ಜೀವಕೇಂದ್ರಿತ ಲೋಕ ದೃಷ್ಠಿಯ ಕವಿ ಜಿಎಸ್‌ಎಸ್ ಅತ್ಯುತ್ತಮ ಸಂಘಟಕರೂ ಹೌದು – ಎಸ್‌.ಜಿ.ಸಿದ್ದರಾಮಯ್ಯ

ಕನ್ನಡದ ಮೂರೂ ಮಂದಿ ರಾಷ್ಟ್ರಕವಿಗಳು ಜೀವಕೇಂದ್ರಿತ ಲೋಕದೃಷ್ಟಿಯ ಜೊತೆಗೆ ನೆಲದ ಸಹಜ ಸಂವೇದನೆಯಾದ ಬಹುತ್ವ ಮತ್ತು ಅನೇಕತೆಯಲ್ಲಿ ನಂಬಿಕೆಯಿಟ್ಟವರು. ಜೊತೆಗೆ ಜಿಎಸ್‌ ಶಿವರುದ್ರಪ್ಪನವರು ಕವಿಯಷ್ಟೇ ಅಲ್ಲ, ಅತ್ಯುತ್ತಮ ಸಂಘಟಕರೂ ಆಗಿದ್ದವರು. ಸಂಘಟನೆ ಎಂದರೆ ಗುಂಪುಗಾರಿಕೆಯಲ್ಲ. ಗುಂಪುಗಾರಿಕೆಯಲ್ಲಿ ನಾಯಕನಾದವನು ತನಗಿಂತ ಬುದ್ಧಿವಂತರಲ್ಲದವರನ್ನು ತನ್ನ ಹಿಂಬಾಲಕರುಗಳನ್ನಾಗಿ ಇಟ್ಟುಕೊಂಡರೆ,ಸಂಘಟಕನಾದವನು ತನ್ನಷ್ಟೇ ಅಲ್ಲ, ತನಗಿಂತಲೂ ಬುದ್ಧಿವಂತರಾದವರನ್ನು ತನ್ನ ಜೊತೆಯಲ್ಲಿ ಇಟ್ಟುಕೊಂಡಿರುತ್ತಾನೆ.
ಲೋಕದಲ್ಲಿ ಎಲ್ಲೆಲ್ಲಿ ಕ್ರಾಂತಿ ನಡೆದಿದೆಯೋ ಅಲ್ಲೆಲ್ಲಾ ಮುಂಚೂಣಿಯಲ್ಲಿದ್ದುದು ಇಂತಹ ಸಂಘಟ ನೆಯೇ ಹೊರತು ಗುಂಪಲ್ಲ. ಗುಂಪುಗಾರಿಕೆಯಲ್ಲಿ ಬೆಳವಣಿಗೆ ಇಲ್ಲ. ಆದರೆ ಸಂಘಟಕನಾದವನು ಬೆಳೆಸುತ್ತಾನೆ, ಬೆಳೆಯುತ್ತಾನೆ ಮತ್ತು ಬೆಳವಣಿಗೆಗೆ ಪೂರಕವಾಗುವ ರೀತಿಯೊಳಗಡೆ ಭವಿಷ್ಯಕ್ಕೆ ಅವರನ್ನು ಪ್ರಧಾನಿಸುತ್ತಾನೆ. 
ತನ್ನ ತರಗತಿ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ಎರಡರ ಮೂಲಕವೂ ಗುರು ಶ್ರೀಕುವೆಂಪು ಹಾಕಿಕೊಟ್ಟ ಮರ‍್ಗದಲ್ಲಿಯೇ ಮುನ್ನಡೆದು ಅವರು ಹಚ್ಚಿಟ್ಟ ಹಣತೆʼಗಳ ಹೆಜ್ಜೆ ಗುರುತುಗಳು ಅಚ್ಚಳಿಯದೆ ಉಳಿದಿವೆ ಎಂದು ಜಿಎಸ್‌ ಎಸ್‌ ಪ್ರತಿಷ್ಠಾನದ ಅಧ್ಯಕ್ಷ ಎಸ್‌ ಜಿ ಸಿದ್ದರಾಮಯ್ಯ ಅವರು ರಾಷ್ಟ್ರಕವಿ ಜಿ ಎಸ್‌ ಶಿವರುದ್ರಪ್ಪ ಪ್ರತಿಷ್ಠಾನ ಬೆಂಗಳೂರು ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕ ನಿಡಿಯೂರು ಉಡುಪಿ ಇವರ ಜಂಟಿ ಆಶ್ರಯದಲ್ಲಿಮಂಗಳವಾರ ನಡೆದ ಜಿಎಸ್‌ ಎಸ್‌ ಕಾವ್ಯ ಮತ್ತು ಕಾವ್ಯಮೀಮಾಂಸೆ ಕುರಿತ ವಿಚಾರ ಸಂಕಿರಣ ಹಾಗೂ ಡಾ ಜಯಪ್ರಕಾಶ್‌ ಶೆಟ್ಟಿಯವರ ʼಅನೇಕರ ಅನೇಕಾಂತʼʼ ಪುಸ್ತಕ ಬಿಡುಗಡೆ ಕಾರ‍್ಯಕ್ರಮದ ಉದ್ಘಾಟಿನಾ ಭಾಷಣದಲ್ಲಿ ಹೇಳಿದರು.
ಕಾರ್ಯಗಾರದಲ್ಲಿ ಆಯೋಜಿತವಾದ ಗೋಷ್ಠಿಗಳಲ್ಲಿ ʼಜಿಎಸ್ಸೆಸ್‌ ಕಾವ್ಯಮೀಮಾಂಸೆʼಯ ಕುರಿತು ಕೆಂಗೇರಿ ರ‍್ಕಾರಿ ಕಾಲೇಜಿನ ಡಾ ರಾಮಲಿಂಗಪ್ಪ ಟಿ ಬೇಗೂರು ಅವರು ಜಿಎಸ್‌ ಎಸ್‌ ಕಾವ್ಯ ಕಟ್ಟಾಳಿ ಕೆಯ ತಂತ್ರಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದರು. ʼಜಿಎಸ್‌ ಎಸ್‌ ಕಾವ್ಯ ದಲ್ಲಿ ಸ್ತ್ರೀ ಸಂವೇದನೆಯ ನೆಲೆʼಗಳ ಕುರಿತು ವಿಚಾರ ಮಂಡನೆ ಮಾಡಿದ ಹಾಸನ ಸರಕಾರಿ ಕಾಲೇಜಿನ ಡಾ. ಭಾರತೀದೇವಿ ಅವರು ಮಾಡಿದರು 
ಕಾರ‍್ಯಕ್ರಮದಲ್ಲಿ ಖ್ಯಾತ ಸುಗಮ ಸಂಗೀತಕಾರ ಪುತ್ತೂರು ನರಸಿಂಹ ನಾಯಕರು ಜಿಎಸ್‌ ಎಸ್‌ ಕಾವ್ಯದ ಗೀತಗಾಯನವನ್ನು ನಡೆಸಿಕೊಟ್ಟರು. ಜೊತೆಗೆ ಕನ್ನಡ ವಿಭಾಗದ ಮುಖ್ಯಸ್ಥ ಡಾ ಜಯ ಪ್ರಕಾಶ್‌ ಶೆಟ್ಟಿಯವರ ಪ್ರಾಚೀನ ಕನ್ನಡ ಕಾವ್ಯಗಳ ಮೇಲಿನ ಕೃತಿ ʼಅನೇಕರ ಅನೇಕಾಂತʼವನ್ನು ಜಿಎಸ್‌ ಎಸ್‌ ಪ್ರತಿಷ್ಠಾನದ ಅಧ್ಯಕ್ಷ ಎಸ್‌ ಜಿ ಸಿದ್ಧರಾಮಯ್ಯ ಅವರು ಬಿಡುಗಡೆಗೊಳಿಸಿ ಪರಿಚಯಿಸಿ ದರು. ಪ್ರಾಂಶುಪಾಲ ಬಾಲಕೃಷ್ಣ ಎಸ್ ಹೆಗ್ಡೆ‌ ಅಧ್ಯಕ್ಷತೆ ವಹಿಸಿದ್ದ ಕಾರ‍್ಯಕ್ರಮದಲ್ಲಿ ಡಾ ಜಯ ಪ್ರಕಾಶ್‌ ಶೆಟ್ಟಿ ಸ್ವಾಗತದೊಂದಿಗೆ ಪ್ರಸ್ತಾವನೆಗೈದರು.
ಐಕ್ಯೂಎಸಿ ಸಂಚಾಲಕ ಡಾ ಸುರೇಶ ರೈ ಉಪಸ್ಥಿತರಿದ್ದರು. ಡಾ ವೆಂಕಟೇಶ್‌ ಮತ್ತು ಶಾಲಿನಿ ಅತಿಥಿಗಳನ್ನು ಪರಿಚಯಿಸಿ, ರತ್ನಮಾಲಾ ವಂದಿಸಿದರು..  ರಾಧಾಕೃಷ್ಣ ನಿರೂಪಿಸಿದರು.
 
 
 
 
 
 
 
 
 
 
 

Leave a Reply