ಜುಲೈ 19 ಮತ್ತು 22 ರಂದು ರಾಜ್ಯದಲ್ಲಿ ನಡೆಯಲಿದೆ ಎಸ್.ಎಸ್.ಎಲ್.ಸಿ. ಪರೀಕ್ಷೆ

ಬೆಂಗಳೂರು: ಜುಲೈ 19 ಮತ್ತೊಂದು 22 ರಂದು ಎರಡು ದಿನಗಳಲ್ಲಿ 3 ಗಂಟೆ ಅವಧಿಯಲ್ಲಿ ತಲಾ 3 ವಿಚಾರಗಳಿಗೆ ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಯಲಿದೆ ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಹು ಆಯ್ಕೆಗಳ ಪ್ರಶ್ನೆಗಳ ಪತ್ರಿಕೆ ಇರಲಿದ್ದು, ಜುಲೈ 19 ರಂದು ಸೋಮವಾರ ವಿಜ್ಞಾನ, ಗಣಿತ, ಸಮಾಜವಿಜ್ಞಾನ ಪರೀಕ್ಷೆ ಮತ್ತು ಜುಲೈ 22 ರಂದು ಗುರುವಾರ – ಭಾಷಾ ವಿಷಯಗಳ ಪರೀಕ್ಷೆ, ಬೆಳಗ್ಗೆ 10.30 ಗಂಟೆಯಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಪರೀಕ್ಷೆ ನಡೆಯಲಿದೆ.

ಪರೀಕ್ಷಾ ಕೇಂದ್ರಗಳನ್ನು ಮಕ್ಕಳ ಆರೋಗ್ಯ ಸುರಕ್ಷಾ ಕೇಂದ್ರಗಳಾಗಿ ಪರಿವರ್ತಿಸುವ ಭರವಸೆಯನ್ನು ಜಿಲ್ಲಾಧಿಕಾರಿಗಳು ನೀಡಿದ್ದಾರೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.ಈ ವರ್ಷ ರಾಜ್ಯದಲ್ಲಿ 8.76 ಲಕ್ಷ ವಿದ್ಯಾರ್ಥಿಗಳಿಗೆ 73,066 ಪರೀಕ್ಷಾ ಕೇಂದ್ರಗಳು ಸಿದ್ಧವಾಗಿದೆ.ಕಳೆದ ವರ್ಷ ಜೂನ್ 26 ರಿಂದ ಜುಲೈ 4 ರವರೆಗೆ 6 ದಿನಗಳ ಕಾಲ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ನಡೆದಿತ್ತು. 

 
 
 
 
 
 
 
 
 
 
 

Leave a Reply