ಸಂತ ಮೇರಿ ಮಹಾವಿದ್ಯಾಲಯದಲ್ಲಿ ಲಸಿಕಾಕರಣ ಅಭಿಯಾನ

ಶಿರ್ವ: ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದಲ್ಲಿ ವಿವಿಧ ಘಟಕಗಳಾದ ಎನ್ ಸಿಸಿ, ಎನ್ ಎಸ್ ಎಸ್ , ಯೂತ್ ರೆಡ್ ಕ್ರಾಸ್, ರೋವರ್ಸ-ರೇಂಜರ್ಸ್, ಉಡುಪಿ ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಜಿಲ್ಲಾ ಸರ್ಕಾರಿ ಆಸ್ಪತ್ರೆ, ಉಡುಪಿ ಹಾಗೂ ಸಮುದಾಯ ಆರೋಗ್ಯ ಕೇಂದ್ರ ಶಿರ್ವ ಜಂಟಿಯಾಗಿ ಸರ್ವರಿಗೂ ಲಸಿಕಾ ಅಭಿಯಾನವನ್ನು ಕಾಲೇಜಿನ ಎಲ್ಲಾ ಬೋಧಕ ಬೋಧಕೇತರ, ವಿದ್ಯಾರ್ಥಿಗಳಿಗೆ ಕಾಲೇಜಿನ ಫಾದರ್ ಹೆನ್ರಿ ಕ್ಯಾಸ್ಟಲಿನೋ ಸಭಾಂಗಣದಲ್ಲಿ ಜೂನ್ 28ರಿಂದ ಆಯೋಜಿಸಲಾಯಿತು.
ಮುಂದಿನ ತಿಂಗಳಿನಿಂದ ಕಾಲೇಜುಗಳನ್ನು ಪ್ರಾರಂಭಿಸಲು ಸರ್ಕಾರವು ತೀರ್ಮಾನಿಸಲಾಗಿದೆ ಇದರ ಪೂರ್ವವಾಗಿ ಪದವಿ ಕಾಲೇಜು ವಿದ್ಯಾರ್ಥಿಗಳು, ಧಕ, ಭೋದಕೇತರ ಸಿಬ್ಬಂದಿಗೆ ಕೋವಿಡ್ -19 ಲಸಿಕಾಕರಣ ನಡೆಸಲು ನಿರ್ಣಯಿಸಿರುವ ಹಿನ್ನೆಲೆಯಲ್ಲಿ ಕಾಲೇಜಿನ 18 ವರ್ಷ ಮೇಲ್ಪಟ್ಟ ಅರ್ಹ ಫಲಾನುಭವಿಗಳಿಗೆ ಲಸಿಕೆಗಳ ಲಭ್ಯತೆಗೆ ಅನುಸಾರವಾಗಿ ಕಾಲೇಜು ಆವರಣದಲ್ಲಿಯೇ ಲಸಿಕಾಕರಣ  ಅಭಿಯಾನ ಆಯೋಜಿಸಲಾಯಿತು. 
ಕಾಲೇಜು ಆಡಳಿತ ವ್ಯವಸ್ಥೆಯ ಸಹಕಾರದಿಂದ ಕೋವಿಡ್ ನಿಯಂತ್ರಣ ನಿಯಮಾವಳಿಗಳನ್ನು ಪಾಲಿಸಿಕೊಂಡು ಲಸಿಕೆ ವಿತರಿಸಲಾಗುತ್ತಿದೆ ಎಂದು ಲಸಿಕಾಕರಣ ಅಭಿಯಾನದ ನೋಡಲ್ ಅಧಿಕಾರಿ ಹಾಗೂ ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ| ಹೆರಾಲ್ಡ್ ಐವನ್ ಮೋನಿಸ್ ರವರು ಪ್ರಸ್ತುತ ಕೋವಿಡ್ ನಂತಹ ಸಾಂಕ್ರಮಿಕ ಕಾಯಿಲೆಗಳನ್ನು ಎದುರಿಸಬೇಕಾದರೆ  ಕೋವಿಡ್ -19 ಲಸಿಕೆ ಲಸಿಕಾಕರಣ ನಮ್ಮ ಶರೀರದಲ್ಲಿ ಇಮ್ಯೂನಿಟಿ ಶಕ್ತಿಗಳನ್ನು ವೃದ್ಧಿಸಿಕೊಳ್ಳಬೇಕಾಗಿರುವುದು ಇಂದಿನ ಅಗತ್ಯವಾಗಿದೆ, ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಶಿರ್ವ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ| ಸುಬ್ರಹ್ಮಣ್ಯ ಭಟ್ ರವರು ಜಿಲ್ಲಾಡಳಿತದ ವತಿಯಿಂದ ವಿಧ್ಯಾರ್ಥಿಗಳಿಗೆ ಉಚಿತ ಲಸಿಕೆ ವಿತರಣೆ ಮಾಡಲಾಗುತ್ತಿದ್ದು ಕಾಲೇಜುಗಳ ಮೂಲಕ ಲಸಿಕೆ ನೀಡಲಾಗುತ್ತಿದೆ,ಲಸಿಕೆ ಪಡೆಯುವುದು ಪ್ರತಿ ಯೊಬ್ಬರ ಹಕ್ಕಾಗಿದೆ ಎಂಬ ಮಾಹಿತಿಯನ್ನು ನೀಡಿದರು.     
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಾಮಾಭಿವೃದ್ಧಿ ನಿರ್ದೇಶಕಿ ಕು.ಯಶೋದಾ, ಎನ್‍ಎಸ್‍ಎಸ್ ಅಧಿಕಾರಿ ಶ್ರೀ ಪ್ರೇಮನಾಥ್,ಕು. ರಕ್ಷಾ, ಶ್ರೀಸ್ಯಾಮ್ ಜೋಯಲ್ ಡಯಾಸ್ , ಯೂತ್ ರೆಡ್ ಕ್ರಾಸ್ ಸಂಯೋಜಕ ಮುರಳಿ, ರೋವರ್ಸ್-ರೇಂಜರ್ಸ್ ಲೀಡರ್ ಗಳಾದ ಶ್ರೀ ಪ್ರಕಾಶ್, ಸಂಗೀತ ಪೂಜಾರಿ, ಸಮಾಜ ಸೇವಕ ಪವನ್ ಕುಮಾರ್ ಶಿರ್ವ,ಬೋಧಕ, ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದರು.
ಈ ಅಭಿಯಾನಕ್ಕೆ ಸಹಕಾರವನ್ನು ನೀಡಿದ ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕರಾದ ಸುಧಾ, ವಿನಯ, ಸಂಜಯ್, ದಿನೇಶ್ ಹಾಗೂ ಆಶಾ ಕಾರ್ಯಕರ್ತರಾದ ಅಮಿತ, ಪಾರ್ವತಿ, ರೆಹೆಮತ್‍ವರು ನಡೆಸಿ ಕೊಟ್ಟರು.
 
 
 
 
 
 
 
 
 
 
 

Leave a Reply