ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯರ‍್ವೇದ ಕಾಲೇಜು ಮತ್ತು ಆಸ್ಪತ್ರೆ, ಕುತ್ಪಾಡಿ, ಉಡುಪಿ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯರ‍್ವೇದ ಮಹಾವಿದ್ಯಾಲಯ ಉಡುಪಿಯ ಸ್ವಸ್ಥವೃತ್ತ ಸ್ನಾತಕೋತ್ತರ ವಿಭಾಗದ ವತಿಯಿಂದ ಅತಿಥಿ ಉಪನ್ಯಾಸ ಕರ‍್ಯಕ್ರಮ ಹಾಗೂ ’ಯೋಗಸುಧಾ’ ರ‍್ಟಿಫಿಕೇಟ್ ಕರ‍್ಸ್ ಆನ್ ಕ್ಲಿನಿಕಲ್ ಯೋಗ ಇದರ ಸಮಾರೋಪ ಸಮಾರಂಭವನ್ನು ಹಿಮಾಲಯ ವೆಲ್ನೆಸ್ ಕಂಪೆನಿಯ ಪ್ರಾಯೋಜಕತ್ವದಲ್ಲಿ ಆಯೋಜಿಸಲಾಯಿತು. ಮುಖ್ಯ ಅತಿಥಿಯಾದ ಹಿಮಾಲಯ ವೆಲ್ನೆಸ್ ಕಂಪೆನಿಯ ಸೈಂಟಿಫಿಕ್ ರ‍್ವಿಸಸ್ ವಿಭಾಗದ ನ್ಯಾಶನಲ್ ಮ್ಯಾನೇಜರ್, ಡಾ. ಶ್ರೀಕಾಂತ್ ಕೆ ಅವರು ’ ಆಯುರ‍್ವೇದ ವಿದ್ಯರ‍್ಥಿಗಳ ಮುಂದಿರುವ ಅವಕಾಶಗಳು’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಈ ಸಂರ‍್ಭದಲ್ಲಿ ಆಯರ‍್ವೇದ ಆಸ್ಪತ್ರೆಯ ಕಿರುವೈದ್ಯರಿಗೆ ಆಯೋಜಿಸಲಾಗಿದ್ದ ’ಯೋಗಸುಧಾ’ ರ‍್ಟಿಫಿಕೇಟ್ ಕರ‍್ಸ್ ಆನ್ ಕ್ಲಿನಿಕಲ್ ಯೋಗ ಇದರ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಕಾಲೇಜಿನ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥರಾದ ಡಾ. ನಿರಂಜನ್ ರಾವ್ ಅವರು ಮಾತನಾಡುತ್ತಾಉಸಿರಾಟದ ಪ್ರಕ್ರಿಯೆ ಹಾಗೂ ಅದರ ನಿಯಂತ್ರಣದ ಪ್ರಾಮುಖ್ಯತೆಯ ಬಗ್ಗೆ ವಿವರಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ಮಮತಾ ಕೆ.ವಿ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ರೋಗಿಗಳ ಚಿಕಿತ್ಸೆಯಲ್ಲಿ ಯೋಗದ ಮಹತ್ವದ ಬಗ್ಗೆ ತಿಳಿಸಿದರು. ಹಿಮಾಲಯ ವೆಲ್ನೆಸ್ ಕಂಪೆನಿಯ ವತಿಯಿಂದ ವಿದ್ಯರ‍್ಥಿಗಳ ಶೈಕ್ಷಣಿಕ ಸಾಧನೆಗಾಗಿ ಕೊಡಲ್ಪಡುವ ’ಜೀವಕ ಪುರಸ್ಕಾರ’ ಹಾಗೂ ’ಆಯರ‍್ವಿಶಾರದ ಪುರಸ್ಕಾರ’ಗಳನ್ನು ಈ ಸಂರ‍್ಭದಲ್ಲಿ ನೀಡಲಾಯಿತು. ೨೦೨೦-೨೧ ರ ಶೈಕ್ಷಣಿಕ ಸಾಧಕರಾದ ಡಾ. ಮೇಘಾ ಬಿ ಇವರಿಗೆ ಜೀವಕ ಪುರಸ್ಕಾರ ಹಾಗೂ ಡಾ. ಶ್ರೀನಿಕೇತ್ ಕೆ ಇವರಿಗೆ ಆಯರ‍್ವಿಶಾರದ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ೨೦೨೧-೨೨ ರ ಸಾಧಕರಾದ ಡಾ. ಶುಭಾ ಎಸ್ ಭಟ್ಇವರಿಗೆ ಜೀವಕ ಪುರಸ್ಕಾರ ಹಾಗೂ ಡಾ. ಬಿಂದಿಯಾ ಇವರಿಗೆ ಆಯರ‍್ವಿಶಾರದ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ಸ್ವಸ್ಥವೃತ್ತ ವಿಭಾಗದ ಮುಖ್ಯಸ್ಥರಾದ ಡಾ. ವಿಜಯ್ ಬಿ ನೆಗಳೂರು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹಾಯಕ ಪ್ರಾಧ್ಯಾಪಕರಾದ ಡಾ. ಶ್ರೀನಿಧಿ ಧನ್ಯ ಬಿ. ಎಸ್ ಇವರು ರ‍್ಟಿಫಿಕೇಟ್ ಕರ‍್ಸ್ ಆನ್ ಕ್ಲಿನಿಕಲ್ ಯೋಗದ ವರದಿಯನ್ನು ವಾಚಿಸಿದರು. ಸ್ವಸ್ಥವೃತ್ತ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಯೋಗೀಶ ಆಚರ‍್ಯ ವಂದಿಸಿದರು. ಕಾರ‍್ಯಕ್ರಮದಲ್ಲಿ ವಿದ್ಯರ‍್ಥಿ ಕ್ಷೇಮಪಾಲನಾಧಿಕಾರಿ ಡಾ. ವೀರಕುಮಾರ ಕೆ ಹಾಗೂ ಕಿರು ವೈದ್ಯರ ಕ್ಷೇಮಪಾಲನಾಧಿಕಾರಿ ಡಾ. ರಾಕೇಶ್ ಆರ್. ಎನ್, ಸ್ವಸ್ಥವೃತ್ತ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ ಕೃತಿ ಅಮೈಉಪಸ್ಥಿತರಿದ್ದರು. ಸ್ವಸ್ಥವೃತ್ತ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಸಂದೇಶ್ ಕುಮಾರ್ ಶೆಟ್ಟಿ ಕಾರ‍್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply