ಉಡುಪಿ ವಿದ್ಯೋದಯ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಅಪೂರ್ವ ಸಾಧನೆ

ವಿದ್ಯೋದಯ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ವಿನೂತನ ಫಲಿತಾಂಶ ಪದ್ಧತಿಯಲ್ಲಿ ವಿದ್ಯಾರ್ಥಿಗಳ ಅಪೂರ್ವ ಸಾಧನೆ

ವಿದ್ಯೋದಯ ಟ್ರಸ್ಟ್ (ರಿ.)ನ ಅಂಗಸಂಸ್ಥೆಯಾದ ವಿದ್ಯೋದಯ ಪದವಿ ಪೂರ್ವ ಕಾಲೇಜು 2020-21 ನೇ ಸಾಲಿನ ದ್ವಿತೀಯ ಪಿಯುಸಿ ವಿನೂತನ ಫಲಿತಾಂಶ ಪದ್ಧತಿಯಲ್ಲಿ 10 ವಿದ್ಯಾರ್ಥಿಗಳು 600ಕ್ಕೆ 600 ಅಂಕ ಪಡೆದ ಸಾಧನೆ ಮಾಡಿರುತ್ತಾರೆ. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಅಪೇಕ್ಷಾ, ಭಾರ್ಗವಿ ಬೋರ್ಕಾರ್, ಧನ್ಯ, ಧನ್ಯತಾ ಎನ್., ಕೀರ್ತನಾ, ಪ್ರಣಯ್ ಯು. ಶೆಟ್ಟಿ, ಸಂಜನಾ ಆರ್. ಶೇಟ್, ಸಿಂಚನಾ ಪೂಜಾರಿ, ತೇಜಸ್ವಿ ಮತ್ತು ವೈಷ್ಣವಿ ಶೇ 100 (600/600) ಫಲಿತಾಂಶ ದಾಖಲಿಸಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಈ ಬಾರಿ 324 ವಿದ್ಯಾರ್ಥಿಗಳಲ್ಲಿ 190 ವಿದ್ಯಾರ್ಥಿಗಳ ವಿಶಿಷ್ಟ ಶ್ರೇಣಿಯಲ್ಲಿ, 134 ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು; ವಾಣಿಜ್ಯ ವಿಭಾಗದಲ್ಲಿ 158 ವಿದ್ಯಾರ್ಥಿಗಳಲ್ಲಿ 37 ವಿಶಿಷ್ಟ ಶ್ರೇಣಿಯಲ್ಲಿ 107 ಪ್ರಥಮ ಶ್ರೇಣಿಯಲ್ಲಿ ಮತ್ತು 14 ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಸಂದೀಪ್ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಸಾಧನೆಗೈದ ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ ಮಂಡಳಿ, ಬೋಧಕ-ಬೋಧಕೇತರ ಸಿಬ್ಬಂದಿಯವರು ಅಭಿನಂದಿಸಿದ್ದಾರೆ

 
 
 
 
 
 
 
 
 
 
 

Leave a Reply