ಮಹಾತ್ಮಗಾಂಧಿ ಸ್ಮಾರಕ ಸಂಧ್ಯಾ ಕಾಲೇಜು ಉಡುಪಿ

ಉಡುಪಿ : ಎಂ.ಜಿ.ಎಂ ಸಂಧ್ಯಾ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಕನ್ನಡ ಸಾಹಿತ್ಯ ವೇದಿಕೆಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕನ್ನಡ ವಿಭಾಗದ ಉಪನ್ಯಾಸಕರಾದ ಡಾ. ಸತೀಶ ಜಿ. ನಾಯ್ಕ ಪ್ರಾಸ್ತಾವಿಕ ಮಾತನಾಡಿ, ನಮ್ಮ ಕಾಲೇಜಿನಲ್ಲಿ ಈ ವರ್ಷಪೂರ್ತಿ ನಡೆಯುವ ಎಲ್ಲಾ ಸಾಂಸ್ಕೃತಿಕ ಚಟುವಟಿಕೆಯ ಜೊತೆಗೆ ಹಳಗನ್ನಡ ಆಯ್ದ ಪದ್ಯಗಳ ಗಮಕ ಹಾಗೂ ಗಾಯನ ಸ್ಪರ್ಧೆ ಮತ್ತು ಜಾನಪದ ತ್ರಿಪದಿಯ ಗಾಯನ ಸ್ಪರ್ಧೆ ಆಯೋಜಿಸಲಾಗುವುದು ಎಂದರು.

ಮುಖ್ಯ ಅತಿಥಿಗಳಾದ ಹಿರಿಯ ವಿದ್ವಾಂಸರಾದ ಡಾ. ಶ್ರೀಕಾಂತ ರಾವ್‌ ಸಿದ್ದಾಪುರ ಅವರು ಮಾತನಾಡಿ ನಮ್ಮ ಇಂದಿನ ಗಡಿಬಿಡಿ ಜೀವನಕ್ರ, ಪುರುಷೋತ್ತಿಲ್ಲದ ಕಾಲಘಟ್ಟದಲ್ಲಿ ಸಂಗೀತ ಸಾಹಿತ್ಯ ಮತ್ತು ಕಲೆಯ ಅಭ್ಯಾಸದ ತುರ್ತು ಅಗತ್ಯವಾಗಿದೆ. ಯಾಕೆಂದರೆ ಸಮಾಜದಲ್ಲಿ ಅತಿಹೆಚ್ಚು ಆತ್ಮಹತ್ಯೆ ಮಾಡಿಕೊಳ್ಳುವ ಈ ಕಾಲದಲ್ಲಿ ಮಕ್ಕಳಲ್ಲಿ ನೈತಿಕ ಬಲ ಮತ್ತು ಆತ್ಮಸ್ತೈರ್ಯವನ್ನು ಕ್ರಿಯಾಶೀಲ ಚಟುವಟಿಕೆ ನಡೆಸುವ ಮೂಲಕ ಜೀವನ ಪ್ರೀತಿಯ ಸೆಲೆಯನ್ನು ಹುಟ್ಟಿಸಬೇಕು.

 

ಪರೀಕ್ಷೆಯ ಅಂಕ ಎಷ್ಟು ಮುಖ್ಯವೋ ಸಾಹಿತ್ಯ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದು ಅಷ್ಟೇ ಮುಖ್ಯ. ಕಾಲೇಜಿನಲ್ಲಿ ಮಕ್ಕಳ ಶೈಕ್ಷಣಿಕ ಚಟುವಟಿಕೆಯ ಜೊತೆಗೆ ಸಾಹಿತ್ಯ, ಸಂಗೀತ, ಕಲೆ, ಲಲಿತ ಕಲೆ, ಗಮಕಗಳು ಮಾನವನನ್ನು ಮಾನವರನ್ನಾಗಿಸುತ್ತದೆ ಎಂದರು. ಗಣಕ ವಿಭಾಗದ ಮುಖ್ಯಸ್ಥರಾದ ಡಾ. ವಿಶ್ವನಾಥ ಪೈ ಅವರು ಮಾತನಾಡಿ ಮಕ್ಕಳಲ್ಲಿ ವಿಶೇಷವಾದ ಪುಸ್ತಸಕದ ಸಂಗ್ರಹ ಮತ್ತು ಪುಸ್ತಕಗಳ ಓದಿನ ಪ್ರವೃತ್ತಿಗಳು ಹುಟ್ಟಬೇಕು ಆ ಮೂಲಕ ಸಾಹಿತ್ಯ ವಿಜ್ಞಾನ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವಂತವರಾಗಬೇಕು ಎಂದರು.

 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಚಾರ್ಯರಾದ ಡಾ. ದೇವಿದಾಸ ಎಸ್.‌ ನಾಯ್ಕ ಅವರು ಮಾತನಾಡಿ ವಿದ್ಯಾರ್ಥಿಗಳ ಬದುಕಿನಲ್ಲಿ ಓದಿನ ಜೊತೆಗೆ ವಿದ್ವಾಂಸರ, ಜ್ಞಾನಿಗಳ ಸಂಸರ್ಗವೂ ಅಗತ್ಯವಿದೆ. ವಿದ್ವತ್‌ ವಲಯದ ಸಂಸರ್ಗ ದಿಂದಾಗಿ ವಿದ್ಯಾರ್ಥಿಗಳು ಸಂಸ್ಕಾರವಂತರಾಗಿ ಬದುಕು ನಡೆಸಬಹುದು. ಕಾಲೇಜು ಜೀವನದಲ್ಲಿ ಸಾಹಿತ್ಯ, ಸಂಗೀತ, ಕಲೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಕ್ರಿಯಾಶೀಲರಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಬಹುದು ಎಂದರು.

 

ಈ ಕಾರ್ಯಕ್ರಮದಲ್ಲಿ ಹಿರಿಯ ವಿದ್ವಾಂಸರಾದ ಡಾ. ಜಗದೀಶ ಶೆಟ್ಟಿಯವರು ಭಾಗವಹಿಸಿದ್ದರು. ಕು. ಶ್ರೀಕರ ನಿರೂಪಣೆ ನಡೆಸಿಕೊಟ್ಟರು. ಕು. ಹರ್ಷಿತಾ ಸಂಗಡಿಗರು ಪ್ರಾರ್ಥಿಸಿದರು. ಪ್ರತೀಕ್ಷಾ ಸಂಗಡಿಗರು ಭಾವಗೀತೆ ಗಾಯನ ಮಾಡಿದರು. ಕು. ಧನ್ಯ ವಂದನಾರ್ಪಣೆ ಮಾಡಿದರು.

 
 
 
 
 
 
 
 
 
 
 

Leave a Reply