Janardhan Kodavoor/ Team KaravaliXpress
26.6 C
Udupi
Monday, January 30, 2023
Sathyanatha Stores Brahmavara

ಯು.ಪಿ.ಎಂ.ಸಿ- ರಕ್ಷಕ ಶಿಕ್ಷಕ ಸಂಘ ಮಹಾಸಭೆ.

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ 2022-23 ರ ಶೈಕ್ಷಣಿಕ ವರ್ಷದ ಮಹಾಸಭೆಯು ಜನವರಿ 21ರಂದು ಕಾಲೇಜಿನ ಸಭಾಭವನದಲ್ಲಿ ಜರಗಿತು. ಕಾಲೇಜಿನ ಪ್ರಾಚಾರ್ಯರಾದ ಡಾ.ಮಧುಸೂದನ ಭಟ್ ಶೈಕ್ಷಣಿಕ ವೇಳಾಪಟ್ಟಿಯ ಮೊದಲ ಅರ್ಧವರ್ಷದ ಪಠ್ಯ – ಪಠ್ಯೇತರ ಚಟುವಟಿಕೆಗಳ ಕುರಿತಾದ ವರದಿಯನ್ನು ವಾಚಿಸಿದರು. ಪೋಷಕರು ತಮ್ಮ ಮಕ್ಕಳ ಹಾಜರಾತಿ ಹಾಗು ಆಂತರಿಕ ಪರೀಕ್ಷೆಗಳ ಅಂಕಗಳನ್ನು ಪರಿಶೀಲಿಸಿದರು.

ಅನಂತರ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದು ಶ್ರೀ ಅನುಷಾ ನಾಯಕ್ ಅಧ್ಯಕ್ಷರಾಗಿ, ಸವಿತಾ ಆಚಾರ್ಯ ಕಾರ್ಯದರ್ಶಿಗಳಾಗಿ ಹಾಗೂ ಶ್ರೀಮತಿ ಜಯಾ, ಸುಜಯಾ, ಕಾಂತಿ, ವನಿತಾ, ರೇವತಿ, ಮೀನಾಕ್ಷಿ, ಶ್ರೀ ಮಧುಸೂದನ ಶೆಟ್ಟಿ, ಅಬ್ದುಲ್ ಹಮೀಜ್ಹ್, ದಿನೇಶ್, ಆಸೀಫ್ ಅಲಿ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಆಯ್ಕೆಯಾದರು. ಕಾಲೇಜಿನ ಉಪಪ್ರಾಚಾರ್ಯರಾದ ಶ್ರೀಮತಿ ಆಶಾ ಹೆಗ್ಡೆ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

ಉಪನ್ಯಾಸಕರಾದ ಶ್ರೀಮತಿ ಸುನೀತಾ ನಾಯಕ್ ಪ್ರಾರ್ಥಿಸಿದರು, ಕನ್ನಡ ಉಪನ್ಯಾಸಕ ಶ್ರೀ ಶಶಿಕಾಂತ ಶೆಟ್ಟಿ ಸ್ವಾಗತಿಸಿದರು, ವಾಣಿಜ್ಯ ಉಪನ್ಯಾಸಕಿ ಶ್ರೀಮತಿ ಜಯಲಕ್ಷ್ಮಿ ಧನ್ಯವಾದವಿತ್ತರು, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ವಾಣಿಜ್ಯ ಉಪನ್ಯಾಸಕ ಶ್ರೀ ಹರಿಕೇಶವ್ ಕಾರ್ಯಕ್ರಮ ನಿರೂಪಿಸಿದರು

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!