ಯುಪಿಎಂಸಿ- ರಾಷ್ಟ್ರೀಯ ಏಕತಾ ದಿನಾಚರಣೆ

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿ ಯಲ್ ಕಾಲೇಜಿನ ಎನ್.ಎಸ್. ಎಸ್ ಘಟಕದ ವತಿಯಿಂದ ‘ಸಂಯುಕ್ತ ಭಾರತ, ಸಶಕ್ತ ಭಾರತ’ ಎಂಬ ಸರ್ದಾರ್ ವಲ್ಲಭ ಭಾಯಿ ಪಟೇಲ್ ರವರ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಏಕತಾ ದಿನಾಚರಣೆ ಹಮ್ಮಿಕೊಳ್ಳಲಾಯಿತು.

ಗುಜರಾತಿನ ಕೆವಾಡಿಯದಲ್ಲಿ ರಾಷ್ಟ್ರೀಯ ಏಕತಾ ದಿವಸ ಪ್ರಯುಕ್ತವಾಗಿ ಭಾರತದ ಪ್ರಧಾನ ಮಂತ್ರಿಗಳು ಸಾರಿದ ಏಕತಾ ದಿನಾಚರಣೆಯ ಸಂದೇಶ ಹಾಗೂ ನನ್ನ ಮಣ್ಣು ನನ್ನ ದೇಶ ಎಂಬ ವಿಶೇಷ ಅಭಿ ಯಾನದ ಕುರಿತಾದ ಸಂದೇಶಗಳನ್ನು ಸಾಕ್ಷ್ಯಚಿತ್ರಗಳ ಜೊತೆಗೆ ಈ ಸಂದರ್ಭದಲ್ಲಿ ಬಿತ್ತರಿಸಲಾಯಿತು.

ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಆಶಾ ಕುಮಾರಿ ಅಧ್ಯಕ್ಷೀಯ ನುಡಿಯಲ್ಲಿ ಸರ್ದಾರ್ ಪಟೇಲರ ಓಕ್ಕೂಟ ವ್ಯವಸ್ಥೆಯ ಬಗ್ಗೆ ವಿವರಿಸಿದರು.

ಪ್ರಥಮ ಬಿಬಿಎ ಎನ್.ಎಸ್.ಎಸ್ ಘಟಕದ ನಾಯಕಿ ಕುಮಾರಿ ಸಿಂಚನಾ ರಾಷ್ಟ್ರೀಯ ಏಕತಾ ದಿವಸದ ಪ್ರತಿಜ್ಞೆಯನ್ನು ಬೋಧಿಸಿದರು.

ವಿದ್ಯಾರ್ಥಿ ನಾಯಕ ಪ್ರತೀಶ್ ಸ್ವಾಗತಿಸಿದರು, ಎನ್.ಎಸ್.ಎಸ್ ಘಟಕದ ಸಹ ಯೋಜನಾಧಿಕಾರಿ ಚಂದ್ರಶೇಖರ್ ವಂದಿ ಸಿದರು. ವಾಣಿಜ್ಯ ಉಪನ್ಯಾಸಕ ರಾಘವೇಂದ್ರ ಜಿ ಜಿ ಕಾರ್ಯಕ್ರಮ ನಿರೂಪಿ ಸಿದರು.

 
 
 
 
 
 
 
 
 
 
 

Leave a Reply