ಉಡುಪಿಯ ಮಾಜಿ ಶಾಸಕ ಶ್ರೀ ರಘುಪತಿ ಭಟ್ ಅವರಿಗೆ ದುಬೈಯಲ್ಲಿ ಸನ್ಮಾನ

ದುಬೈ: ಕರ್ನಾಟಕ ಕರಾವಳಿಯ ಧೀಮಂತ ಮತ್ತು ಕ್ರಿಯಾತ್ಮಕ ಜನ ನಾಯಕ ಹಾಗು ಮಾಜಿ ಶಾಸಕ ಶ್ರೀ ರಘುಪತಿ ಭಟ್ ಅವರನ್ನು ಯುಎಇ  ಬ್ರಾಹ್ಮಣ ಸಮಾಜ ಯುಎಇ  ಕನ್ನಡದ ಗಣ್ಯವ್ಯಕ್ತಿಗಳ ಸಮ್ಮುಖದಲ್ಲಿ 26-9-2023 ರಂದು ಆತ್ಮೀಯವಾಗಿ ಸನ್ಮಾನಿಸಿದರು . ಈ ಕಾರ್ಯಕ್ರಮದಲ್ಲಿ ಕರ್ನಾಟಕ ಅನಿವಾಸಿ ಭಾರತೀಯ ವೇದಿಕೆಯ (KNRI)ನಅಧ್ಯಕ್ಷರಾದಂತಹ ಪ್ರವೀಣ್ ಕುಮಾರ್ ಶೆಟ್ಟಿ , ವೀನಸ್ ಗ್ರೂಪ್  ಹೋಟೆಲ್ಸ್ ನ ಮಾಲೀಕರಾದ ಪುತ್ತಿಗೆ ವಾಸುದೇವ ಭಟ್ , ಭೀಮ ಜ್ಯೂವೆಲ್ಲರ್ಸ್ ನ ಮಾಲೀಕರಾದ ನಾಗರಾಜ ರಾವ್ , ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಪೂರ್ವ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ,  ಮತ್ತು ಸನ್ಮಾನಿತರಾದ ಉಡುಪಿ ಮಾಜಿ ಶಾಸಕ ರಘುಪತಿ ಭಟ್ ಅವರು ಅತಿಥಿಗಳಾಗಿ ಭಾಗವಹಿಸಿದರು .ಬ್ರಾಹ್ಮಣ ಸಮಾಜದ ಸಂಚಾಲಕರಾದ ಸುಧಾಕರ ಪೇಜಾವರ ಉಪಸ್ಥಿತರಿದ್ದರು . ಅತಿಥಿಗಳು ಜ್ಯೋತಿ ಪ್ರಜ್ವಲಿಸುವುದರ ಮೂಲಕ ಆರಂಭಗೊಂಡ  ಕಾರ್ಯಕ್ರಮದಲ್ಲಿ  ಸುಧಾಕರ ಪೇಜಾವರ ಅವರು ಎಲ್ಲರನ್ನು ಸ್ವಾಗತಿಸಿ ಈ ವರ್ಷ 20 ನೇ ವರ್ಷ ಪೂರೈಸುತ್ತಿರುವ  ಯುಎಇ ಬ್ರಾಹ್ಮಣ ಸಮಾಜದ ಸಾಧನೆ,  ಉದ್ದೇಶ, ಜವಾಬ್ದಾರಿ ಮತ್ತು ಯೋಜನೆಗಳನ್ನು ಪ್ರಸ್ತಾಪಿಸಿದರು ಹಾಗು ರಘುಪತಿ ಭಟ್ ರನ್ನು ಅಭಿನಂದಿಸಿದರು . ಪ್ರವೀಣ್ ಶೆಟ್ಟಿ ಯವರು ಮಾತನಾಡುತ್ತ  ರಘುಪತಿ ಭಟ್ ಅವರ ವೃತ್ತಿಪರತೆ , ನಿಷ್ಠೆ ಮತ್ತು ಸಕಾಲಿಕ ಸಹಾಯವನ್ನು ನೆನೆಯುತ್ತಾ , ಅವರು ಜಾತಿ ಧರ್ಮಗಳ ಎಲ್ಲೆ  ಮೀರಿ, ಪ್ರಜಾಪ್ರಭುತ್ವದ ಪರವಾಗಿ ದುಡಿದು ಸೈ  ಎನಿಸಿಕೊಂಡ ನಿದರ್ಶನಗಳನ್ನು ತಿಳಿಸಿದರು.  ಬ್ರಾಹ್ಮಣ ಸಮಾಜದ ವಿಂಶತಿ ಉತ್ಸವದ ಗೌರವ ಅಧ್ಯಕ್ಷರಾದ ಪುತ್ತಿಗೆ ವಾಸುದೇವ ಭಟ್ ವರು ರಘುಪತಿ ಭಟ್ ಅವರಿಗೆ ಇನ್ನಷ್ಟು ಸಮಾಜ ಸೇವೆ ಮಾಡುವ ಶಕ್ತಿ , ಕ್ಷಮತೆ ಮತ್ತು ಅಧಿಕಾರವನ್ನು ಭಗವಂತ ಕರುಣಿಸಲಿಯೆಂದು ಹಾರೈಸಿದರು. ಭೀಮ ಜ್ಯೂವೆಲ್ಲರ್ಸ್ ನ ನಾಗರಾಜ ರಾವ್ ಅವರು ಕೂಡ ಭಟ್ ಅವರನ್ನು ಅಭಿನಂದಿಸಿ ಶುಭ ಹಾರೈಸಿದರು. ರಘುಪತಿ ಭಟ್ ಅವರ ಆಪ್ತರು  ಮತ್ತು  ಒಡನಾಡಿಯಾದಂತಹ ಮಟ್ಟಾರ್ ರತ್ನಾಕರ ಹೆಗ್ಡೆ ಅವರು ಮಾತನಾಡುತ್ತ ರಘುಪತಿ ಭಟ್ ಉಡುಪಿ ಜಿಲ್ಲೆಯಾದ್ಯಂತ ಮಾಡಿರುವಂತಹ ಅಭಿವೃದ್ಧಿಕಾರ್ಯಗಳು , ಸಮಾಜದ ಏಳಿಗೆಗಾಗಿ ಕೈಗೊಂಡಂತಹ ಕಾರ್ಯಗಳು ಅವರ ಶೈಕ್ಷಣಿಕ ಸೇವೆ , ಸಾರಿಗೆ ಮತ್ತು ಇತರ ಕ್ಷೇತ್ರಗಳಲ್ಲಿ ಅವರು ಪಡೆದ  ಯಶಸ್ಸುಗಳ ಬಗ್ಗೆ ಮಾತನಾಡುತ್ತ ಬ್ರಾಹ್ಮಣ ಸಮುದಾಯ ಇತರ ಸಮಾಜದವರನ್ನು ಒಂದುಗೂಡಿಸುತ್ತ ಮಾರ್ಗದರ್ಶನ ನೀಡುವಂತಹ ಮತ್ತು  ಒಳಿತು ಬಯಸುವ ಸದೃಢ  ಸಮುದಾಯ ಎಂದು ಅಭಿಪ್ರಾಯ  ಪಟ್ಟರು. ರಘುಪತಿ ಭಟ್ ಅವರು ಸನ್ಮಾನ ಸ್ವೀಕರಿಸಿ  ಮಾತನಾಡುತ್ತ ಭಾರತದ ಅನಿವಾಸಿಗಳು ದೇಶದ ಅಭಿವೃದ್ಧಿಗೆ ಬಹಳಷ್ಟು ಕಾಣಿಕೆ ನೀಡಿದ್ದು , ಅವರ ಕ್ಷೇತ್ರದಲ್ಲೂ ಅನಿವಾಸಿಗಳು ಸಮಾಜ , ಶೈಕ್ಷಣಿಕ ಮತ್ತು ಉದ್ಯಮಕ್ಷೇತ್ರದಲ್ಲಿ ಸಾಧನೆ ಮಾಡಿರುವುದನ್ನು ನೆನೆದರು . ಕೋವಿಡ್ ಸಮಯದಲ್ಲಿ ಹುಟ್ಟಿಕೊಂಡ ವಿಭಿನ್ನ ಆಲೋಚನೆಯಾದ ಬಂಜರು ಭೂಮಿಯಲ್ಲಿ ಕೃಷಿಮಾಡಿ ,  ಪುರುಷರು ಮಹಿಳೆಯರು, ವಿದ್ಯಾರ್ಥಿಗಳು , ನಟ,ನಟಿಯರು ಎಲ್ಲರನ್ನು ಬಳಸಿಕೊಂಡು ದುಡಿಸಿಕೊಂಡು ದಾಖಲೆಯ ಸಾವಯವ ಭತ್ತ ಬೆಳೆದ ಮತ್ತು ಅಕ್ಕಿಯ ಹೊಸ ಬ್ರಾಂಡ್ ಮಾಡಿ ದೇಶ ವಿದೇಶದ ಮಾರುಕಟ್ಟೆಯಲ್ಲಿ ಲಭ್ಯವಾಗಿಸಿದ ಸಾಹಸಗಾಥೆಯನ್ನು ವಿವರಿಸಿದರು. ಅವರ ರಾಜಕೀಯ ಗುರುಗಳಾದ ದಿವಂಗತ ವಿ .ಎಸ್ .ಆಚಾರ್ಯರು ಮಾತು ಧಾರ್ಮಿಕ ಗುರುಗಳಾದ ಪೇಜಾವರದ ಹಿಂದಿನ ಸ್ವಾಮಿಗಳು ಹಾಕಿಕೊಟ್ಟ ಸನ್ಮಾರ್ಗಲ್ಲಿ ನಡೆದು ಬಂದಿದಕ್ಕೆ ಇಷ್ಟೊಂದು ಜನರ ಪ್ರೀತಿ ಮತ್ತು ಹುದ್ದೆಗಳು ದೊರಕಿರುವುದೆಂದು ತಿಳಿಸಿದರು.

ಕರ್ನಾಟಕ ಸಂಘ ದುಬೈ ಯ ಅಧ್ಯಕ್ಷರಾದ ಶಶಿಧರ್ ನಾಗರಾಜಪ್ಪ ಮತ್ತು ಕನ್ನಡ ಪಾಠ ಶಾಲೆಯ ನಾಗರಾಜರಾವ್ ಅವರು ಮಾತನಾಡುತ್ತ   ಉಡುಪಿಯಲ್ಲಿ ಅಳಿವಿನಂಚಿನಲ್ಲಿದ ಕನ್ನಡ ಶಾಲೆಯನ್ನು ಉಳಿಸಿಕೊಡುವಲ್ಲಿ ರಘುಪತಿ ಭಟ್ ಮಾಡಿದ ಸಹಾಯವನ್ನು ನೆನೆದರು. ರಘುಪತಿಭಟ್ ಅವರನ್ನು ಹತ್ತಿರದಿಂದ ಬಲ್ಲವರಾದ ಶ್ರೀನಿವಾಸ್ ಆಚಾರ್ ಅವರು ರಘುಪತಿಭಟ್ ಅವರ ವಿನೂತನ ಆಲೋಚನೆಯಿಂದ ಕೆಲಸ ಮಾಡುವ ವೈಖರಿಯನ್ನು ತಿಳಿಸಿದರು . ವೀರಶೈವ ಲಿಂಗಾಯಿತ ಸಮಾಜದ ಅಧ್ಯಕ್ಷರಾದಂತಹ ಮಲ್ಲಿಕಾರ್ಜುನ ಗೌಡ ಅವರು ಶುಭವನ್ನು ಹಾರೈಸಿ ಮತ್ತೊಮ್ಮೆ ಭಟ್ ಅವರಿಗೆ ಮತ್ತಷ್ಟು ಯಶಸ್ಸು ಸಿಗುವಂತೆ ಉಡುಪಿ ಕೃಷ್ಣನ ನಲ್ಲಿ ಪ್ರಾರ್ಥಿಸಿದರು.

ವಿಂಶತಿ ಉತ್ಸವದ 7 ನೇ ಕಾರ್ಯಕ್ರಮವಾದ ಈ ಸಾಧಕ ನಾಯಕರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಲ್ಲಾ ಅಥಿತಿಗಳ, ಗಣ್ಯರ ಮತ್ತು ಸಭಿಕರ ಒಕ್ಕೊರೊಳ ಬೇಡಿಕೆ, ಪ್ರಾರ್ಥನೆ ಮತ್ತು ಆಶಯ ರಘುಪತಿ ಭಟ್ ಅವರಿಗೆ ಮತ್ತೊಮ್ಮೆ ಅಧಿಕಾರಕ್ಕೇರುವ ಅವಕಾಶವನ್ನು ಪಕ್ಷನೀಡಿ ಅವರನ್ನು ಗೌರವಿಸಬೇಕು. ಇಂತಹ ಧೀಮಂತ ನಾಯಕನಿಗೆ ಇನ್ನೂ ದೊಡ್ಡ ಹುದ್ದೆಗಳು ಲಭಿಸಲಿ ಎಂಬುದಾಗಿತ್ತು . ಕೃಷ್ಣಪ್ರಸಾದ್ ರಾವ್ ಅವರ  ವಂದನಾರ್ಪಣೆಯೊಂದಿಗೆ ಮುಕ್ತಾಯಗೊಂಡ ಕಾರ್ಯಕ್ರಮವನ್ನು ಆರತಿ ಅಡಿಗ ರವರು ಅಚ್ಚುಕಟ್ಟಾಗಿ ನಿರೂಪಿಸಿದರು

 
 
 
 
 
 
 
 
 
 
 

Leave a Reply