ಜುಲೈ 2 ನೇ ವಾರದಲ್ಲಿ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ‌ಪ್ರಕಟ

ಬೆಂಗಳೂರು: ಜುಲೈ 2 ನೇ ವಾರದಲ್ಲಿ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ‌ಪ್ರಕಟಗೊಳ್ಳಲಿದೆ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.

ಶಿಕ್ಷಕರ ವರ್ಗಾವಣೆ ಬಗ್ಗೆ ಮಾತನಾಡಿದ ಅವರು ವೇಳಾಪಟ್ಟಿ, ಶಿಕ್ಷಕ ಸ್ನೇಹಿ ವರ್ಗಾವಣೆ ನೀತಿ ಜಾರಿಗೊಳಿಸಲು ಸುಗ್ರೀವಾಜ್ಞೆ ತರಲಾಗಿದೆ. ಜೂನ್ 30 ರಿಂದ ವರ್ಗಾವಣೆ ಪ್ರಕ್ರಿಯೆ ಆರಂಭವಾಗಲಿದೆ ಈಗಾಗಲೇ 25 ಸಾವಿರ ಅರ್ಜಿಗಳು ವರ್ಗಾವಣೆಗೆ ಸ್ವೀಕೃತವಾಗಿದೆ ಎಂದು ಹೇಳಿಕೆ ನೀಡಿದ್ದಾರೆ.

ಶಿಕ್ಷಕ‌ಮಿತ್ರ ಆಪ್ ಮೂಲಕ‌ ಕೌನ್ಸೆಲಿಂಗ್ ಭಾಗವಹಿಸಿ ವರ್ಗಾವಣೆ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ರಾಜ್ಯದಲ್ಲಿ ಶಾಲೆಗಳ‌ ಆರಂಭದ ಬಗ್ಗೆ ಸಾಕಷ್ಟು ಚರ್ಚೆಗಳಾಗಿದೆ. ಡಾ.ದೇವಿಶೆಟ್ಟಿ ವರದಿಯನ್ನು ಅವಲೋಕಿಸಲಾಗಿದೆ. ಗ್ರಾಮೀಣ ಭಾಗದ ಮಕ್ಕಳು ‌ಕಲಿಕೆಯಿಂದ ವಂಚಿತರಾಗಬಾರದು ಎಂಬುದು ‌ನಮ್ಮ‌ ಇಚ್ಚೆಯಾಗಿದೆ ಎಂದಿದ್ದಾರೆ.

ವಿಷಯ ಪರಿಣಿತರು,‌ ಸರ್ಕಾರದ ತಾಂತ್ರಿಕ ಸಲಹೆಗಾರ ರು ಹಾಗೂ ಮಕ್ಕಳ ತಜ್ಞರನ್ನೊಳ ಗೊಂಡ ಟಾಸ್ಕ್ ಪೋರ್ಸ್ ರಚಿಸಲಾಗುವುದು. ಜುಲೈ 1 ರಿಂದ ಚಂದನ ವಾಹಿನಿ‌ ಮೂಲಕ ಎಲ್ಲ ತರಗತಿಗಳಿಗೆ ಪಾಠ ಆರಂಭಿಸಲಾಗುವುದು. ಮೊದಲ ಹಂತದಲ್ಲಿ 8,9,10 ನೇ ತರಗತಿಗಳ‌ ಪಾಠ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.

 
 
 
 
 
 
 
 
 
 
 

Leave a Reply