ಕೌಶಲ್ಯಕ್ಕೆ ಸರಿಯಾದ ವೇದಿಕೆ ಸಿಕ್ಕಲ್ಲಿ ಬದುಕು ಇನ್ನೂ ಹಸನಾಗುವುದು ~ ರಾಧಿಕಾ ಲಕ್ಷ್ಮೀನಾರಾಯಣ .  

ಉಡುಪಿ :ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಮತ್ತು ರೋಟರಿ ಕ್ಲಬ್ ಝೋನ್-೪, ಉಡುಪಿ ಇವರ ಪ್ರಾಯೋಜಕತ್ವದಲ್ಲಿ ನಡೆದ 4 ವಾರಗಳ ಹೊಲಿಗೆ ತರಬೇತಿಯ ಸಮಾರೋಪ ಕರ‍್ಯಕ್ರಮವು ಭಾರತೀಯ ವಿಕಾಸ ಟ್ರಸ್ಟ್ನಲ್ಲಿ ಜರುಗಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಉಡುಪಿಯ ರೋಟರಿ ಕ್ಲಬ್‌ನ ಅಧ್ಯಕ್ಷೆ ರಾಧಿಕಾ ಲಕ್ಷ್ಮೀನಾರಾಯಣ ಮಾತನಾಡಿ ಪ್ರತಿಯೊಬ್ಬರಲ್ಲಿಯೂ ಒಂದೊಂದು ರೀತಿ ಕೌಶಲ್ಯಗಳಿವೆ, ಇಂತಹ ಕೌಶಲ್ಯಕ್ಕೆ ಸರಿಯಾದ ವೇದಿಕೆ ಸಿಕ್ಕ ಪಕ್ಷದಲ್ಲಿ ಅದು ಇನ್ನೂ ಉತ್ತಮವಾಗಲು ಸಾಧ್ಯ ಎಂದು ಹೇಳಿದರು.
ಉಡುಪಿ ರೋಟರಿ ಕ್ಲಬ್‌ನ ಕಾರ‍್ಯದರ್ಶಿ ದೀಪಾ ಭಂಡಾರಿ ಅವರು ಮಾತನಾಡಿ ಸಾಧನೆಗೆ ಅನೇಕ ಅವಕಾಶಗಳಿವೆ. ಅಂತಹ ಅವಕಾಶಗಳನ್ನು ಬಳಸಿಕೊಂಡು ಜೀವನದಲ್ಲಿ ಯಶಸ್ಸು ಸಾಧಿಸಿ ಎಂದು ಕರೆಯಿತ್ತರು. ಶಿಬಿರಾರ್ಥಿಗಳು ತರಬೇತಿಯಲ್ಲಿ ತಯಾರಿಸಿದ ವಿವಿಧ ರೀತಿಯ ಬಟ್ಟೆಗಳನ್ನು ಪ್ರದರ್ಶಿಸಲಾಯಿತು ಹಾಗೂ ಭಾಗವಹಿಸಿದ 28 ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿ ಮುಕ್ತಾ ಶ್ರೀನಿವಾಸ ಭಟ್ ಇವರು ಉಪಸ್ಥಿತರಿದ್ದರು. ಮೊದಲಿಗೆ ಭಾರತೀಯ ವಿಕಾಸ ಟ್ರಸ್ಟಿನ ಮುಖ್ಯ ಕಾರ್ಯಕ್ರಮ ಸಂಯೋಜಕಿ ಲಕ್ಶ್ಮೀ ಬಾಯಿ ಅತಿಥಿಗಳನ್ನು ಸ್ವಾಗತಿಸಿದರು.
ಬಿವಿಟಿಯ ಮಾನವ ಸಂಪನ್ನೂಲ ಕಾರ್ಯನಿರ್ವಾಹಕಿ ಗೀತಾ ಆರ್ ರಾವ್ ವಂದಿಸಿದರು. ಬಿವಿಟಿಯ ಕಾರ್ಯಕ್ರಮ ಅಧಿಕಾರಿ ಪ್ರತಿಮಾ ಕಾರ್ಯಕ್ರಮ ನಿರ್ವಹಿಸಿದರು.
 
 
 
 
 
 
 
 
 
 
 

Leave a Reply