ವಿದ್ಯಾರ್ಥಿಗಳಿಗೆ ಸಾಮಾಜಿಕ ಜವಾಬ್ದಾರಿ ಅತ್ಯಗತ್ಯ- ಸಮಾಜ ಸೇವಕ ರವಿ ಕಟಪಾಡಿ

ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರ: ಇಲ್ಲಿನ ಎನ್ ಎಸ್ ಎಸ್ ಘಟಕವು ಎನ್ ಎಸ್ ಎಸ್ ದಿನಾಚರಣೆಯನ್ನು  ಮಂಗಳವಾರ ಕಾಲೇಜಿನ ರಜತ ಮಹೋತ್ಸವ ಸಭಾಂಗಣದಲ್ಲಿ ಆಯೋಜಿಸಿತು. ಪ್ರಖ್ಯಾತ ಸಮಾಜ ಸೇವಕ ರವಿ ಕಟಪಾಡಿ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

 ಸತ್ಪ್ರಜೆಗಳಾದ ನಾವು ಸಮಾಜಕ್ಕೆ ನಮ್ಮಿಂದ ಆದಷ್ಟು ಸಹಾಯ  ಮಾಡಬೇಕು, ನಾವು ಬದುಕಿ ಇನ್ನೊಬ್ಬರನ್ನು ಬದುಕಿಸುವ ಮನೋಭಾವ ನಮ್ಮದಾಗಬೇಕು. ವಿದ್ಯಾರ್ಥಿಗಳು ಸಾಮಾಜಿಕ ಜವಬ್ದಾರಿಯನ್ನು ಅರಿತು ಸಮಾಜಕ್ಕೆ ತಮ್ಮ ಕೊಡುಗೆಯನ್ನು ನೀಡಿ ಸಮಾಜದ ಋಣವನ್ನು ತೀರಿಸಬೇಕು ಎಂಬುದನ್ನು ಅರಿಕೆ ಮೂಡಿಸಿದರು. ಅಲ್ಲದೆ ಸಮಾಜದಲ್ಲಿ ಕೋಮು ಸೌಹಾರ್ಧತೆಯನ್ನು ಉಂಟುಮಾಡಿ ತಮ್ಮ ಶಕ್ತಿ ಮತ್ತು ಜ್ಞಾನವನ್ನು ಸಮಾಜಕ್ಕೆ ಸಮರ್ಪಿಸಬೇಕು ಎಂಬುದನ್ನು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಮಿಲಾಗ್ರಿಸ್ ವಿದ್ಯಾ ಸಂಸ್ಥೆಗಳ ಸಂಚಾಲಕರಾದ ಫಾದರ್ ವೆಲೆರಿಯನ್ ಮೆಂಡೋನ್ಸಾ ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ವಿದ್ಯಾರ್ಥಿಗಳಿಗೆ ಸಮಾಜಿಕ ಸೇವೆ ಎಂಬುದು ಅತೀ ಅವಶ್ಯಕವಾಗಿರಬೇಕು, ಅಗತ್ಯ ಉಳ್ಳವರಿಗೆ ಸಹಾಯ ಮಾಡುವ ಮನಸ್ಸು ನಮ್ಮದಾಗಬೇಕು, ಈ ನಿಟ್ಟಿನಲ್ಲಿ ರವಿ ಕಟಪಾಡಿಯವರು ನಮ್ಮೆಲ್ಲರಿಗೆ ಮಾರ್ಗದರ್ಶಕರು ಎಂಬುದನ್ನು ಮನಗಂಡರು.

ಮಿಲಾಗ್ರಿಸ್ ಪದವಿಪೂರ್ವ  ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಸವಿತಾ ಕುಮಾರಿ, ಮಿಲಾಗ್ರಿಸ್ ಪದವಿ ಕಾಲೇಜಿನ ಉಪ ಪ್ರಾಂಶುಪಾಲರಾದ ಶ್ರೀಮತಿ ಸೋಫಿಯಾ ಡಯಾಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.  ಶ್ರೇಯಾ ಮತ್ತು ವರ್ಷಿಣಿ, ವಿವಿಧ ಸ್ಪರ್ಧೆಗಳನ್ನು ಸ್ವಯಂಸೇವಕರಿಗೆ ಆಯೋಜಿಸಿದರು. ಸ್ವಯಂಸೇವಕರಿoದ ವಿವಿಧ ಸಾಂಸ್ಕೃತಿಕ ಕಾರ‍್ಯಕ್ರಮಗಳು ಜರಗಿದವು.

ಘಟಕದ ನಾಯಕರಾದ ಸುವಾಗ್, ಮತ್ತು ಪವನ್ ಕಾರ‍್ಯಕ್ರಮಗಳನ್ನು ನಡೆಸಿಕೊಟ್ಟರು. ಘಟಕದ ನಾಯಕರಾದ ಮಂಜುನಾಥ ಸ್ವಾಗತಿಸಿ, ಸಾಕ್ಷಿತ್ ವಂದಿಸಿ, ಕುಮಾರಿ ಸ್ವಾತಿ ನಿರೂಪಿಸಿದರು. ರಾಷ್ಟ್ರೀಯ ಸೇವಾ ಯೋಜನಾ ಘಟಕದ ಅಧಿಕಾರಿಗಳಾದ ಅನುಪಮಾ ಮತ್ತು ಮೆಲ್ಸನ್ ಡಿಸೋಜ, ಕಾಲೇಜಿನ ಉಪನ್ಯಾಸಕರು ಹಾಗೂ ಎಲ್ಲಾ ಸ್ವಯಂಸೇವಕರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply