ಪಿಪಿಸಿಯಲ್ಲಿ ಡಿಸೈನ್ ಥಿoಕಿoಗ್ ಕಾರ‍್ಯಗಾರ

ಪೂರ್ಣಪ್ರಜ್ಞ  ಕಾಲೇಜಿನಲ್ಲಿ ವಾಣಿಜ್ಯ ವಿಭಾಗ ಹಾಗೂ ವಾಣಿಜ್ಯ ಮತ್ತು ನಿರ್ವಹಣಾ ಸoಘದ ಜoಟಿ ಆಶ್ರಯದಲ್ಲಿ “ಡಿಸೈನ್ ಥಿಂಕಿಂಗ್  ಎಂಬ ವಿಷಯದ ಬಗ್ಗೆ ಒಂದು ದಿನದ ಕಾರ‍್ಯಗಾರವು ಪೂರ್ಣಪ್ರಜ್ಞ  ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜಮೆಂಟ್ ನ “ಪ್ರಜ್ಞಾ” ಸಭಾoಗಣದಲ್ಲಿ ನಡೆಯಿತು.
ಈ ಕಾರ‍್ಯಗಾರವನ್ನು ಸಂಪನ್ಮೂಲ ವ್ಯಕ್ತಿಯಾದ ಡಾ| ಸುಧೀರ್ ರಾಜ್, ಪ್ರೊಫೆಸರ್ ಮತ್ತು ತರಬೇತುದರಾರು ಜಸ್ಟಿಸ್ ಕೆ. ಎಸ್. ಹೆಗ್ಡೆ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್  ನಿಟ್ಟೆ, ನಡೆಸಿಕೊಟ್ಟರು.
ವಿನ್ಯಾಸ ಚಿಂತನೆಯು ವ್ಯಾಪಾರ ಮತ್ತು ಸಾಮಾಜಿಕ ​ಸಂದರ್ಭಗಳಲ್ಲಿ  ಉತ್ಪನ್ನಗಳು ಮತ್ತು ಸೇವೆಗಳ ನವಿನತೆಗಾಗಿ ಬಳಸಿಕೊಳ್ಳುವ ಒಂದು ಕಾರ‍್ಯತಂತ್ರ ಚಿಂತನೆಯು ಪ್ರತಿಕ್ರಿಯೆಯು ಮೂಲ ಸಮಸ್ಯೆಯನ್ನು ಕoಡುಹಿಡಿಯುವುದರ ಮೂಲಕ ಪ್ರಾರಂಭವಾಗಬೇಕು ಎಂದು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು.
ಈ ಕಾರ‍್ಯಾಗಾರದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ|ರಾಮು. ಎಲ್ ಅವರು ಅಧ್ಯಕ್ಷತೆ ವಹಿಸಿದ್ದರು.
ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ಶಿವಕುಮಾರ್  ಹಾಗೂ ವಾಣಿಜ್ಯ ಸಂಘದ ಸಂಯೋಜಕಿಯಾದ ವಾಗ್ದೇವಿ ಮಧ್ಯಸ್ಥ ಉಪಸ್ಥಿತರಿದ್ದರು. ಸಾಮಿಯ ಅವರು ಸ್ವಾಗತಿಸಿ, ಮಿಸ್ಬಾ ವಂದಿಸಿದರು. ಸಾತ್ವಿಕ್ ಅವರು ಕಾರ‍್ಯಕ್ರಮ ನಿರೂಪಿಸಿದರು.

Leave a Reply