Janardhan Kodavoor/ Team KaravaliXpress
29.6 C
Udupi
Sunday, August 1, 2021

​ಎಸ್ ಡಿ ಎಮ್ ​ಆಯುರ್ವೇದ​ ಕಾಲೇಜು ಮತ್ತು ಆಸ್ಪತ್ರೆ, ಕಾಲೇಜಿನಲ್ಲಿ ವಿಶ್ವ ಪರಿಸರ ದಿನ

ಶ್ರೀ ಧರ್ಮಸ್ಥಳ ಮಂಜನಾಥೇಶ್ವರ ಆಯುರ್ವೇದ​ ಮಹಾವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನಾಚರಣೆಯು ವಿದ್ಯಾಲಯದ​ ದ್ರವ್ಯಗುಣ ವಿಭಾಗ, ಮೂಲಿಕೋದ್ಯಾನ ಸಮಿತಿ, ​ರಾಷ್ಟ್ರೀಯ ಸೇವಾ​ ಯೋಜನೆ, ರೆಡ್‌ಕ್ರಾಸ್ ಘಟಕಗಳ ಸಹಯೋಗದೊಂದಿಗೆ ಜರುಗಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು​ ಎಸ್.ಡಿ.ಎಮ್. ಆಯುರ್ವೇದ ಆಸ್ಪತ್ರೆ, ಉಡುಪಿ ಇದರ ವೈದ್ಯಕೀಯ​ ಅಧೀಕ್ಷಕರಾದ ಡಾ. ನಾಗರಾಜ್ ಎಸ್. ವಹಿಸಿ ಪರಿಸರ ಹಾಗೂ ಮಾನವನ​ ನಡುವಿನ ಸಾಮತ್ಯೆಗಳನ್ನು ಗುರುತಿಸಿ ಜೀವನ ನಡೆಸಬೇಕೆಂದು ಆಶಿಸಿದರು. 

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ,​ ​ಜಲಾನುಸಂಧಾನದ ಪ್ರಮುಖ ರೂವಾರಿ, ಉಡುಪಿ ಜಿಲ್ಲಾ ಕನ್ನಡ​ ರಾಜ್ಯೋತ್ಸವ ​ಪ್ರಶಸ್ತಿ ​ಪುರಸ್ಕೃತ ರತ್ನಶ್ರೀ ಜೋಸೆಫ್ ಜಿ.ಎಮ್. ರೆಬೆಲ್ಲೊ ಅವರು ಜಲ ಸಂರಕ್ಷಣೆ ಜಲ ಮರು ಪೂರಣಗಳ ಕುರಿತು​ ಸಂಪೂರ್ಣ ಮಾಹಿತಿ ನೀಡಿದರು. 
 
ಡಾ. ಲಿಖಿತಾ ಅವರ ಪ್ರಾರ್ಥನೆಯೊಂದಿಗೆ​ ಕಾರ್ಯಕ್ರಮ ಆರಂಭವಾಯಿತು. ಎನ್ನೆಸ್ಸೆಸ್ ಯೋಜನಾಧಿಕಾರಿ ಡಾ.​ ವಿದ್ಯಾ​ಲಕ್ಷ್ಮೀ  ​ಕೆ. ಸ್ವಾಗತ ಭಾಷಣ ನೆರವೇರಿಸಿದರು. ಕಾರ್ಯಕ್ರಮದ​ ಉದ್ದೇಶವನ್ನು ಮೂಲಿಕೋದ್ಯಾನ ಸಮಿತಿಯ ಅಧ್ಯಕ್ಷೆ ಡಾ.ಸುಮಾ ಮಲ್ಯ ವಿವರಿಸಿದರು.
ಕಾರ್ಯಕ್ರಮದ ಅಂಗವಾಗಿ​ ಆಯುರ್ವೇದ ಪದವಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಪ್ರಬಂಧ​ ಸ್ಪರ್ಧೆಯ ವಿಜೇತರ ಪಟ್ಟಿಯನ್ನು ದ್ರವ್ಯಗುಣ​ ವಿಭಾಗಾಧ್ಯಕ್ಷರಾದ ಡಾ. ಶ್ರೀಕಾಂತ್ ಪಿ. ಅವರು ಓದಿದರು.  ಸ್ಪರ್ಧೆಯ ತೀರ್ಪುಗಾರರಾದ ಡಾ. ಲಿಖಿತಾ ಡಿ.ಎನ್. ಹಾಗೂ ಡಾ. ಯೋಗೀಶ್ ಆಚಾರ್ಯ​ ಅವರನ್ನು
ಈ ಸಂದರ್ಭದಲ್ಲಿ ಗೌರವಿಸಲಾಯಿತು. 
ರೆಡ್‌ಕ್ರಾಸ್​ ಸಂಸ್ಥೆಯ ಕಾಲೇಜಿನ ಮುಖ್ಯಸ್ಥರಾದ ಡಾ. ಮೊಹಮ್ಮದ್​ ಫೈಸಲ್‌ರವರು ವಂದನಾರ್ಪಣೆ ನೆರವೇರಿಸಿದರು. ಡಾ. ಸುಶ್ಮಿತಾ ವಿ.ಎಸ್.​ ಕಾರ್ಯಕ್ರಮವನ್ನು ನಿರೂಪಿಸಿದರು. ಸಭಾ ಕಾರ್ಯಕ್ರಮದ​ ಬಳಿಕ ಮೂಲಿಕೋದ್ಯಾನದ ಸ್ವಚ್ಛತಾ ಕಾರ್ಯವನ್ನು​ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜು, ಆಸ್ಪತ್ರೆಯ
ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.​​
- Advertisement -

ಸಂಬಂಧಿತ ಸುದ್ದಿ

Leave a Reply

ಸುಪ್ರಭಾತ

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!