ವಿದ್ಯಾಪೋಷಕ್ ವಿದ್ಯಾರ್ಥಿ ಅಭಿಷೇಕ್ ಶೆಟ್ಟಿಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ

ವಿದ್ಯಾಪೋಷಕ್ ಆರ್ಥಿಕ ನೆರವು ಮತ್ತು ಮಾರ್ಗದರ್ಶನದಿಂದ ಹತ್ತಾರು ವಿದ್ಯಾರ್ಥಿಗಳು ಇಂಜಿನಿಯರಿಂಗ್, ವೈದ್ಯಕೀಯ ವಿಜ್ಞಾನ ಹೀಗೆ ಅನ್ಯಾನ್ಯ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಸಂಸ್ಥೆಯ ಪ್ರಯತ್ನಕ್ಕೆ ಧನ್ಯತೆಯ ಭಾವ ಒದಗಿಸಿದ್ದಾರೆ. ಆ ಸಾಲಿಗೆ ಕುಂದಾಪುರ ತಾಲೂಕಿನ ಉಳ್ಳೂರು ಗ್ರಾಮದ ಅಭಿಷೇಕ್ ಶೆಟ್ಟಿ ಸೇರ್ಪಡೆಯಾಗಿರುವುದು ಹೆಮ್ಮೆಯ ಸಂಗತಿ.
ರಿಕ್ಷಾ ಚಾಲಕ ಸುರೇಶ ಶೆಟ್ಟಿ – ಸಂಪಾವತಿ ಶೆಟ್ಟಿ ದಂಪತಿ ಸುಪುತ್ರ ಗೇಟ್ (ಗ್ರಾಜುವೇಟ್ ಅಪ್ಟಿಟ್ಯೂಡ್ ಟೆಸ್ಟ್ ಇನ್ ಇಂಜಿನಿಯರಿಂಗ್) ಪರೀಕ್ಷೆಯಲ್ಲಿ ಐದನೇ ರ್ಯಾಂಕ್ ಪಡೆದಿರುತ್ತಾನೆ, ರಾಷ್ಟ್ರಮಟ್ಟದ ಈ ಪರೀಕ್ಷೆಯಲ್ಲಿ ಒಂದೂವರೆ ಲಕ್ಷ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಶಂಕರನಾರಾಯಣ ಪದವಿ ಪೂರ್ವ ಕಾಲೇಜಿನಲ್ಲಿ ಎಸ್.ಎಸ್.ಎಲ್.ಸಿ ಯಲ್ಲಿ 92.16%ನ್ನೂ, ಪಿ.ಯು.ಸಿ ಯಲ್ಲಿ 96% ಅಂಕ ಗಳಿಸಿ ಸರಕಾರಿ ಕೋಟಾದಲ್ಲಿ ಮೈಸೂರು ಎನ್‍ಐಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕಾನಿಕಲ್ ಸೀಟ್ ಪಡೆದು ಮೂರು ಮತ್ತು ನಾಲ್ಕನೇ ವರ್ಷದಲ್ಲಿ ಮಷಿನ್ ಡಿಸೈನ್ ಕುರಿತು ಚಿನ್ನದ ಪದಕ ಪಡೆದಿದ್ದನು.
ಮುಂದೆ ಮೆಕಾನಿಕಲ್ ಇಂಜಿನಿಯರಿಂಗ್ ಕೋರ್ಸ್‍ನಲ್ಲಿ ಸಂಶೋಧನಾ ವಿಭಾಗದ ಕಡೆ ಹೆಚ್ಚು ಗಮನ ಹರಿಸುವ ಉದ್ದೇಶದಿಂದ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಂಡಿದ್ದ. ಅವನ ತಮ್ಮ ಕೀರ್ತನ್ ಶೆಟ್ಟಿಯೂ ವಿದ್ಯಾಪೋಷಕ್ ವಿದ್ಯಾರ್ಥಿಯಾಗಿದ್ದು ಮಂಡ್ಯ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಕಾಲೇಜಿನಲ್ಲಿ ನಾಲ್ಕನೇ ವರ್ಷದ ಎಂ.ಬಿ.ಬಿ.ಎಸ್ ಓದುತ್ತಿದ್ದಾನೆ.
ಈ ಇಬ್ಬರು ವಿದ್ಯಾರ್ಥಿಗಳಿಗೆ ವಿದ್ಯಾಪೋಷಕ್‍ ಪ್ರತೀ ವರ್ಷ ದೊಡ್ಡ ಮೊತ್ತದ ನೆರವು ನೀಡುತ್ತಾ ಬಂದಿದೆ. ಅಭಿಷೇಕ್ ಶೆಟ್ಟಿಗೆ ಯಕ್ಷಗಾನ ಕಲಾರಂಗದ ಕುಟುಂಬದ ಪರವಾಗಿ ಅಭಿನಂದನೆಗಳು.
 
 
 
 
 
 
 
 
 

Leave a Reply