ಉಡುಪಿ ಜಿಲ್ಲೆಯಲ್ಲಿ 735 ಕೊರೋನಾ ವರದಿಗಳು ನೆಗೆಟಿವ್

ಉಡುಪಿ: ಇಂದು ಜಿಲ್ಲೆಯಲ್ಲಿ ಒಟ್ಟು 735 ವರದಿಗಳು ನೆಗೆಟಿವ್ ಬಂದಿದ್ದು, 254 ಪಾಸಿಟಿವ್ ದೃಢಗೊಂಡಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 11513 ಕ್ಕೆ ಏರಿಕೆಯಾಗಿದೆ.

ಸೋಂಕಿತರಲ್ಲಿ ಉಡುಪಿಯ 145, ಕುಂದಾಪುರದ 61, ಕಾರ್ಕಳದ 40 ಹಾಗೂ ಇತರೆ ಜಿಲ್ಲೆಗಳ 8 ರೋಗಿಗಳು ಇದ್ದಾರೆ.

ಇಂದು ಜಿಲ್ಲೆಯಲ್ಲಿ 1029 ಜನರ ಗಂಟಲ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಜಿಲ್ಲೆಯಲ್ಲಿ ಭಾನುವಾರ 195 ಮಂದಿ ಗುಣಮುಖರಾಗಿದ್ದು ಇದುವರೆಗೂ 8798 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ 2620 ಸಕ್ರಿಯ ಪ್ರಕರಣಗಳು ಇವೆ. ಜಿಲ್ಲೆಯಲ್ಲಿ ಇದುವರೆಗೆ ಕೊರೋನಾದಿಂದ ಒಟ್ಟು 95 ಮಂದಿ ಸಾವನಪ್ಪಿದ್ದಾರೆ.

Leave a Reply