SSLC ಮರು ಮೌಲ್ಯ ಮಾಪನದಲ್ಲಿ 4ರಿಂದ 2ನೇ ಸ್ಥಾನಕ್ಕೆ ಜಿಗಿದ ತುಳಸಿ 

ಉಡುಪಿ:  ಮೂಲತಃ ಕೊಡವೂರಿನ ರಾಯಸ ಕುಟುಂಬದ  ಗುರುಪ್ರಕಾಶ್ ರಾಯಸ ಮತ್ತು ಸರಿತ ಗುರುಪ್ರಕಾಶ್ ಇವರ ಪುತ್ರಿ ತುಳಸಿ.ಜಿ.ರಾಯಸ  SSLC ಪರೀಕ್ಷೆಯಲ್ಲಿಈ ಹಿಂದೆ ರಾಜ್ಯದಲ್ಲಿ 4ನೇ ಸ್ಥಾನ ಪಡೆದಿದ್ದಳು. (622/625-99.52%) ಆದರೆ ತಾನು ಬರೆದ ಪರೀಕ್ಷೆಯಲ್ಲಿ ಇನ್ನೂ ಎರಡು ಮಾರ್ಕ್ ಸಿಗುತ್ತದೆ ಎಂಬ ಆತ್ಮ ವಿಶ್ವಾಸದ ತುಳಸಿ ಮರು ಮೌಲ್ಯ ಮಾಪನಕ್ಕೆ ಅರ್ಜಿ ಹಾಕಿದಳು.
ಅವಳ ವಿಶ್ವಾಸ ಹಾಗು ದೃಢತೆ ಸಂಪೂರ್ಣ ಅವಳ ಪರವಾಗಿತ್ತು. ಮರು ಮೌಲ್ಯ ಮಾಪನದ ರಿಸಲ್ಟ್ ನಲ್ಲಿ ತುಳಸಿ ಅಂದುಕೊಂಡಂತೆ ಎರಡು ಅಂಕ ಅವಳ(624) ಪಾಲಿಗಾಯಿತು. ನಾಲ್ಕನೇ ಸ್ಥಾನದಿಂದ ಮುಂದೆ ಹೋಗಿ ಎರಡನೇ ಸ್ಥಾನ ತನ್ನದಾಗಿಸಿ ಕೊಂಡಳು. 
ತುಳಸಿ ಅದ್ಬುತ ಪ್ರತಿಭೆಯ ಸಂಗಮ. ಈ ಹಿಂದೆ ಬೆಂಗಳೂರಿನ ಶ್ರೀ ಕುಮಾರನ್ ಚಿಲ್ಡ್ರನ್ ಶಾಲೆಯ ವಿದ್ಯಾರ್ಥಿನಿಯಾದ ತುಳಸಿ “ಅತಿ ಹೆಚ್ಚು ಖಡ್ಗ ಧರಿತ ನೃತ್ಯ ಗಾರರು” ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಗಿನ್ನಿಸ್ ದಾಖಲೆ ಪ್ರಶಸ್ತಿ  ಪಡೆದು, ಕರ್ನಾಟಕ ಸಂಗೀತ ಜೂನಿಯರ್ ಮತ್ತು ಭರತನಾಟ್ಯದಲ್ಲಿ ಜೂನಿಯರ್ ಮುಗಿಸಿದ್ದಾಳೆ.  ತೆಂಕು ತಿಟ್ಟಿನ ಚಂಡೆಯನ್ನು ಸುಲಲಿತವಾಗಿ ನುಡಿಸುತ್ತಾ ತನ್ನ ಕಾಲ ಪ್ರೌಢಿಮೆಗೆ ಇನ್ನಷ್ಟು ಮೆರಗನ್ನು ನೀಡುತ್ತಿದ್ದಾಳೆ. 
 
ಬೆಂಗಳೂರಿನಲ್ಲಿ ನೆಲೆಸಿರುವ ರಮೇಶ್ ರಾಯಸ ಮತ್ತು ವಾರಿಜ ರಮೇಶ್ ಹಾಗೂ  ಎಲ್ಲೂರಿನ ಸಮೀಪದ ಮಲಂಗೊಳಿಯ ದಿ|| ಶ್ರೀಪತಿ ರಾವ್ ಹಾಗು ಸುಲೋಚನ ರಾವ್ (ಹುಬ್ಬಳ್ಳಿ) ಅವರ ಮೊಮ್ಮಗಳು.
 
 
 
 
 
 
 
 
 
 
 

Leave a Reply