ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಾನೂನು ಅರಿವು ಕಾರ್ಯಕ್ರಮ

ದಿನಾಂಕ 03.08.2023 ರಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ ಇಲ್ಲಿನ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಸದಸ್ಯ ಕಾರ್ಯದರ್ಶಿಯಾದ ಶ್ರೀಮತಿ ಶರ್ಮಳ ಎಸ್ ಹಾಗೂ ಹಿರಿಯ ವಕೀಲರಾದ ಶ್ರೀ ವಿತೇಶ್ ಶೆಟ್ಟಿ ಹಾಗೂ ಯುವ ವಕೀಲರಾದ ಸುಪ್ರಿತಾ ರವರು ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆ ಕೆಮ್ಮಣ್ಣು ಇಲ್ಲಿ ಮಕ್ಕಳ ಹಕ್ಕು ಪೋಕ್ಸೋ ಹಾಗೂ ಬಾಲ್ಯ ವಿವಾಹ ಕಾಯ್ದೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಮಾಡಿದರು.

ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯನಿ ಸಿಸ್ಟರ್ ಸಿಲ್ವಿಯನ್ ಎ ಸಿ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿನಿ ಶಮಿಕಾ ಸ್ವಾಗತ ಭಾಷಣ ಮಾಡಿದರು. ಶಿಕ್ಷಕಿ ಶ್ರೀಮತಿ ನಿಶಾ ವಂದನಾರ್ಪಣೆಯನ್ನು ಮಾಡಿದರು.

 
 
 
 
 
 
 
 
 
 
 

Leave a Reply