ಎಂಟಿಎಲ್‌ನಿಂದ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳ ನೆರವಿಗಾಗಿ ‌(GetMiClass) ಗೆಟ್‌ ಮೈ ಕ್ಲಾಸ್‌ ಫ್ಲ್ಯಾ ಟ್ಫಾರ್ಮ್    

ಮಣಿಪಾಲ: ಮಣಿಪಾಲ ಸಮೂಹ ಸಂಸ್ಥೆಯ ಅಂಗಸಂಸ್ಥೆಯಾಗಿರುವ ಮಣಿಪಾಲ ಟೆಕ್ನಾಲಜೀಸ್‌ ಲಿಮಿಟೆಡ್‌ (ಎಂಟಿಎಲ್‌) ಜೆಇಇ, ನೀಟ್‌,  ಮತ್ತು ಸಿಇಟಿಯಂಥ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳನ್ನು ಎದುರಿಸಲು ಸನ್ನದ್ಧರಾಗುತ್ತಿರುವ ವಿದ್ಯಾರ್ಥಿಗಳ ನೆರವಿಗಾಗಿ ಆನ್‌ಲೈನ್‌ ಪರೀಕ್ಷೆಯ ಸಿದ್ಧತೆಗಾಗಿ GetMiClass (ಗೆಟ್‌ಮೈಕ್ಲಾಸ್‌) ಫ್ಲ್ಯಾಟ್‌ಫಾರ್ಮ್ ಅನ್ನು ಪರಿಚಯಿಸಿದೆ.

ಪ್ರಸಕ್ತ ವರ್ಷದ ಪಠ್ಯದ ಪ್ರಶ್ನೆಗಳಲ್ಲದೆ ಈ ಹಿಂದಿನ ವರ್ಷಗಳ ಸಿಇಟಿ, ಜೆಇಇ ಮತ್ತು ನೀಟ್‌ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳ ಆಯ್ದ  2,000ಕ್ಕೂ ಅಧಿಕ ಪ್ರಶ್ನೆಗಳಿಗೆ ತಜ್ಞರು ನೀಡಿದ ಉತ್ತರಗಳನ್ನು ಒಳಗೊಂಡ ವೀಡಿಯೋ ಗಳನ್ನು ಈ ಫ್ಲ್ಯಾಟ್‌ಫಾರ್ಮ್ ಒಳಗೊಂಡಿದೆ.

ಅಷ್ಟು ಮಾತ್ರವಲ್ಲದೆ ಈ ವೀಡಿಯೋಗಳಲ್ಲಿ ಪ್ರಶ್ನೆಗಳಿಗೆ ತ್ವರಿತವಾಗಿ ಹೇಗೆ ಉತ್ತರಿಸಬಹುದು ಎಂಬ ಬಗೆಗೆ ತಜ್ಞ ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗೆ ಕೆಲವೊಂದು ಕಿವಿಮಾತುಗಳು ಮತ್ತು ಸಲಹೆಗಳನ್ನೂ ನೀಡಿದ್ದಾರೆ.

GetMiClass ಫ್ಲ್ಯಾಟ್‌ಫಾರ್ಮ್ ಗೆ ವಿದ್ಯಾರ್ಥಿಗಳು ಉಚಿತವಾಗಿ ನೋಂದಾಯಿಸಿಕೊಳ್ಳಬಹುದು. ಅಲ್ಲದೆ ವಿದ್ಯಾರ್ಥಿಗಳು ಸಿಇಟಿ, ಜೆಇಇ ಅಥವಾ ನೀಟ್‌ ಪರೀಕ್ಷೆಯ ಪ್ರಶ್ನೆಗಳಿಗೆ ಸ್ವಯಂಪ್ರೇರಿತರಾಗಿ ಉತ್ತರಿಸಿ ಸ್ಥಳ ದಲ್ಲಿಯೇ ಫ‌ಲಿತಾಂಶವನ್ನು ಪಡೆದುಕೊಂಡು ಸ್ವಯಂಪ್ರೇರಿತರಾಗಿ ಮೌಲ್ಯಮಾಪನ ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗಿದೆ. ಇದರಿಂದ ಈ ಪರೀಕ್ಷೆಗಳನ್ನು ಎದುರಿಸಲು ವಿದ್ಯಾರ್ಥಿಗಳಲ್ಲಿ ಮತ್ತಷ್ಟು ಆತ್ಮವಿಶ್ವಾಸ ವೃದ್ಧಿಯಾಗುತ್ತದೆ.

“ಈ ಫ್ಲ್ಯಾಟ್‌ ಫಾರ್ಮ್ ನಲ್ಲಿ 200 ತಾಸುಗಳಿಗೂ ಅಧಿಕ ಸಮಯದ ವಿಷಯ ಸಂಗ್ರಹವಿದ್ದು ಇದು ವಿದ್ಯಾರ್ಥಿ ಗಳಿಗೆ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳನ್ನು ಎದುರಿಸಲು ಬಹಳಷ್ಟು ಸಹಕಾರಿಯಾಗಲಿದೆ. ಈ ಪರೀಕ್ಷೆಗಳನ್ನು ಎದುರಿಸಲು ಅಗತ್ಯವಾದ ಸಿದ್ಧತೆಗಳನ್ನು ಮಾಡಿಕೊಳ್ಳಲು ಈ ಫ್ಲ್ಯಾಟ್‌ಫಾರ್ಮ್ ಸರಳವಾದ ಮಾರ್ಗೋಪಾಯ ವಾಗಿದೆ.

ಪ್ರತಿ ಯೊಬ್ಬ ವಿದ್ಯಾರ್ಥಿಗೂ ಕೈಗೆಟಕುವ ಬೆಲೆಯಲ್ಲಿ  ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಯನ್ನು ಎದುರಿಸಲು ಗುಣ ಮಟ್ಟದ ಕೋಚಿಂಗ್‌ ಲಭ್ಯವಾಗುವುದನ್ನು GetMiClass ಫ್ಲ್ಯಾಟ್‌ಫಾರ್ಮ್ ಖಾತರಿಪಡಿಸುತ್ತದೆ’ ಎಂದು ಮಣಿಪಾಲ್‌ ಟೆಕ್ನಾಲಜೀಸ್‌ ಲಿಮಿಟೆಡ್‌ನ‌ ಡಿಜಿಟಲ್‌ ಸೊಲ್ಯೂಶನ್ಸ್‌ನ ಉಪಾಧ್ಯಕ್ಷ  ಗುರುಪ್ರಸಾದ್‌ ಕಾಮತ್‌ ತಿಳಿಸಿದ್ದಾರೆ.
www.GetMiClass.com
 
 
 
 
 
 
 
 
 
 
 

Leave a Reply