ಮಹಿಳೆಯರನ್ನು ಕೀಳಾಗಿ ಕಾಣುವುದು ಬಿಜೆಪಿಗರಿಗೆ ಹೊಸದೇನಲ್ಲ – ವೆರೋನಿಕಾ ಕರ್ನೆಲಿಯೋ

ಮಹಿಳೆಯರನ್ನು ಸದಾ ಬಿಜೆಪಿಗರು ಮಾತೆ, ತಾಯಿ ಎಂದು ಕೇವಲ ನಾಟಕೀಯವಾಗಿ ಸಂಬೋಧಿಸುವುದು ಬಿಟ್ಟರೆ ನಿಜವಾಗಿ ಮಹಿಳೆಯರ ಮೇಲೆ ಇರುವ ಗೌರವ ಏನು ಎಂಬುದು ಬೆಳಗಾವಿ ಮಾಜಿ ಶಾಸಕ ಸಂಜಯ ಪಾಟೀಲ್‌ ಅವರ ಹೇಳಿಕೆಯಿಂದ ಮತ್ತೊಮ್ಮೆ ಸಾಬೀತಾಗಿದೆ ಎಂದು ಕೆಪಿಸಿಸಿ ಪ್ಯಾನಲಿಸ್ಟ್ ವೆರೋನಿಕಾ ಕರ್ನೆಲಿಯೋ ಹೇಳಿದ್ದಾರೆ.

ಮಹಿಳೆಯರನ್ನು ಕೀಳಾಗಿ ಕಾಣುವುದು ಬಿಜೆಪಿಗರಿಗೆ ಹೊಸದೇನಲ್ಲ. ಒರ್ವ ಶಾಸಕಿಯಾಗಿ ಕ್ಷೇತ್ರದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿರುವ ಲಕ್ಷ್ಮೀ ಹೆಬ್ಬಾಳ್ಕರ್‌ ರನ್ನು ರಾತ್ರಿ ರಾಜಕೀಯ ಮಾಡುವ ಶಾಸಕಿ ಎನ್ನುವ ರೀತಿ ಕೀಳಾಗಿ ಮಾತನಾಡಿರುವುದು ಖಂಡನೀಯ. ಮಹಿಳೆಯರನ್ನು ಮಾತೆ, ತಾಯಿ ಇನ್ನೆಲ್ಲಾ ಹೆಸರಿನಿಂದ ಕರೆಯುವ ಇವರಿಗೆ ಒರ್ವ ಮಹಿಳೆಗೆ ಯಾವ ರೀತಿಯಲ್ಲಿ ಗೌರವಿಸಬೇಕು ಎನ್ನುವ ಕನಿಷ್ಠ ಜ್ಞಾನ ಇಲ್ಲದಿರುವುದು ವಿಷಾದನೀಯ ಸಂಗತಿಯಾಗಿದೆ. ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುವುದು ಬಿಜೆಪಿಗರ ರಕ್ತದಲ್ಲಿಯೇ ಸೇರಿಕೊಂಡಿದೆ ಎನ್ನುವುದು ಪದೇ ಪದೇ ಇವರ ನಾಯಕರು ಮಾಡಿದ ವರ್ತನೆಗಳಿಂದ ಈಗಾಗಲೇ ಸಾಬೀತಾಗಿದೆ. ಇಷ್ಟಾದರೂ ಕೂಡ ತಾವು ಸಾಚಾ ಎನ್ನುವ ರೀತಿ ಮಾತನಾಡುತ್ತಿರುವ ಬಿಜೆಪಿಗರು ಮೊದಲು ತಮ್ಮ ಬಳಸುವ ಭಾಷೆಯನ್ನು ಬದಲಾಯಿಸಿಕೊಳ್ಳುವುದು ಸೂಕ್ತ.

ಒರ್ವ ಮಹಿಳಾ ಶಾಸಕಿಯಾಗಿ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದು ಬಿಜೆಪಿ ಆಡಳಿತದಲ್ಲಿ ಮಹಿಳೆಯರಿಗೆ ಯಾವುದೇ ರೀತಿಯ ರಕ್ಷಣೆ ಇಲ್ಲ ಎನ್ನುವುದು ಇತ್ತೀಚೆಗೆ ರಾಜ್ಯದಲ್ಲಿ ನಡೆದಿರುವ ಅತ್ಯಾಚಾರ ಪ್ರಕರಣಗಳಿಂದ ಜಗತ್ತಿಗೆ ತಿಳಿದಿದೆ. ಮಹಿಳೆಯರು ಸ್ವತಂತ್ರವಾಗಿ ತಿರುಗಾಡುವುದು ಸಹ ಕಷ್ಟ ಸಾಧ್ಯವಾಗುತ್ತಿದೆ. ಒಂದು ಕಡೆ ದೇಶದ ಪ್ರಧಾನಿ ಗಳು ಬೇಟಿ ಪಡಾವೋ ಬೇಟಿ ಬಚಾವೋ ಎಂಬ ಘೋಷಣೆ ಕೂಗುತ್ತಿದ್ದರೆ ಇವರದ್ದೇ ಪಕ್ಷದ ಶಾಸಕರು, ನಾಯಕರು ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸುವುದು ಮಾತ್ರವಲ್ಲದೆ ಮಹಿಳೆಯ ಬಗ್ಗೆ ಕೀಳಾಗಿ ಮಾತನಾಡುತ್ತಿದ್ದಾರೆ. ಇಂತಹ ವರ್ತನೆ ಬಿಜೆಪಿಗರ ನೈಜ ಸಂಸ್ಕೃತಿ ಏನು ಎನ್ನುವುದನ್ನು ಬಿಂಬಿಸುತ್ತದೆ.

ಹೆಣ್ಣನ್ನು ಪೂಜಿಸುವ ಸಮಾಜದಲ್ಲಿ ಒಬ್ಬ ಶಾಸಕಿಯ ಬಗ್ಗೆ ಹಗುರವಾಗಿ ಮಾತನಾಡಿರುವ ಸಂಜಯ ಪಾಟೀಲ ಅವರು ಕೂಡಲೇ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯದ ಮಹಿಳೆಯರು ಬಿಜೆಪಿಗೆ ತಕ್ಕ ಪಾಠ ಕಲಿಸುವುದರಲ್ಲಿ ಸಂಶಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 
 
 
 
 
 
 
 
 

Leave a Reply