ಬ್ಯೂಟಿಪಾರ್ಲರ್ ಮ್ಯಾನೇಜ್‌ಮೆಂಟ್ ತರಬೇತಿಯ ಸಮಾರೋಪ

ಮಹಿಳೆಯರು ಸ್ವಾವಲಂಬಿಗಳಾಗಲು ವಿಪುಲ
ಅವಕಾಶಗಳಿವೆ, ಅವುಗಳಲ್ಲಿ ಬ್ಯೂಟಿಪಾರ್ಲರ್ ಉದ್ಯಮವು
ಉತ್ತಮ ಆದಾಯವನ್ನು ತಂದುಕೊಡುವುದರ ಜೊತೆಗೆ
ಕೌಶಲ್ಯವನ್ನು ನಿರಂತರ ಹೆಚ್ಚಿಸಿಕೊಳ್ಳುವಲ್ಲಿ
ಸಹಕಾರಿಯಾಗುವ ಕ್ಷೇತ್ರವಾಗಿದೆ. ಆದರೆ ಈ ಕ್ಷೇತ್ರದಲ್ಲಿ
ತೊಡಗಿಸಿಕೊಳ್ಳಬೇಕಾದರೆ ಆರಂಭಿಕವಾಗಿ ಉತ್ತಮವಾದ
ತರಬೇತಿಯ ಅವಶ್ಯಕತೆ ಇದೆ ಇಂತಹ ತರಬೇತಿಯನ್ನು
ಆಸಕ್ತ ಯುವ ಜನರಿಗೆ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ
ಉದ್ಯೋಗ ತರಬೇತಿ ಸಂಸ್ಥೆಯು ಊಟ ವಸತಿ ಸಹಿತ ಉಚಿತವಾಗಿ
ಒದಗಿಸುತ್ತಿದೆ ಎಂದು ಪ್ರದೀಪ್ ಆರ್ ಭಕ್ತ, ಉಪ
ಮಹಾ ಪ್ರಬಂಧಕರು, ಕೆನರಾ ಬ್ಯಾಂಕ್, ವೃತ್ತ ಕಛೇರಿ
ಮಣಿಪಾಲ ಇವರು ತಿಳಿಸಿದರು. ಅವರು ೩೦ ದಿನಗಳ ಕಾಲ
ಮಹಿಳೆಯರಿಗಾಗಿ ನಡೆದ ಬ್ಯೂಟಿಪಾರ್ಲರ್ ಮ್ಯಾನೇಜ್‌ಮೆಂಟ್
ತರಬೇತಿಯ ಸಮಾರೋಪ ಸಮಾರಂಭದಲ್ಲಿ
ಪ್ರಮಾಣಪತ್ರವನ್ನು ವಿತರಿಸಿ, ಶಿಬಿರಾರ್ಥಿಗಳನ್ನು ಉದ್ದೇಶಿಸಿ
ಮಾತನಾಡಿದರು. ಸಂಸ್ಥೆಯ ನಿರ್ದೇಶಕರಾದ ಸವಿತಾ ಎಸ್
ನಾಯಕ್À ಇವರು ಸ್ವಾಗತಿಸಿದರು, ಶಿಬಿರಾರ್ಥಿಗಳಾದ ಪ್ರಜ್ಞಾ,
ಜಯಶ್ರೀ, ಕವಿತಾ ವ್ಮತ್ತ ಮೇಘನಾ ಇವರು ತರಬೇತಿಯ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು, ಕೆನರಾ
ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ
ಉಪನ್ಯಾಸಕಿಯಾದ ಶ್ರೇಯಾ ಕಾರ್ಯಕ್ರಮವನ್ನು
ನಿರೂಪಿಸಿದರು, ಮತ್ತು ಸಂಸ್ಥೆಯ ಕಛೇರಿ ಸಹಾಯಕರಾದ
ಸಂತೋಷ್ ಇವರು ವಂದಿಸಿದರು.

 
 
 
 
 
 
 
 
 
 
 

Leave a Reply