ಶ್ವೇತಾ ಪೂಜಾರಿಗೆ ಚಿನ್ನದ ಪದಕ.

ಬೆಂಗಳೂರಿನ ಇಂಟರ್ ನ್ಯಾಷನಲ್ ಸ್ಕೂಲ್ ಆಫ್ ಬಿಸಿನೆಸ್ ಅಂಡ್ ರಿಸರ್ಚ್ ನ  ವಿದ್ಯಾರ್ಥಿನಿ ಶ್ವೇತಾ ಪೂಜಾರಿ  ಬೆಂಗಳೂರು ವಿಶ್ವವಿದ್ಯಾನಿಲಯದ 2019- 21ರ  ಎಂಬಿಎ ಪರೀಕ್ಷೆಯ ಮಾರ್ಕೆಟಿಂಗ್ ಮತ್ತು ಫೈನಾನ್ಸ್ ವಿಭಾಗದ ಪರೀಕ್ಷೆಯಲ್ಲಿ ಕಾಲೇಜಿಗೆ ಅತ್ಯಧಿಕ ಅಂಕ ಗಳಿಸುವ ಮೂಲಕ ಚಿನ್ನದ ಪದಕವನ್ನು ಗಳಿಸಿರುತ್ತಾರೆ.
ಪಠ್ಯಕ್ರಮದ  ಹೊರತಾಗಿ ಸಮಾಜಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿರುವ ವಿದ್ಯಾರ್ಥಿಗಳಿಗೆ ನೀಡಲಾಗುವ ಐ ಎಸ್ ಬಿ ಆರ್ ಕಾಲೇಜಿನ ಜೆಮ್ಸ್ ಮತ್ತು ಶ್ರೀಮತಿ ರಸಿಲಾ ಕೊಠಾರಿ ಪುರಸ್ಕಾರವನ್ನು ಸಹ ಪಡೆದುಕೊಂಡಿದ್ದಾರೆ.
ಐಸಿಐಸಿಐ ಬ್ಯಾಂಕ್ ಇನ್ಫೋಸಿಸ್ ಬ್ರಾಂಚನಲ್ಲಿ ಉದ್ಯೋಗಿಯಾಗಿರುವ ಇವರು  ಕೊಡಪಾಡಿ ಹೊಸ್ಮನೆಯ ಮಹಾಬಲ ಪೂಜಾರಿ ಮತ್ತು ಸುಶೀಲ ಪೂಜಾರಿಯವರ ಪುತ್ರಿ.
 
 
 
 
 
 
 
 
 

Leave a Reply