ಲಯನ್ಸ್ ಕ್ಲಬ್ ಬ್ರಹ್ಮಗಿರಿ  – ಶಿಕ್ಷಕರ ದಿನಾಚರಣೆ

`ತಾಯಿಯೇ ಮೊದಲ ಶಿಕ್ಷಕಿ, ತಂದೆ, ಸಮಾಜ ಮತ್ತು ಯಾರು ಒಳ್ಳೆಯ ಕಲಿಕೆ ಹಾಗೂ ಜ್ಞಾನ ಕೊಡುತ್ತಾರೋ ಅವರೇ ನಿಜವಾದ ಗುರುಗಳು’ ಎಂದು ಪ್ರೊಫೆಸರ್ ಡಾ| ವ್ಯಾಸ ಉಪಾಧ್ಯಾಯ, ನಿವೃತ್ತ ಫಿಸಿಕ್ಸ್ ವಿಭಾಗ, ಎಂಐಟಿಯ ಮುಖ್ಯಸ್ಥ ಲಯನ್ಸ್ ಕ್ಲಬ್ ಬ್ರಹ್ಮಗಿರಿಯ ಶಿಕ್ಷಕರ ದಿನಾಚರಣೆಯ ಸನ್ಮಾನ ಪಡೆದ ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.

ಲಯನ್ಸ್ ಝೋನ್ ಚೆಯರ್‌ಮೆನ್ ಲಯನ್ ಸಿ ಎಸ್ ರಾವ್, ಕ್ಲಬ್‌ನ ಅಧ್ಯಕ್ಷರಾದ ಲಯನ್ ವಾದಿರಾಜ ರಾವ್, ಕಾರ್ಯದರ್ಶಿ ಲಯನ್ ಉಮೇಶ್ ನಾಯಕ್, ಲಯನ್ ರಾಜೇಶ್ ಶೇಟ್, ಲಯನ್ ಗೀತಾ ರಾವ್, ಲಿಯೋ ಅಧ್ಯಕ್ಷರಾದ ಶ್ರೀನಿಧಿ ರಾವ್ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿದ್ದರು.

ಸರಕಾರದ ಹೊಸ ಶಿಕ್ಷಣ ನೀತಿ 2020 ಬಗ್ಗೆಯೂ ಹೇಳುತ್ತಾ ಈಗ ಇದರ ಪೂರಕ ಚರ್ಚೆ ನಡೆಯುತ್ತಿದೆ. 2021ಕ್ಕೆ ಪ್ರಾರಂಭಿಸುವ ಉದ್ದೇಶ ಸರಕಾರದ ಬಳಿ ಇದೆ. ಈ ರೀತಿಯ ಎಲ್ಲ ವಿಷಯಗಳಲ್ಲಿ ಬೆಳವಣಿಗೆ ಮತ್ತು ಕಡಿಮೆ ಪಠ್ಯಕ್ರಮಗಳು ಅಭ್ಯಾಸ ಕೊಟ್ಟಿದೆ. ಮತ್ತು ಪ್ರಯೋಗಕರ ಪಠ್ಯಕ್ರಮಕ್ಕೆ ಹೆಚ್ಚಿನ ಆದ್ಯತೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ವೀಣಾ ವ್ಯಾಸ ಉಪಾಧ್ಯಾಯ, ಶಾರದ ರೆಸಿಡೆನ್ಷಿಯಲ್ ಶಾಲೆಯ ಶಿಕ್ಷಕಿ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು

 
 
 
 
 
 
 
 
 
 
 

Leave a Reply