ದ.ಕ, ಉಡುಪಿ ಜಿಲ್ಲೆಗಳಿಗೆ 19ರಂದು ಚೌತಿ ರಜೆ

ದ.ಕ, ಉಡುಪಿ ಜಿಲ್ಲೆಗಳಿಗೆ 19ರಂದು ಚೌತಿ ರಜೆ: ಸರ್ಕಾರಿ‌ ಆದೇಶ

ಬೆಂಗಳೂರು, ಸೆ. 16: ಗಣೇಶ ಚತುರ್ಥಿ ಪ್ರಯುಕ್ತ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಸಪ್ಟೆಂಬರ್ 18ರ ಬದಲಾಗಿ 19ರಂದು ಮಂಗಳವಾರ ರಜೆ ನೀಡಲು ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯದಲ್ಲಿ ಗಣೇಶ ಹಬ್ಬದ ಆಚರಣೆ ದಿನದ ಕುರಿತು ಗೊಂದಲಗಳಿದ್ದು ಹಲವೆಡೆ ಸೆ. 18 ಸೋಮವಾರದಂದು ಗೌರಿ- ಗಣೇಶ ಹಬ್ಬ ಆಚರಿಸಿದರೆ, ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಬಹುತೇಕ ಮಂದಿ 19ರಂದು ಗಣೇಶನ ಹಬ್ನ ಆಚರಿಸುತ್ತಿದ್ದಾರೆ. ಸೆಪ್ಟೆಂಬರ್ 18 ರಂದು ಹಬ್ಬ ಆಚರಿಸುತ್ತಿ ದ್ದಾರೆ.

ಆದ್ದರಿಂದ ಸೆ. 19 ಮಂಗಳವಾರ ಚೌತಿ ಹಬ್ಬದ ಸರ್ಕಾರಿ ನೀಡುವಂತೆ ಸಾರ್ವಜನಿ ಕರು ಬಯಸಿದ್ದು, ಜನಪ್ರತಿನಿಧಿಗಳೂ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮುಖ್ಯ ಕಾರ್ಯ ದರ್ಶಿ ಮತ್ತು ಜಿಲ್ಲಾಧಿಕಾರಿಗೆ ಸೆ.19ರಂದು ರಜೆ ನೀಡುವಂತೆ ಪತ್ರ ಮೂಲಕ ತಿಳಿಸಿದ್ದರು. ಉಡುಪಿ ಶಾಸಕ ಯಶಪಾಲ್ ಸುವರ್ಣ ಕೂಡಾ ಸರ್ಕಾರವನ್ನು ಆಗ್ರಹಿಸಿದ್ದರು.
ಇದೀಗ ಸರ್ಕಾರದ ಅಧಿಕೃತ ಆದೇಶ ಬಂದಿದ್ದು ಸೆ.19ರಂದು ರಜೆ ನೀಡಲು ಸೂಚಿಸಲಾಗಿದೆ.

 
 
 
 
 
 
 
 
 
 
 

Leave a Reply