ಪಿಪಿಸಿಯಲ್ಲಿ ವಿಶೇಷ ಉಪನ್ಯಾಸ ಹಾಗೂ ಯಕ್ಷಗಾಯನ-ಯುಗಳ ಸಂವಾದ

ಉಡುಪಿ: ಭಾಷೆ ಮತ್ತು ತಂತ್ರಜ್ಞಾನ ಪರಸ್ಪರ ಪೂರಕ ಹಾಗೂ ಪೇರಕ. ಕಂಪ್ಯೂಟರ್ ಇಪ್ಪತ್ತನೇ ಶತಮಾನದ ಅದ್ಭುತ ಶಕ್ತಿಯಾಗಿದ್ದು, ಇದರಲ್ಲಿ ಕನ್ನಡವನ್ನು ಸಮರ್ಥವಾಗಿ
ಬಳಸುವುದಕ್ಕೆ ವಿಫುಲವಾದ ಅವಕಾಶಗಳಿವೆ ಎಂದು ಸರಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಎಚ್.ಕೆ. ವೆಂಕಟೇಶ್ ಹೇಳಿದರು.

ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಕನ್ನಡ ವಿಭಾಗವು ಐ.ಕ್ಯು.ಎ.ಸಿ. ಮಾರ್ಗದರ್ಶನದಲ್ಲಿ ಆಯೋಜಿಸಿದ ‘ಗಣಕಯಂತ್ರದಲ್ಲಿ ಕನ್ನಡ ಕಲಿಕೆ’ ಸರ್ಟಿಫಿಕೆಟ್ ಕೋರ್ಸನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಯಾವುದೇ ಮೂಲೆಯಲ್ಲಿರುವ ಕನ್ನಡಿಗರೊಂದಿಗೆ ಕನ್ನಡದಲ್ಲೇ ಸಂವಹನ ನಡೆಸುವುದಕ್ಕಾಗಿ ಕಂಪ್ಯೂಟರಿನಲ್ಲಿ ಯೂನಿಕೋಡ್‌ನ ವ್ಯವಸ್ಥೆ ಇದೆ. ಅನೇಕರು ಫೇಸ್ಬುಕ್, ವಾಟ್ಸಾಪ್, ಟ್ವಿಟ್ಟರ್, ಪ್ರತಿತಿಪಿ, ಬ್ಲಾಗ್ ಮೂಲಕ ಕನ್ನಡದಲ್ಲೇ ಸಂವಹನ ನಡೆಸುತ್ತ ಇ-ಮಾಧ್ಯಮದಿಂದಲೇ ಉತ್ತಮ ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳು ಇದರ ಉಪಯೋಗ
ಪಡೆದುಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಘವೇಂದ್ರ ಎ. ಮಾತನಾಡಿ, ವಿದ್ಯಾರ್ಥಿಗಳ ಕೌಶಲ್ಯವನ್ನು ಹೆಚ್ಚಿಸುವ ಇಂತಹ ಸರ್ಟಿಫಿಕೆಟ್ ಕೋರ್ಸ್ಗಳಿಂದಾಗಿ ಅವರಿಗೆ ಭವಿಷ್ಯದಲ್ಲಿ ಅನೇಕ ಅನುಕೂಲತೆಗಳು ಲಭ್ಯವಾಗುತ್ತವೆ ಎಂದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಕರಬ ಉಪಸ್ಥಿತರಿದ್ದರು. ಸರ್ಟಿಫಿಕೆಟ್ ಕೋರ್ಸ್ ಸಂಯೋಜಕರಾದ ಕನ್ನಡ ಉಪನ್ಯಾಸಕ ಶಿವಕುಮಾರ ಅಳಗೋಡು ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಅನುಷಾ ಹೆಬ್ಬಾರ್ ನಿರೂಪಿಸಿ, ಭಾವನಾ ಡಿ.ವಿ. ವಂದಿಸಿದರು.
ಬಳಿಕ ವಿದ್ಯಾರ್ಥಿಗಳಿಂದ ಮಂಗಳೂರು ವಿಶ್ವವಿದ್ಯಾಲಯದ ದ್ವಿತೀಯ ಬಿ.ಕಾಂ, ಹಾಗೂ ದ್ವಿತೀಯ ಬಿ.ಎಸ್‌ಸಿ ಕನ್ನಡ ಪಠ್ಯದಲ್ಲಿರುವ ಲಕ್ಷ್ಮೀಶನ ಜೈಮಿನಿ ಭಾರತದ ಆಯ್ದ ಪದ್ಯಗಳ ಯಕ್ಷಗಾಯನ – ಯುಗಳ ಸಂವಾದ ಕರ‍್ಯಕ್ರಮ ಸಂಪನ್ನಗೊoಡಿತು.

 
 
 
 
 
 
 
 
 
 
 

Leave a Reply