ನೂತನ ಅಧ್ಯಕ್ಷ ಉದಯ ನಾಯ್ಕ್ರವರ ಸಾರಥ್ಯದ ಜೇಸಿಐ ಉಡುಪಿಸಿಟಿಯ ಪದಾಧಿಕಾರಿಗಳ ಪದ ಪ್ರಧಾನ ಸಮಾರಂಭ

ಉಡುಪಿ :- ಸಂಘ ಸಂಸ್ಥೆಗಳು ಕೇವಲ ವಾಷಿ೯ಕೋತ್ಸವಕ್ಕೆ ಸೀಮಿತವಾಗದೆ ಜನಪರ ಕೆಲಸ ಮಾಡಬೇಕಾಗಿದೆ. ಈ ರೀತಿಯ ಉತ್ತಮ ಕೆಲಸ ಮಾಡಿದಾಗ ಸಿಗುವ ಮನೋ ಆನಂದ ಸನ್ಮಾನಕ್ಕಿಂತ ಹಿರಿದು ಎಂದು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ರಾಘವೇಂದ್ರ ಕಿಣಿ ಹೇಳಿದರು.

ಅವರು ಮಾ.2ರಂದು ಉದ್ಯಾವರ ನಿತ್ಯಾನಂದ ಆಕೆ೯ಡ್ ನಲ್ಲಿ ನಡೆದ ಜೇಸಿಐ ಉಡುಪಿ ಸಿಟಿಯ ಪದಪ್ರಧಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಯೋಗ್ಯತೆಗೆ ತಕ್ಕಂತೆ ಸನ್ಮಾನ ಮಾಡಿದಾಗ ಅದಕ್ಕೆ ನಿಜವಾದ ಅಥ೯ ಬರುತ್ತದೆ ಎಂದರು.

ವಲಯಾಧ್ಯಕ್ಷೆ ಸೌಜನ್ಯ ಹೆಗ್ಡೆ, ವ್ಯಕ್ತಿತ್ವ ವಿಕಸನಕ್ಕೆ ಎಂದೇ ಜನಿಸಿದ ಜೇಸಿ ಸಂಸ್ಥೆಯ ಬಗ್ಗೆ ಮತ್ತಷ್ಟು ತಿಳಿದು ಯುವ ಜನರು ಈ ಸಂಸ್ಥೆಗೆ ಸೇರಿ ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಿ ಎಂದು ಕರೆ ನೀಡಿದರು.

ಉದ್ಯಮಿ ಸಿದ್ದರಾಜು, ನಮ್ಮ ಬದುಕಿನಲ್ಲಿ ಕಲಿತ ಪಾಠ ಶಾಲೆ ಕಾಲೇಜಿನಲ್ಲಿ ಕಲಿತ ಪಾಠಕ್ಕಿಂತ ಶ್ರೇಷ್ಠವಾದದ್ದು ಎಂದರು. ಪೂವ೯ ರಾಷ್ಟ್ರೀಯ ಉಪಾಧ್ಯಕ್ಷ ಸಂದೀಪ್ ಕುಮಾರ್, ನಮ್ಮ ಸಾಧನೆ ಗಳು ಮಾತಾಗಬೇಕು. ವ್ಯಕ್ತಿತ್ವ ವಿಕಸನವಾದರೆ ಮಾತ್ರ ಸಮಾಜದಲ್ಲಿ ನಮಗೆ ಗೌರವ ಸಿಗಲು ಸಾಧ್ಯ ಎಂದರು.

ವಲಯ ಉಪಾಧ್ಯಕ್ಷ ದೇವರಾಯ ದೇವಾಡಿಗ ಶುಭ ಹಾರೈಸಿದರು. ನೂತನ ಅಧ್ಯಕ್ಷ ಉದಯ ನಾಯ್ಕ್ ರವರು ಹಿಂದಿನ ಅಧ್ಯಕ್ಷೆ ತನುಜಾ ಮಾಬೆನ್ ರವರಿಂದ ಅಧಿಕಾರ ಸ್ವೀಕರಿಸಿದರು.
ವೇದಿಕೆಯಲ್ಲಿ ಕಾಯ೯ದಶಿ೯ ವಿಕ್ಷೀತ್ ಪೂಜಾರಿ, ಮಹಿಳಾ ಜೇಸಿಯ ನಯನಾ ನಾಯ್ಕ ಮುಂತಾದವರಿದ್ದರು.

ಈ ಸಂದಭ೯ದಲ್ಲಿ ಅನಾಥ ಶ್ರಮಗಳಲ್ಲಿ ಅಲ್ಲಿನ ವಾಸಿಗಳಿಗೆ ಉಚಿತ ಕ್ಷವ್ರ ಮಾಡುತ್ತಿರುವ ಸತೀಶ್ ಸಾಲ್ಯಾನ್, ಜಗದೀಶ್ ಶೆಟ್ಟಿ, ತನುಜಾ ಮಾಬೆನ್ ರವರನ್ನು ಸನ್ಮಾನಿಸಲಾಯಿತು. ನೂತನ ಸದಸ್ಯರಿಗೆ ಹಾಗೂ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಭೋಧಿಸಲಾಯಿತು.

 
 
 
 
 
 
 
 
 
 
 

Leave a Reply