ಐಕ್ಯ ವಿದ್ಯಾ ವಿಹಾರ ಸಿ.ಇ.ಟಿ, ಜೆ.ಇ.ಇ ನೀಟ್ ಇದರ ಕ್ರ್ಯಾಶ್ ,ರೆಗ್ಯುಲರ್ ತರಗತಿಗೆ ಚಾಲನೆ

ಕೋಟ: ಕೋಟ ಮೂರಕೈ ಸಮೀಪ ಚಿತ್ರಾಪಡಿ ವ್ಯಾಪ್ತಿ ಪಿ.ವಿ.ಎನ್ ಕಾಂಪ್ಲೆಕ್ಸ್ನಲ್ಲಿ ಕಂದಾವರ ಎಜುಕೇಶನ್ ಟ್ರಸ್ಟ್ ಆಡಳಿತಕ್ಕೊಳಪಟ್ಟ ಐಕ್ಯ ವಿದ್ಯಾವಿಹಾರ (ಸಿ.ಇ.ಟಿ, ಜೆ.ಇ.ಇ ನೀಟ್ ತರಗತಿ)ಇದರ ಕ್ರಾ÷್ಯಶ್,ರೆಗ್ಯುಲರ್ ತರಗತಿ ವಿದ್ಯಾಕೇಂದ್ರವನ್ನು ಶಿಕ್ಷಣ ತಜ್ಞ ,ನಿವೃತ್ತ ಪ್ರಾಂಶುಪಾಲ ಡಾ.ಜಿ.ಹೆಚ್ ಪ್ರಭಾಕರ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿ ವಿದ್ಯಾರ್ಥಿಗಳ ಶೈಕ್ಷಣಿಕ ಕ್ಷೇತ್ರದಲ್ಲಿ ವಿದ್ಯಾ ಸಮೂಹದ ದಿಕ್ಕು ಬದಲಿಸಲು ಕಂದಾವರ ಎಜುಕೇಶನ್ ಟ್ರಸ್ಟ್ ಮುನ್ನುಡಿ ಬರೆಯಲಿದೆ ಪ್ರತಿಬಾರಿ ವಿದ್ಯಾಕೇಂದ್ರದ ಮೇಲೆ ಜವಾಬ್ದಾರಿ ಹೆಚ್ಚಿಸುವ ಪೋಷಕರು ವಿದ್ಯಾರ್ಥಿಗಳ ಬದುಕಿನ ಬಗ್ಗೆ ಗಣನೀಯ ಪಾತ್ರ ವಹಿಸಬೇಕಾದ ಅಗತ್ಯತೆಯನ್ನು ಮನಗಾಣಿಸಿದರಲ್ಲದೆ ಈ ದಿಸೆಯಲ್ಲಿ ಮಕ್ಕಳ ಬೆಳವಣಿಗೆ ಆಗುಹೋಗುಗಳ ಬಗ್ಗೆ ಆಗಾಗ ದೃಷ್ಠಿ ಇರಿಸಬೇಕಾಗಿದೆ ಆಧುನಿಕ ಜಗತ್ತಿನಲ್ಲಿ ಸಾಮಾಜಿಕ ಜಾಲತಾಣಗಳ ಸದ್ಭಳಕೆಯ ಬಗ್ಗೆ ತಿಳಿಹೇಳಿದರಲ್ಲದೆ ಪ್ರಸ್ತುತ ಮೊಬೈಲ್ ವ್ಯಾಮೂಕ್ಕೆ ಒಳಗಾಗದೆ ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಆದ್ಯತೆ ನೀಡಿ ಇಲ್ಲಿ ಆರಂಭಿಸಲಾದ ಐಕ್ಯ ವಿದ್ಯಾವಿಹಾರ ಶೈಕ್ಷಣಿಕ ಕೇಂದ್ರ, ಸೇವಾ ಕಾರ್ಯದ ಮೂಲಕ ವಿದ್ಯಾರ್ಥಿಗಳ ಬದುಕಿನಲ್ಲಿ ಹೊಸ ಆಯಾಮ ನೀಡಲಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಂದಾವರ ಎಜುಕೇಶನ್ ಟ್ರಸ್ಟ್ ಮುಖ್ಯಸ್ಥ ಅಂತರಾಷ್ಟಿçÃಯ ಯುವ ವಿಜ್ಞಾನಿ ಕಂದಾವರ ಸತೀಶ್ ಶೆಟ್ಟಿ ವಹಿಸಿದ್ದರು.ಇದೇ ಸಂದರ್ಭದಲ್ಲಿ ಅಂತರ್ಜಾಲ ಶಿಕ್ಷಣ ಮಾಧ್ಯಮವನ್ನು ಅನಾವರಣಗೈಯಲ್ಲಾಯಿತು.ಕಾರ್ಯಕ್ರಮವನ್ನು ಉಪನ್ಯಾಸಕ ಅಕ್ಷಯ್ ಕುಮಾರ್ ಮೊಳಹಳ್ಳಿ ಸ್ವಾಗತಿಸಿ ನಿರೂಪಿಸಿದರು

 
 
 
 
 
 
 
 
 
 
 

Leave a Reply