ಆಹಾರ ವಿಷಯುಕ್ತವಾಗುವುದನ್ನು ತಡೆಗಟ್ಟಲು ಆಹಾರ ಸುರಕ್ಷತಾ ಕಾಯಿದೆಗಳ ಅನುಷ್ಠಾನ ಅತ್ಯಗತ್ಯ- ಪ್ರೊ.ಸುಬ್ರಹ್ಮಣ್ಯ. ಟಿ.ಆರ್.

ಉಡುಪಿ:ಕೃಷಿಯಲ್ಲಿ ಅತಿಯಾದ ಕ್ರಿಮಿನಾಶಕ ಮತ್ತು ರಾಸಾಯನಿಕಗಳ ಬಳಕೆ ಮತ್ತು ಆಹಾರ ಕಲಬೆರಕೆಯಿಂದ ನಾವು ದಿನನಿತ್ಯ ಸೇವಿಸುವ ಆಹಾರವು ವಿಷಯುಕ್ತವಾಗಿದ್ದು ಇದನ್ನು ತಡೆಗಟ್ಟಲು ಸಂಸತ್ತು ಜಾರಿಗೆ ತಂದಿರುವ ಆಹಾರ ಸುರಕ್ಷತೆಮತ್ತು ಮಾನದಂಡಗಳು ಅಧಿನಿಯಮ, 2006ನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕಾಗಿದೆ ಎಂದು ಬೆಂಗಳೂರಿನ ಸಿ.ಎಂ.ಆರ್. ವಿಶ್ವವಿದ್ಯಾನಿಲಯದಸ್ಕೂಲ್ ಆಫ್ ಲೀಗಲ್ ಸ್ಟಡೀಸ್ ನ ಮುಖ್ಯಸ್ಥರು ಮತ್ತು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಡಾ. ಸುಬ್ರಹ್ಮಣ್ಯ ಟಿ. ಆರ್ ಕರೆ ನೀಡಿದರು.

ಉಡುಪಿಯ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದಲ್ಲಿ ನಡೆದ ಆಹಾರ ಸುರಕ್ಷತೆ ಮತ್ತು ಗ್ರಾಹಕ ಸಂರಕ್ಷಣೆ ಎಂಬ ವಿಷಯದ ಮೇಲಿನ 15 ದಿನಗಳ ಅಲ್ಪಾವಧಿ ಆನ್ ಲೈನ್ ಕೋರ್ಸ್ ನ ಸಮಾರೋಪ ಸಮಾರಂಭ ದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.ಮೇ 20 ರಿಂದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಪ್ರೊ.ಡಾ.ಈಶ್ವರ ಭಟ್ ರಿಂದ ಉದ್ಘಾಟಿಸಲ್ಪಟ್ಟ ಈ ಆಹಾರ ಸುರಕ್ಷತೆ ಮತ್ತು ಗ್ರಾಹಕ ಸಂರಕ್ಷಣೆ ಎಂಬ ವಿಷಯದ ಮೇಲಿನ 15 ದಿನಗಳ ಅಲ್ಪಾವಧಿ ಕೋರ್ಸ್ ಪ್ರತಿ ದಿನ ಕರ್ನಾಟಕ ಮತ್ತು ಕೇರಳ ದ ಕಾನೂನು ಅಧ್ಯಾಪಕರು, ವಕೀಲರು, ಸರಕಾರೇತರ ಸಂಸ್ಥೆಗಳ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸಗಳಿದ್ದು, ವಿವಿಧ ರಾಜ್ಯಗಳ ಹಾಗೂ ವೃತ್ತಿಪರರು ಇದರಲ್ಲಿ ವಿದ್ಯಾರ್ಥಿಗಳಾಗಿ ಭಾಗವಹಿಸಿದ್ದರು. 

ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ‌ ಡಾ. ನಿರ್ಮಲ ಕುಮಾರಿ ಕೋರ್ಸ್ ಮುಗಿಸಿದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದರು. ಕಾರ್ಯಕ್ರಮಕ್ಕೆ ಕಾಲೇಜಿನ ಪ್ರಾಧ್ಯಾಪಕ ರೋಹಿತ್ ಅಮೀನ್ ಸ್ವಾಗತಿಸಿ, ರಘುನಾಥ್ ಕೆ.ಎಸ್. ವಂದಿಸಿದರು.ಪ್ರೀತಿ ಹರೀಶರಾಜ್ ಕಾರ್ಯಕ್ರಮ ನಿರೂಪಿಸಿದರು. ಈ ಸಂಪೂರ್ಣ ಕಾರ್ಯಕ್ರಮದ ಸಂಯೋಜಕಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಜಯಮೋಲ್ ಉಪಸ್ಥಿತರಿದ್ದರು .

 
 
 
 
 
 
 
 
 
 
 

Leave a Reply