ರಾಷ್ಟ್ರೀಯ ಆಯುರ್ವೇದ ದಿನಾಚರಣೆ~2023

ಉಡುಪಿಯ ಶ್ರೀ ಧರ್ಮಸ್ಥ ಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದಲ್ಲಿ ದಿನಾಂಕ  ೮ನೇ
ರಾಷ್ಟ್ರೀಯ ಆಯುರ್ವೇದ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯುರ್ವೇದ ರಸಪ್ರಶ್ನೆ ಸ್ಪರ್ಧೆಯನ್ನು ನಡೆಸಲಾಯಿತು. ಉಡುಪಿ ಹಾಗೂ ಬ್ರಹ್ಮಾವರ ವಲಯದ ವಿವಿಧ ಶಾಲೆಗಳ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದವು.

ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗ ಉಡುಪಿ (ಪ್ರಥಮ), ಸರಕಾರಿ ಸಂಯುಕ್ತ
ಪ್ರೌಢಶಾಲೆ ವಳಕಾಡು (ದ್ವಿತೀಯ), ಸರಕಾರಿ ಸಂಯುಕ್ತ ಪ್ರೌಢಶಾಲೆ ಬೆಳಪು (ತ್ರೃತೀಯ) ಹಾಗೂ ಡಾ|ಟಿ.ಎಂ.ಎ. ಪೈ ಪ್ರೌಢಶಾಲೆ ಕಲ್ಯಾಣಪುರ (ತ್ರೃತೀಯ) -ಇಲ್ಲಿನ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ವಿಜೇತರಾದರು. ತದನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಮಮತಾ ಕೆ.ವಿ., ಪ್ರಾಂಶುಪಾಲರು, ಎಸ್. ಡಿ. ಎಂ. ಆಯುರ್ವೇದ ಕಾಲೇಜು ಉಡುಪಿ, ಇವರು ರಾಷ್ಟ್ರೀಯ ಆಯುರ್ವೇದ ದಿನದ ಮಹತ್ವದ ಹಾಗೂ ಮುಂದಿನ ದಿನಗಳಲ್ಲಿ ಶಾಲಾ ಮಕ್ಕಳಿಗೆ ಆಯುರ್ವೇದದ ಅರಿವು ಮೂಡಿಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಕುರಿತು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು. ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಆಯುರ್ವೇದ ಮತ್ತು ಯೋಗ ಪೂರಕ ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ನಾಗರಾಜ್ ಎಸ್, ವೈದ್ಯಕೀಯ ಅಧೀಕ್ಷಕರು, ಎಸ್. ಡಿ. ಎಂ. ಆಯುರ್ವೇದ ಆಸ್ಪತ್ರೆ – ಇವರು ದಿನನಿತ್ಯದ ಜೀವನದಲ್ಲಿ ಆಯುರ್ವೇದದ ಮಹತ್ವದ ಬಗ್ಗೆ ಅರಿವು ಮೂಡಿಸಿದರು. ವಿದ್ಯಾರ್ಥಿದೆಸೆಯಿಂದಲೇ ಆಯುರ್ವೇದದ ಬಗ್ಗೆ ಅರಿತು ಅದನ್ನು ಮುಂದಿನ ಬದುಕಿಗೆ ಅಳವಡಿಸಿಕೊಳ್ಳಬೇಕು
ಎಂದು ವಿದ್ಯಾರ್ಥಿಗಳಿಗೆ ಕರೆ ಕೊಟ್ಟರು.

ಸ್ವಸ್ಥವೃತ್ತ ವಿಭಾಗದ ಮುಖ್ಯಸ್ಥರಾದ ಡಾ. ವಿಜಯ್ ಬಿ. ನೆಗಳೂರು – ಇವರು ಸಭಾಸದರನ್ನು ಸ್ವಾಗತಿಸಿ, ಆಯುರ್ವೇದ ದಿನಾಚರಣೆ-2023ರ ಧ್ಯೇಯ ವಾಕ್ಯ ವಸುದೈವ ಕುಟುಂಬಕಂ- ಎಲ್ಲರ ಆರೋಗ್ಯಕ್ಕಾಗಿ ಆಯುರ್ವೇದ- ಇದರ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಪ್ರಾಧ್ಯಾಪಕರಾದ ಡಾ. ಯೋಗೀಶ ಆಚಾರ್ಯ ಆಯುರ್ವೇದ ದಿನಾಚರಣೆ ಅಂಗವಾಗಿ ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಹಲವು ಕಾರ್ಯಕ್ರಮಗಳ ವರದಿಯನ್ನು ವಾಚಿಸಿದರು. ಸಹ
ಪ್ರಾಧ್ಯಾಪಕರಾದ ಡಾ. ಸಂದೇಶ್ ಕುಮಾರ್ ವಂದಿಸಿದರು. ಸಹಾಯಕ ಪ್ರಾಧ್ಯಾಪಕರಾದ ಡಾ. ಸೌಮ್ಯಾ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು.

ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಡಾ. ಅಶೋಕ್ ಬಿ.ಎನ್. (ಸ್ನಾತಕೋತ್ತರ ಹಾಗೂ ಸಂಶೋಧನಾ
ವಿಭಾಗ), ಡಾ. ರಜನೀಶ್ ವಿ.ಗಿರಿ (ಸ್ನಾತಕ ವಿಭಾಗ) ಉಪಸ್ಥಿತರಿದ್ದರು. ಸಂಸ್ಥೆಯ ಸ್ವಸ್ಥವೃತ್ತ ವಿಭಾಗ ಹಾಗೂ ಗ್ರೀನ್ ರೆಮಿಡೀಸ್ ಇವರ ಸಹಯೋಗದೊಂದಿ ಗೆ ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ಅಂಗವಾಗಿ ವಿವಿಧ ಶಾಲಾ ಕಾಲೇಜು ಮತ್ತು ಸಂಘಸಂಸ್ಥೆಗಳಲ್ಲಿ ಆಯುರ್ವೇದ
ವೈದ್ಯರಿಂದ ಆರೋಗ್ಯ ಮಾಹಿತಿ ಶಿಕ್ಷಣ, ಆರೋಗ್ಯ ತಪಾಸಣಾ ಶಿಬಿರ, ಪರಿಸರ ಅಧ್ಯಯನ ಮತ್ತು ಆರೋಗ್ಯ ಸಮೀಕ್ಷೆ, ಆಯುರ್ವೇದ ಸ್ನಾತಕ ಪದವಿ ವಿದ್ಯಾರ್ಥಿಗಳಿಗೆ ರಾಷ್ಟ್ರ ಮಟ್ಟದ ಚರಕ ಮಂಥನ ರಸಪ್ರಶ್ನೆ ಸ್ಪರ್ಧೆ ಮತ್ತು ಲಾಂಛನ ವಿನ್ಯಾಸ ಸ್ಪರ್ಧೆಯನ್ನು ಸ್ವಸ್ಥವೃತ್ತ ವಿಭಾಗದ ವತಿಯಿಂದ ಏರ್ಪಡಿಸಲಾಗಿತ್ತು. ಚರಕ ಮಂಥನ ಸ್ಪರ್ಧೆಯಲ್ಲಿ ಎಸ್.ಡಿ.ಎಂ. ಆಯುರ್ವೇದ ಕಾಲೇಜು ಉಡುಪಿ (ಪ್ರಥಮ ಮತ್ತು ದ್ವಿತೀಯ) ಹಾಗೂ ಶ್ರೀ ಶ್ರೀ ಆಯುರ್ವೇದ ಕಾಲೇಜು ಮತ್ತು ಸಂಶೋಧನಾ ಕೇಂದ್ರ ಬೆಂಗಳೂರು (ತೃತೀಯ) – ಇಲ್ಲಿನ ಆಯುರ್ವೇದ ವಿದ್ಯಾರ್ಥಿಗಳು ಬಹುಮಾನಗಳನ್ನು ಪಡೆದರು. ಸಂಸ್ಥೆಯ ದ್ರವ್ಯಗುಣ ವಿಭಾಗದ ವತಿಯಿಂದ ಕಾರ್ಕಳ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಪರಿಸರದಲ್ಲಿ ಸಸ್ಯ ಸಂರಕ್ಷಣೆಗಾಗಿ ಔಷಧೀಯ ಸಸ್ಯಗಳನ್ನು ನೆಡುವುದು ಮತ್ತು ಔಷಧೀಯ ಸಸ್ಯಗಳ ಬಗ್ಗೆಅತಿಥಿ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

 
 
 
 
 
 
 
 
 
 
 

Leave a Reply