ಮಾಹೆಯಲ್ಲಿ ಕ್ವಾಂಟಮ್‌ ತಂತ್ರಜ್ಞಾನ ಮತ್ತು ಅಪ್ಲಿಕೇಷನ್ಸ್ ಕುರಿತ ಅಂತಾರಾಷ್ಟ್ರೀಯ ಸಮಾವೇಶದ ಉದ್ಘಾಟನೆ

ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ [ಮಾಹೆ]ನಲ್ಲಿರುವ ಅಟಾಮಿಕ್ ಮತ್ತು ಮಾಲಿಕ್ಯುಲರ್ ಫಿಸಿಕ್ಸ್ [ಡಿಎಎಂಪಿ], ಮಣಿಪಾಲ್ ವಿಶ್ವವಿದ್ಯಾನಿಲಯ ಜೈಪುರ್ (ಎಂಯುಜೆ) ನ ಭೌತಶಾಸ್ತ್ರ ವಿಭಾಗದ ಸಹಭಾಗಿತ್ವದಲ್ಲಿ ಕ್ವಾಂಟಮ್ ತಂತ್ರಜ್ಞಾನಗಳು ಮತ್ತು ಅಪ್ಪ್ಲಿಕೇಷನ್ಸ್ ಕುರಿತ ಅಂತಾರಾಷ್ಟ್ರೀಯ ಸಮಾವೇಶ [ಐಸಿಕ್ಯುಟಿಎ] ದ ಉದ್ಘಾಟನ ಸಮಾರಂಭವನ್ನು ಫೆಬ್ರವರಿ 12, 2024 ರಂದು ಆಯೋಜಿಸಿತು, ಮೂರು ದಿನ ಜರಗಿದ ಈ ಕಾರ್ಯಕ್ರಮದಲ್ಲಿ ಕ್ವಾಂಟಮ್ ತಂತ್ರಜ್ಞಾನದ ಇತ್ತೀಚೆಗಿನ ಶೀಘ್ರ ಬೆಳವಣಿಗೆಯ ಕುರಿತು ವಿಶೇಷ ಅನುಭವವಿರುವ ಜಗತ್ತಿನ ವಿವಿಧೆಡೆಗಳ ಸುಮಾರು 30 ಮಂದಿ ವಿಜ್ಞಾನಿಗಳು ಉಪನ್ಯಾಸಕರಾಗಿ ಭಾಗವಹಿಸಿದರು. ಈ ಶೈಕ್ಷಣಿಕ ಮಹತ್ತ್ವದ ಸಮಾವೇಶದಲ್ಲಿ ವಿವಿಧ ಪ್ರತಿಷ್ಠಿತ ಸಂಸ್ಥೆಗಳ 150 ವಿದ್ಯಾರ್ಥಿಗಳು ಮತ್ತು ಸಂಶೋಧಕರು ಭಾಗವಹಿಸಿದರು.   

ಮಾಹೆಯ ಉಪಕುಲಪತಿಗಳಾದ ಲೆ. ಜ. [ ಡಾ.] ಎಂ. ಡಿ. ವೆಂಕಟೇಶ್ ಅವರು ಸಮಾವೇಶವನ್ನು ಉದ್ಘಾಟಿಸುತ್ತಾ , ‘ಮಾಹೆಯು ಕ್ವಾಂಟಮ್ ಟೆಕ್ನಾಲಜಿಯ ಕುರಿತ ಸಂಶೋಧನೆಗಳನ್ನು ನಡೆಸಲು ಬದ್ಧವಾಗಿದೆ. ಮಾಹೆಯು ತಂತ್ರಜ್ಞಾನ ಕ್ಷೇತ್ರದಲ್ಲಿ ಈಗಾಗಲೇ ಹಲವು ಸಂಶೋಧನೆಗಳನ್ನು ಮಾಡಿದ್ದು, ವಿಜ್ಞಾನ ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಸಾಧನೆಯನ್ನು ಮಾಡಿದೆ. ಮುಂದೆಯೂ ಆವಶ್ಯವಿರುವ ಎಲ್ಲ ಪ್ರೋತ್ಸಾಹವನ್ನು ನೀಡಲಾಗುತ್ತಿದೆ’ ಎಂದರು.

ಮಾಹೆಯ ಅಟಾಮಿಕ್‌ ಮತ್ತು ಮಾಲಿಕ್ಯುಲಾರ್‌ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಮತ್ತು ಪ್ರಸ್ತುತ ಸಮಾವೇಶದ ಸಂಯೋಜಕರಾದ ಡಾ. ಸಾಜನ್‌ ಡೇನಿಯಲ್‌ ಜಾರ್ಜ್‌ ಅವರು ರಾಷ್ಟ್ರೀಯ ಆಶಯದ ಕಾರ್ಯಕ್ರಮಗಳಿಗೆ ತಮ್ಮ ವಿಭಾಗದ ಬದ್ಧತೆಯನ್ನು ಒತ್ತಿ ಹೇಳಿದರು ಮತ್ತು ಪ್ರಸ್ತುತ ಉಪಕ್ರಮವು ರಾಷ್ಟ್ರೀಯ ಕ್ವಾಂಟಮ್‌ ಯೋಜನೆಗೆ ವಿಶೇಷ ಕೊಡುಗೆಯನ್ನು ನೀಡಲಿದೆ’ ಎಂದರು. 

ಪ್ರಸ್ತುತ ಸಮಾವೇಶದ ಕಾರ್ಯದರ್ಶಿ ಮಣಿಪಾಲ್‌ ಜೈಪುರ್‌ ವಿಶ್ವವಿದ್ಯಾನಿಲಯದ ಕಾರ್ಯದರ್ಶಿ ಡಾ. ಆಶಿಮ ಬಗೇರಿಯ ಅವರು ಸಮಾವೇಶದ ಉದ್ದೇಶದ ಕುರಿತು ಹೇಳುತ್ತ, ಮಾಹೆಯು ಕ್ವಾಂಟಮ್‌ ತಂತ್ರಜ್ಞಾನ ಕ್ಷೇತ್ರದಲ್ಲಿ ಮಾಡಲಿರುವ ಸುಧಾರಿತ ಸಂಶೋಧನ ಪ್ರಕ್ರಿಯೆಯ ಸಾಕ್ಷಿಯಾಗಿ ಈ ಸಮಾವೇಶ ಆಯೋಜನೆಗೊಂಡಿದೆ. ಭಾರತದ ಭೌತಶಾಸ್ತ್ರ ಕ್ಷೇತ್ರದಲ್ಲಿ ನಡೆಯಲ್ಲಿರುವ ಮಹತ್ತ್ವದ ಸಂಶೋಧನೆಗಳನ್ನು ಈ ಸಮಾವೇಶವು ಉತ್ತೇಜಿಸಲಿದೆ’ ಎಂದರು.   

ಮದ್ರಾಸ್‌ ಐಐಟಿಯ ಡಾ. ಅನಿಲ್‌ ಪ್ರಭಾಕರ ಅವರು ರಾಷ್ಟ್ರೀಯ ಕ್ವಾಂಟಮ್‌ ಯೋಜನೆಯ ಉದ್ದೇಶಗಳನ್ನು ಸಾಧಿತವಾಗುವ ಬಗ್ಗೆ ಮಾತನಾಡುವುದರ ಮೂಲಕ ಸಮಾವೇಶಶಕ್ಕೆ ಪ್ರಸ್ತಾವನೆಯ ನುಡಿಗಳನ್ನಾಡಿದರು. ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಡಾ. ಲಜರ್‌ ಮ್ಯಾಥ್ಯೂ ಅವರು ಸಮಾವೇಶದ ಪ್ರಾಮುಖ್ಯದ ಬಗ್ಗೆ ಹೇಳುತ್ತ, ‘ಆರೋಗ್ಯ, ಪರಿಸರ, ಶಕ್ತಿ, ಕೃಷಿ, ರಕ್ಷಣೆ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಹೊಸ ತಂತ್ರಜ್ಞಾನ ಆವಶ್ಯಕತೆಯಿದೆ. ಭೌತಶಾಸ್ತ್ರ, ಗಣಿತಶಾಸ್ತ್ರ ಮತ್ತು ತಂತ್ರಜ್ಞಾನಗಳಂಥ ಬಹುಶಿಸ್ತ್ರೀಯ ವಿಭಾಗಗಳು ಒಂದಾಗಿ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಿದೆ’ ಎಂದರು. 

ಸಮಾವೇಶದ ಸಹ ಸಂಯೋಜಕರಾದ ಡಾ. ಮಿಥುನ್‌ ತುಡಿಯಿಂಗಲ್‌ ಅವರು ಧನ್ಯವಾದ ಸಮರ್ಪಿಸಿದರು. 

ಸಮಾವೇಶವು ಫೆಬ್ರವರಿ 14 ರವರೆಗೆ ನಡೆಯಲಿದ್ದು, ಭಾರತ ಮಾತ್ರವಲ್ಲ, ಅಂತಾರಾಷ್ಟ್ರೀಯ ಮಟ್ಟದ ಭೌತಶಾಸ್ತ್ರ ಸಂಶೋಧನೆಗಳನ್ನು ಇದು ಪ್ರಭಾವಿಸಲಿದೆ. 

ಕ್ವಾಂಟ್‌ಮ್‌ ಟೆಕ್ನಾಲಜಿ ಕ್ಷೇತ್ರದಲ್ಲಿ ಮಣಿಪಾಲ್‌ ಮತ್ತು ಜೈಪುರ್‌ ವಿಶ್ವವಿದ್ಯಾನಿಲಯಗಳ ಭವಿಷ್ಯದ ಸಂಶೋಧನೆಯ ವಿಸ್ತಾರವನ್ನು ಈ ಸಮಾವೇಶ ಪ್ರತಿಬಿಂಬಿಸಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಾಮುಖ್ಯದ ಕ್ವಾಂಟಮ್‌ ಟೆಕ್ನಾಲಜಿ ಮತ್ತು ಅನ್ವಯಗಳ ಕುರಿತ ಅಂತಾರಾಷ್ಟ್ರೀಯ ಸಮಾವೇಶವು ಮಾಹೆಯಲ್ಲಿ ನಡೆಯುತ್ತಿರುವುದು ಮಹತ್ತ್ವದ ಸಂಗತಿಯಾಗಿದೆ. 

 
 
 
 
 
 
 
 
 
 
 

Leave a Reply