ನಿರಂತರ ಶ್ರಮ ಮತ್ತು ಶ್ರದ್ಧೆ ಕ್ರೀಡೆಯ ಅಭ್ಯಾಸದಲ್ಲಿ ಅತೀ ಅವಶ್ಯಕ –  ಶ್ರೀ ವಿಜಯ್ ಆಳ್ವ

ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಕ್ರೀಡಾ ವಿದ್ಯಾರ್ಥಿಗಳಿಗೆ ಒಂದು ದಿನದ ಪ್ರಶಿಕ್ಷಣ ಕಾರ‍್ಯಕ್ರಮವನ್ನು ಕಾಲೇಜಿನ ಆಡಿಯೋ ವಿಶ್ಯುಲ್ ಹಾಲ್ ನಲ್ಲಿ ಶುಕ್ರವಾರದಂದು ಹಮ್ಮಿಕೊಳ್ಳಲಾಯಿತು. ಎಸ್ ಎಂ ಎಸ್ ಕಾಲೇಜಿನ ಸಮಾಜ ಶಾಸ್ತ್ರ ವಿಭಾಗದ ಉಪನ್ಯಾಸಕರಾದ ಶ್ರೀ ವಿಜಯ್ ಆಳ್ವ ಇವರು ಸಂಪನ್ಮೂಲ ವ್ಯಕ್ತಿಗಳಾಗಿ  ಭಾಗವಹಿ ಸಿದ್ದರು.

ಕ್ರೀಡಾಳುಗಳು ಅತೀ ಹೆಚ್ಚು ಸಮಯವನ್ನು ಮೈದಾನದಲ್ಲಿ ಕಳೆಯಬೇಕು. ನಿರಂತರ ಶ್ರಮ ಮತ್ತು ಶ್ರದ್ಧೆ ಕ್ರೀಡೆಯ ಅಭ್ಯಾಸದಲ್ಲಿ ಅತೀ ಅವಶ್ಯಕ ಎಂಬುದನ್ನು ಮನಗಂಡರು. ಅಲ್ಲದೆ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಹೇಗೆ ತೊಡಗಿಸಕೊಳ್ಳಬೇಕು ಎಂಬ ಬಗ್ಗೆ ಮಾಹಿತಿ ನೀಡಿದರು. ಮಿಲಾಗ್ರಿಸ್ ಕಾಲೇಜಿನ ರಾಸಯನಿಕ ಶಾಸ್ತ್ರ ವಿಭಾಗದ ನಿವೃತ್ತ ಉಪನ್ಯಾಸಕರಾದ ಪ್ರೊ ಜೋಸೆಫ್ ಪೀಟರ್ ಫೆರ್ನಾಂಡಿಸ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕ್ರೀಡೆಯಲ್ಲಿ ಬಡತನ ಸಿರಿತನ ಎಂಬುದಿಲ್ಲ. ಬಡವರಿಗೆ ಹೆಚ್ಚು ಸವಲತ್ತು ಇಲ್ಲದೇ ಇದ್ದರೂ ಕೂಡ ಕ್ರೀಡೆಯಲ್ಲಿ ಅತ್ಯುನ್ನತಿಯನ್ನು ಸಾಧಿಸಿ ಹಿರಿಮೆಯನ್ನು ಗಳಿಸುತ್ತಾರೆ ಎಂಬುದನ್ನು ತಿಳಿಸಿದರು.

ಕಾಲೇಜಿನ ಹಳೇ ವಿದ್ಯಾರ್ಥಿ ಹಾಗೂ ಸದಾ ಕ್ರೀಡಾ ಚಟುವಟಿಗಳಿಗೆ ಪ್ರೋತ್ಸಾಹ ನೀಡುವ ಶ್ರೀ ನಾಗರಾಜ್ ಇವರು ಗೂಗಲ್ ಮೀಟ್ ಮೂಲಕ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ ವಿನ್ಸೆಂಟ್ ಆಳ್ವ ಇವರು ಉಪಸ್ಥಿತರಿದ್ದು ಕಾಲೇಜು ಕ್ರೀಡೆಗೆ ನೀಡುವ ಮಹತ್ವವನ್ನು ಸಭೆಗೆ ಪರಿಚಯಿಸಿದರು. ಈ ಸಂಧರ್ಭದಲ್ಲಿ ಕ್ರೀಡೆಯಲ್ಲಿ ವಿಶೇಷ ಸಾಧನೆಗೈದ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಲಾಯಿತು.

ಮಿಲಾಗ್ರಿಸ್ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಸೋಫಿಯ ಡಯಾಸ್, ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಸವಿತಾ ಹೆಬ್ಬಾರ್, ದೈಹಿಕ ಶಿಕ್ಷಕ ನಿರ್ದೇಶಕರಾದ ಶ್ರೀ ನಿಖಿಲ್ ಡಿಸೋಜ ಮತ್ತು ಕುಮಾರಿ ವಾಣಿ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬ್ಲ್ಯಸ್ ಸ್ವಾಗತಿಸಿ, ನೌಫಲ್ ವಂದಿಸಿ, ಜಿಮ್ಸನ್ ನಿರೂಪಿಸಿದರು. ಕಾಲೇಜಿನ ಕ್ರೀಡಾ ವಿದ್ಯಾರ್ಥಿಗಳು, ಹೊಸದಾಗಿ ಕಾಲೇಜಿಗೆ ಸೇರ್ಪಡೆಗೊಂಡ ವಿದ್ಯಾರ್ಥಿಗಳು ಭಾಗವಹಿಸಿದ್ದರು.

 
 
 
 
 
 
 
 
 
 
 

Leave a Reply