ಚರಕ ಸಂಭಾಷಾ –ಸಂಹಿತಾ ಪಠಣ ಉದ್ಘಾಟನಾ ಕಾರ್ಯಕ್ರಮ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ ಕುತ್ಪಾಡಿ ಉಡುಪಿಯಲ್ಲಿ ಚರಕ ಜಯಂತಿ ಯ ಪ್ರಯುಕ್ತ ಚರಕ ಸಂಭಾಷಾ ಸಂಹಿತಾ ಪಠಣ ಕಾರ್ಯಕ್ರಮವನ್ನು ಆಯುಷ್ ವಿಭಾಗ ಕರ್ನಾಟಕ, ವಿಶ್ವ ಆರ್ಯುರ್ವೇದ ಪರಿಷದ್, ಕರ್ನಾಟಕ ಹಾಗೂ ಸರಕಾರಿ ಆಯುರ್ವೇದ ಸಂಶೋಧನಾ ಕೇಂದ್ರ ಮೈಸೂರಿನ ಸಹಭಾಗಿತ್ವದೊಂದಿಗೆ ಆಯೋಜಿಸಲಾಗಿತ್ತು. 
 ಕಾರ್ಯಕ್ರಮದ ಉದ್ಘಾಟನೆಯನ್ನು ಡಾ. ಬಿ, ಎಸ್, ಪ್ರಸಾದ್, ಅಧ್ಯಕ್ಷರು, ಆಯುರ್ವೇದ ಬೋರ್ಡ್, NCISM, ನವದೆಹಲಿ ನಡೆಸಿಕೊಟ್ಟು, ಸಂಹಿತಾವನ್ನು ಅರ್ಥಮಾಡಿಕೊಂಡು ಅಧ್ಯಯನ ಮಾಡುವುದು ಅತ್ಯಗತ್ಯವಾಗಿದೆ. ಆ ಪ್ರಯುಕ್ತ ಪ್ರಸಕ್ತ ಸಂಹಿತಾ ಪಠಣ ಮತ್ತು ವ್ಯಾಖ್ಯಾನ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಇದರ ಸದುಪಯೋಗವನ್ನು ಪ್ರತಿಯೊಬ್ಬರು ಪಡೆಯಬೇಕೆಂದು ತಿಳಿಸಿದರು. 
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಡಾ. ಜಯಕರ ಶೆಟ್ಟಿ, ಉಪಕುಲಪತಿ, RGUHS, ಬೆಂಗಳೂರು ಇವರು ಚರಕ ಸಂಹಿತೆಯು ವಿದ್ಯಾರ್ಥಿಗಳು ಆಯುರ್ವೇದವನ್ನು ಅರಿಯಲು ಸಹಕಾರಿಯಾಗಿದೆ ಎಂದು ತಿಳಿಸಿದರು. ಮತ್ತೋರ್ವ ಮುಖ್ಯ ಅತಿಥಿಗಳಾದ ಡಾ. ಶ್ರೀಧರ್ ಬಿ.ಎಸ್. ಜಂಟಿ ನಿರ್ದೇಶಕರು, ಆಯುಷ್ ವಿಭಾಗ, ಕರ್ನಾಟಕ ಇವರು ಮಾತನಾಡುತ್ತಾ ಸಂಹಿತೆಗಳನ್ನು ಅಧ್ಯಯನ ಮಾಡುವುದು ಉತ್ತಮವಾದ ಅಭ್ಯಾಸವಾಗಿದೆ. ಇದರಿಂದ ಆಯುರ್ವೇದವನ್ನು ಸಮರ್ಪಕವಾಗಿ ಅರಿತು ಉತ್ತಮ ರೀತಿಯಲ್ಲಿ ಜನ ಸಾಮಾನ್ಯ ರಿಗೆ ಚಿಕಿತ್ಸೆಯನ್ನು ನೀಡಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು. 
ವಿಶ್ವ ಆಯುರ್ವೇದ ಪರಿಷದ್ ನ ಸಂಘಟನಾ ಕಾರ್ಯದರ್ಶಿ ಪ್ರೊ. ಯೋಗೇಶ್ ಚಂದ್ರ ಮಿಶ್ರಾರವರು ಚರಕ ಸಂಹಿತೆಯ ಪಠಣ ಮತ್ತು ವ್ಯಾಖ್ಯಾನ ಕಾರ್ಯಕ್ರಮವು ಸಂಹಿತೆಯನ್ನು ಅರ್ಥಮಾಡಿಕೊಳ್ಳುವಲ್ಲಿ ಪ್ರಬಲವಾದ ತಳಹದಿಯನ್ನು ವಿದ್ಯಾರ್ಥಿಗಳಿಗೆ ಒದಗಿಸುತ್ತದೆ ಎಂದು ಹೇಳುತ್ತಾ ಕಾರ್ಯಕ್ರಮದ ಯಶಸ್ಸಿಗೆ ಶುಭ ಹಾರೈಸಿ ದರು. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷರಾದ ಡಾ. ಮಮತಾ ಕೆ.ವಿ., ಪ್ರಾಂಶುಪಾಲರು, ಮಾತನಾಡುತ್ತಾ ವಿದ್ಯಾರ್ಥಿಗಳು ಸಂಹಿತಾ ಪಠಣವನ್ನು ನಿರಂತರವಾಗಿ ಮಾಡುವುದರಿಂದಾಗಿ ಸಂಹಿತೆಯ ಒಳಾರ್ಥವನ್ನು ಅರ್ಥೈಸಿಕೊಳ್ಳಬಹುದಾಗಿದೆ.
ನಮ್ಮ ಸಂಸ್ಥೆಯಲ್ಲಿ ಒಂದು ತಿಂಗಳಿನಿಂದ ನಿರಂತರ ಸಂಹಿತಾ ಪಾರಾಯಣವನ್ನು ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ ನಡೆಸಿಕೊಂಡು ಬರುತ್ತಿದ್ದು, ಇದನ್ನು ಪ್ರತಿನಿತ್ಯ ಮುಂದಿನ ದಿನಗಳಲ್ಲಿ ಯಾವುದೇ ಅಡೆತಡೆ ಗಳಿಲ್ಲದೆ ಮುಂದುವರಿಸಿಕೊಂಡು ಬರುತ್ತೇವೆಂದು ತಿಳಿಸಿದರು. ಡಾ. ನಿರಂಜನ್ ರಾವ್, ಡೀನ್, ಪಿಜಿ ಮತ್ತು ಪಿ ಎಚ್ ಡಿ ವಿಭಾಗ. ಡಾ. ನಾಗರಾಜ್ ವೈದ್ಯಕೀಯ ಅಧೀಕ್ಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಡಾ. ಲಕ್ಷ್ಮೀನಾರಾಯಣ ಶೆಣೈ, ಸಹಾಯಕ ನಿರ್ದೇಶಕರು, ಆಯುರ್ವೇದ ಸಂಶೋಧನಾ ಕೆಂದ್ರ ಇವರು ಸ್ವಾಗತಿ ಸಿದರು. 
ಡಾ. ಶ್ರೀಕಾಂತ್ ಪಿ.ಎಚ್. ಸಂಘಟನಾ ಕಾರ್ಯದರ್ಶಿ, ಚರಕ ಸಂಭಾಷಾ ವಂದಿಸಿದರು. ಡಾ. ಅರುಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಡಾ. ವಿಜಯೇಂದ್ರ ಭಟ್, ಡಾ. ಯೋಗೀಶ ಆಚಾರ್ಯ, ಡಾ. ನಿಶಾಂತ್ ಪೈ, ಡಾ. ಅರ್ಹಂತ್ ಕುಮಾರ್, ಡಾ, ಸಂದೇಶ ಕುಮಾರ್ ಶೆಟ್ಟಿ, ಡಾ. ಶ್ರೀನಿಧಿ ಧನ್ಯ, ಡಾ. ಸದಾನಂದ ಭಟ್ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಸಂಸ್ಥೆಯ ವಿದ್ಯಾರ್ಥಿಗಳು ಚರಕ ಸಂಹಿತೆಯ ಪ್ರಥಮ ಅಧ್ಯಾಯವನ್ನು ಪಠಿಸಿದರು. ತದನಂತರ ಡಾ. ಬಿ.ಆರ್. ರಾಮಕೃಷ್ಣ, ಅಧ್ಯಕ್ಷರು, ವಿಶ್ವ ಆಯುರ್ವೇದ ಪರಿಷದ್ ಕರ್ನಾಟಕ ಇವರು ಅದರ ವ್ಯಾಖ್ಯಾನವನ್ನು ನೀಡಿದರು.
 
 
 
 
 
 
 
 
 
 
 

Leave a Reply