೂಹ ಶಿಕ್ಷಣ ಸಂಸ್ಥೆ

ಉಡುಪಿ: ಆದರ್ಶ ನರ್ಸಿಂಗ್ ಕಾಲೇಜಿನಲ್ಲಿ ದೀಪ ಪ್ರಜ್ವಲನ ಕಾರ್ಯಕ್ರಮ ಹಾಗೂ ಆದರ್ಶ ಇನ್ಸ್ಟಿಟ್ಯೂಟ್ ಅಫ್ ಪ್ಯಾರಮೆಡಿಕಲ್ ಸೈನ್ಸ್ ನ 2022-23ರ ಶೈಕ್ಷಣಿಕ ವರ್ಷದಹೊಸ ವಿದ್ಯಾರ್ಥಿಗಳ ದಿನಾಚರಣೆಯು ಆದರ್ಶ ಸಮೂಹ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

ಮಾಹೆಯ ಉಪ ಕುಲಪತಿಗಳಾದ ಡಾ. ಎಚ್. ಎಸ್. ಬಲ್ಲಾಳ್‌ರವರು ದೀಪ ಬೆಳಗಿಸಿ ಮಾತನಾಡಿ ನರ್ಸಿಂಗ್ ವ್ರತ್ತಿಯು ಸಮಾಜದ ಹಾಗು ಜನರ ನಡುವೆ ಮಾಡುವಂತಹ ಶ್ರೇಷ್ಟ ವೃತ್ತಿಯಾಗಿದ್ದು, ಇವರು ಅಸ್ಪತ್ರರಯಲ್ಲಿ ವೈದ್ಯರಿಗಿಂತ ಹೆಚ್ಚಿನ ಸಮಯ ರೋಗಿಯೊಂದಿಗೆ ಇರುತ್ತಾರೆ.
ಅಲ್ಲದೆ ಕೋವಿದ್  ಸಮಯದಲ್ಲಿ ಇವರು ಜಗತ್ತಿಗೆ ನೀಡಿದ ಸೇವೆಯನ್ನು ಯಾರೂ ಮರೆಯು ವಂತಿಲ್ಲ. ಇಂದು ಜಗತ್ತಿನಾದ್ಯಂತ ನರ್ಸಿಂಗ್ ಹಾಗೂ ಅರೆವೈದ್ಯಕೀಯ ಕೋರ್ಸ್ ಗಳಿಗೆ ಉತ್ತಮ ಬೇಡಿಕೆ ಇದ್ದು, ಉದ್ಯೋಗ ಸಿಕ್ಕಲು ಉತ್ತಮ ಅವಕಾಶವಿರುತ್ತದೆ ಎಂದುರು.
ಡಾ. ಜಿ ಎಸ್. ಚಂದ್ರಶೇಖರ್ ರವರು ಮಾತನಾಡುತ್ತಾ ಆಸುಪಾಸಿನ ಮಕ್ಕಳಿಗೆ ಉತ್ತಮ ಹಾಗೂ ಅಂತರಾಷ್ಟೀಯ ಗುಣಮಟ್ಟದ ವಿದ್ಯಾಭ್ಯಾಸ ನೀಡುವ ಉದ್ದೇಶದಿಂದ ಹಾಗೂ ವಿದ್ಯಾರ್ಥಿ ಗಳ ಕಲಿಕೆಗೆ ಬೇಕಾದ ಅಧುನಿಕ ತಾಂತ್ರಿಕ ಉಪಕರಣಗಳೊಂದಿಗೆ ಮತ್ತು ನುರಿತ ಶಿಕ್ಷಕವರ್ಗ ದೊಂದಿಗೆ ಆದರ್ಶ ಸಮೂಹ ಸಂಸ್ಥೆಗಳನ್ನು ಜನಸಾಮಾನ್ಯರಿಗೆ ಎಟಕುವಂತೆ ಸ್ಥಾಪಿಸಿದ್ದೇವೆ ಎಂದು ತಿಳಿಸಿದರು.
ವಿಮಲ ಚಂದ್ರಶೇಖರ್,  ಡಾ. ಮೊಹನ್‌ದಾಸ್ ಶೆಟ್ಟಿ ಮೂಳೆತಜ್ಜ, ಹಾಗೂ ಡಾ. ಸುಮೀತ್ ಕೌರ್ ದಿಲ್‌, ವಿಶ್ರಾಂತ ಪೊಲೀಸ್ ಅಧಿಕಾರಿ ಪ್ರಭುದೇವ ಮಾನೆ, ಆದರ್ಶ ಇನ್ಸ್ಟಿಟ್ಯ್ ಅಪ್ ಪ್ಯಾರ ಮೆಡಿಕಲ್ಸ್ ಸೈನ್ಸ್ ನ ಪ್ರಾಂಶುಪಾಲರು,  ಅಥಿ ಗಳಾಗಿ ಭಾಗವಹಿಸಿದರು.

ಆದರ್ಶ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಆಶಾದೇವಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಭೋದಿಸಿದರು. ಅಶ್ವಿನಿಯವರು ಸ್ವಾಗತಿಸಿದರು. ದಿವ್ಯ ಶೆಟ್ಟಿ ನಿರೂಪಿಸಿದರು. ವಿನಯ ಡಿʼಸೋಜ ವಂದಿಸಿದರು. ಡಾ. ಸತೀಶ್ ಮಲ್ಯ, ಆಡಳಿತಾಧಿಕಾರಿ ಹಾಗೂ ಉಪ ಪ್ರಾಂಶುಪಾಲೆ ಸುದೀನ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply