ಮಿಲಾಗ್ರಿಸ್ ಕಾಲೇಜು~ ಎನ್ ಎಸ್ ಎಸ್ ದಿನಾಚರಣೆ 

ಮಿಲಾಗ್ರಿಸ್ ಕಾಲೇಜಿನ ಎನ್ಎಸ್ಎಸ್ ಘಟಕದ ಉದ್ಘಾಟನಾ ಕಾರ್ಯಕ್ರಮ ಮತ್ತು ಎನ್ಎಸ್ಎಸ್ ದಿನಾಚರಣೆಯನ್ನು ಆಚರಿಸಲಾಯಿತು. ಎನ್ ಎಸ್ ಎಸ್ ದಿನಾಚರಣೆಯ ನಿಮಿತ್ತ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಶಿರ್ವ ಸಂತ ಮೇರಿ ಕಾಲೇಜಿನ ಇತಿಹಾಸ ವಿಭಾಗದ ಪ್ರಾಧ್ಯಾಪಕರಾಗಿರುವ ಶ್ರೀ ಪ್ರೇಮನಾಥ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿನ್ಸೆಂಟ್ ಆಳ್ವ ಮತ್ತು ಕಾಲೇಜಿನ ಐ ಕ್ಯೂ ಎ ಸಿ ಸಂಯೋಜಕರಾದ ಡಾ. ಜಯರಾಮ್ ಶೆಟ್ಟಿಗಾರ್ ಮತ್ತು ಎನ್‌ಎಸ್‌ಎಸ್ ನ ಅಧಿಕಾರಿಗಳು ಉಪಸ್ಥಿತಿರಿದ್ದರು.

ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ಪ್ರೇಮನಾಥ್ ರವರು ವಿದ್ಯಾರ್ಥಿಗಳನ್ನುದ್ದೇಶಿಸಿ ತಿಳಿಯಪಡಿಸಿದರೆನೆಂದರೆ ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಗೆ ವಿಭಿನ್ನ, ಉತ್ಸಾಹ, ಶಕ್ತಿಯುತ ಮತ್ತು ವಿಭಿನ್ನ ಮನುಷ್ಯರಾಗಿರಲು ಕಲಿಸುತ್ತದೆ. ಮನುಷ್ಯರಾಗಿರುವುದು ಜೀವನದಲ್ಲಿ ಅತ್ಯುನ್ನತ ಸದ್ಗುಣಗಳಾಗಿರುತ್ತದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಕಾಲೇಜು ನೀಡುವ ಎಲ್ಲ ಅವಕಾಶಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ.ವಿನ್ಸೆಂಟ್ ಆಳ್ವ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ಸಮಾಜಕ್ಕಾಗಿ ಸೇವೆ ಸಲ್ಲಿಸುವ ಮತ್ತು ಈ ಭೂಮಿಯ ಮೇಲಿನ ಪ್ರತಿಯೊಂದು ಜೀವವನ್ನು ಗೌರವಿಸುವ ಗೌರವವನ್ನು ತನ್ನ ಮತ್ತು ಇತರರ ಜೀವನದಲ್ಲಿ ತುಂಬುವ ಶ್ರೀಮಂತ ಪರಂಪರೆಯನ್ನು ಎನ್‌ಎಸ್‌ಎಸ್ ಹೊಂದಿದೆ. ವಿದ್ಯಾರ್ಥಿಗಳು ಅತ್ಯಂತ ಶಿಸ್ತಿನ ವಿದ್ಯಾರ್ಥಿಗಳಾಗಬೇಕು ಮತ್ತು ಶಿಸ್ತುಬದ್ಧವಾಗಿರುವುದು ಶಿಕ್ಷಣಕ್ಕೆ ಸಮನಾಗಿರುತ್ತದೆ ಎಂದು ಅವರು ಹೇಳಿದರು.

ಕಾಲೇಜಿನ ಐಕ್ಯೂಎಸಿ ಸಂಯೋಜಕರಾಗಿರುವ ಡಾ.ಜಯರಾಮ ಶೆಟ್ಟಿಗಾರ್ ಎನ್‌ಎಸ್‌ಎಸ್‌ನೊಂದಿಗೆ ತಮ್ಮ ಅನುಭವ ಹಂಚಿಕೊಂಡರು ಮತ್ತು ವಿದ್ಯಾರ್ಥಿಗಳು ಜೀವನದ ಗುಣಮಟ್ಟವನ್ನು ಸುಧಾರಿಸಲು ನೀಡುವ ಅವಕಾಶಗಳನ್ನು ಬಳಸಿಕೊಂಡು ಎನ್‌ಎಸ್‌ಎಸ್‌ನಲ್ಲಿ ಸಂತೋಷದ ಸಮಯವನ್ನು ಕಲಿಯಲಿ ಎಂದು ಹಾರೈಸಿದರು.

ಎನ್ ಎಸ್ ಎಸ್ ಅಧಿಕಾರಿಗಳಾದ ಶ್ರೀಮತಿ ಅನುಪಮಾ ಜೋಗಿ ಹಾಗೂ ಗಣೇಶ್ ನಾಯಕ್ ಹಾಗೂ ಕಾಲೇಜಿನ ಉಪನ್ಯಾಸಕ ವೃಂದದವರು, ಎನ್ ಎಸ್ ಎಸ್ ನ ನಾಯಕರುಗಳು ಮತ್ತು ಸ್ವಯಂಸೇವಕರುಗಳು ಉಪಸ್ಥಿತರಿದ್ದರು. ರಕ್ಷಾ III BCA ಇವರು ಧನ್ಯವಾದ ಸಲ್ಲಿಸಿದರೆ, II BCOM ನ ನಿಶೆಲ್ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply