ಪೋಷಕರು ಶಿಕ್ಷಕರ ಸ್ಥಾನ ತುಂಬುವ ಅನಿವಾರ್ಯತೆ – ಭಾಸ್ಕರ ಪೂಜಾರಿ ನಡೂರು

ಮನೆಯೇ ಮೊದಲ ಪಾಠಶಾಲೆ ತಾಯಿ ತಾನೆ ಮೊದಲ ಗುರು ಎಂಬ ನಾಣ್ನುಡಿ ಇಂದು ಅಕ್ಷರಶಃ ನಿಜವಾಗಿದೆ ಯಾವುದೇ ದೇಶದ ಅಭಿವೃದ್ಧಿ ಅಲ್ಲಿನ ಶಿಕ್ಷಣ ವ್ಯವಸ್ಥೆಯನ್ನು ಅವಲಂಭಿಸಿದೆ.ಗುರುಕುಲ ಪದ್ದತಿಯಿಂದಲೂ ವಿದ್ಯೆಗೆ ಪ್ರಮುಖ ಸ್ಥಾನವನ್ನು ನೀಡಲಾಗಿದೆ ಮಹಾಮಾರಿ ಕರೋನದ ಕರಿ ಛಾಯೆ ಶೈಕ್ಷಣಿಕ ವ್ಯವಸ್ಥೆಯನ್ನೇ ಅಲುಗಾಡಿಸಿದೆ ಮಕ್ಕಳ ಶೈಕ್ಷಣಿಕ ಭವಿಷ್ಯವನ್ನು ಮಂಕಾಗಿಸಿದೆ. 

ಮಕ್ಕಳ ಕಲಿಕೆಗೆ ತೊಂದರೆಯಾಗಬಾರದು ಎಂಬ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಹಲವು ಪರ್ಯಾಯ ಮಾರ್ಗಗಳನ್ನು ಹಮ್ಮಿಕೊಂಡಿದೆ ದೂರದರ್ಶನ ಚಂದನ ವಾಹಿನಿಯ ಮೂಲಕ ಪಾಠಗಳನ್ನು ಬಿತ್ತರಗೊಳಿಸಲಾಗುತ್ತಿದೆ ಅಲ್ಲದೆ ಶಾಲೆಗಳು ತಮ್ಮದೇ ಆದ ಹಲವಾರು ಪರ್ಯಾಯ ಮಾರ್ಗಗಳನ್ನು ಕಂಡುಕೊಂಡು ವಾಟ್ಸಪ್ ಗ್ರೂಪ್, ಗೂಗಲ್ ಮೀಟ್, ಟೀಚ್ ಮಿಂಟ್ ಆ್ಯಪ್ ಗಳ ಮೂಲಕ ಆನ್ ಲೈನ್ ತರಗತಿಗಳನ್ನು ನಡೆಸುತ್ತಿವೆ. ಇವು ತರಗತಿ ಕೋಣೆಯ ಮುಖಾಮುಖಿ ಕಲಿಯಷ್ಟು ಪರಿಣಾಮಕಾರಿ ಅಲ್ಲದಿದ್ದರೂ ಪ್ರಸ್ತುತ ಸನ್ನಿವೇಶದಲ್ಲಿ ಅನಿವಾರ್ಯವಾಗಿದೆ. 

ಆದರೆ ಇವೆಲ್ಲವುಗಳ ಸಫಲತೆ ಪೋಷಕರ ಸಹಕಾರವನ್ನು ಅವಲಂಬಿಸಿದೆ ಈ ಸಂದರ್ಭದಲ್ಲಿ ಪೋಷಕರ ಪಾತ್ರ ಬಹುಮುಖ್ಯವಾಗಿದೆ. ಮನೆಯೇ ಪಾಠಶಾಲೆಯಾಗಿ ಪೋಷಕರೇ ಶಿಕ್ಷಕರಾಗಿ ಮಾರ್ಗದರ್ಶನ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ ಪೋಷಕರು ಬಹುಮುಖ್ಯವಾದ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿದೆ ಕಲಿಕೆಯು ಶಾಲೆಯಲ್ಲಿ ಮಾತ್ರವಲ್ಲದೆ ಮನೆಯಲ್ಲಿಯೂ ಮಾಡಬಹುದು ಎಂಬುದನ್ನು ನಿರೂಪಿಸಬೇಕಾಗಿದೆ ಕೆಲವು ಪೋಷಕರು ಮಕ್ಕಳ ಕಲಿಕೆಗೆ ಶಿಕ್ಷಕರೊಂದಿಗೆ ಕೈ ಜೋಡಿಸುವ ಮೂಲಕ ಮಕ್ಕಳ ಕಲಿಕೆಯಲ್ಲಿ ಬೆಂಬಲವಾಗಿ ನಿಂತಿದ್ದಾರೆ ಆದರೆ ಕೆಲವು ಪೋಷಕರು ಆನ್ ಲೈನ್ ತರಗತಿಗಾಗಿ ತಮ್ಮ ಮಕ್ಕಳಿಗೆ ಮೊಬೈಲ್ ಗಳನ್ನು ಕೊಡಿಸಿ ತಮ್ಮ ಜವಾಬ್ದಾರಿ ಮುಗಿಯಿತೆಂದು ಭಾವಿಸುತ್ತಿದ್ದಾರೆ ಮಕ್ಕಳಿಗೆ ಮೊಬೈಲ್ ಕೊಡಿಸಿ ರಿಚಾರ್ಜ್ ಮಾಡಿದರಷ್ಟೇ ಸಾಲದು ಮಕ್ಕಳ ಕಲಿಕೆಯ ಮೇಲೆ ನಿಗಾ ಇಡಬೇಕಾಗಿದೆ ಕೆಲವು ಮಕ್ಕಳು ಕಲಿಕೆಯ ನೆಪದಲ್ಲಿ ಮೊಬೈಲನ್ನು ದುರುಪಯೋಗಪಡಿಸಿಕೊಳ್ಳುವ ಸಂಭವವಿದೆ ಮಕ್ಕಳು ಮೊಬೈಲ್ ನಲ್ಲಿ ಪಾಠಕ್ಕೆ ಸಂಬಂಧಿಸಿದ ವಿಷಯಗಳನ್ನೇ ನೋಡುತ್ತಿದ್ದಾರೆಯೇ ಎಂಬುದನ್ನು ಪೋಷಕರು ಗಮನಿಸಬೇಕು ಪಾಠದ ವಿಷಯಗಳನ್ನು ನೇೂಡಲು ಒಂದಿಷ್ಟು ಸಮಯವನ್ನು ನಿಗದಿಗೊಳಿಸ ಬೇಕು ಉಳಿದ ಸಮಯದಲ್ಲಿ ಮಕ್ಕಳ ಕೈಗೆ ಮೊಬೈಲ್ ಸಿಗದಂತೆ ನೇೂಡಿಕೊಳ್ಳಬೇಕು. 

ಇನ್ನು ಭೌತಿಕ ತರಗತಿಗಳು ಪ್ರಾರಂಭವಾಗದೆ ಇರುವುದರಿಂದ ಕೆಲವು ಪೇೂಷಕರಲ್ಲಿ ಶಾಲೆ ಪ್ರಾರಂಭವಾಗಿಲ್ಲ ಎಂಬ ಭಾವನೆ ಇದೆ. ಮಕ್ಕಳ ಕಲಿಕೆಯ ವಿಷಯದಲ್ಲಿ ಪೋಷಕರು ತಾತ್ಸಾರ ತೋರಿಸಬಾರದು ತಮ್ಮ ದಿನನಿತ್ಯದ ಸಮಯದಲ್ಲಿ ಸ್ವಲ್ಪ ಸಮಯವನ್ನು ಮಕ್ಕಳ ಕಲಿಕೆಗೆ ಮೀಸಲಿಡಬೇಕು ದಿನದಲ್ಲಿ ಒಂದು ಗಂಟೆಯಾದರೂ ಮಕ್ಕಳ ಬಳಿ ಕುಳಿತು ಅವರ ಕಲಿಕೆಯನ್ನು ವಿಚಾರಿಸಬೇಕು ಕಷ್ಟಪಟ್ಟು ದುಡಿದು ಮಕ್ಕಳಿಗೆ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು ಪೋಷಕರಿಗೆ ಜೀವನ ನಿರ್ವಹಣೆಗಾಗಿ ದುಡಿಮೆ ಅನಿವಾರ್ಯ ಆದರೂ ದಿನದ ಒಂದಿಷ್ಟು ಸಮಯ ಮಕ್ಕಳ ಕಲಿಕೆಯನ್ನು ಗಮನಿಸಲು ವಿನಿಯೋಗಿಸಬೇಕು ಮಕ್ಕಳಿಗೆ ಉತ್ತಮ ಪುಸ್ತಕಗಳನ್ನು ಓದಲು ಪ್ರೇರೇಪಿಸುವ ಜೊತೆಗೆ ಉತ್ತಮ ಸಂಸ್ಕಾರಗಳನ್ನು ಮಕ್ಕಳಲ್ಲಿ ಮೂಡಿಸಬೇಕು.

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ಎಂಬಂತೆ ಚಿಕ್ಕ ವಯಸ್ಸಿನಲ್ಲಿ ಮಕ್ಕಳು ಕಲಿತ ಸಂಸ್ಕಾರಗಳು ಅವರನ್ನು ಉತ್ತಮ ಭವಿಷ್ಯ ರೂಪಿಸುವಲ್ಲಿ ಸಹಕಾರಿಯಾಗಿಸುತ್ತವೆ ಅಂಥ ಒಳ್ಳೆಯ ಸಂಸ್ಕಾರಗಳು ತಮ್ಮ ಮಕ್ಕಳಲ್ಲಿ ಬರುವಂತೆ ನೋಡಿಕೊಳ್ಳಬೇಕು ಹೆಚ್ಚಿನ ಪೋಷಕರು ಸಂಜೆಯ ಸಮಯದಲ್ಲಿ ದೂರದರ್ಶನದಲ್ಲಿ ಧಾರಾವಾಹಿಗಳನ್ನು ನೋಡುವ ಹವ್ಯಾಸವನ್ನು ರೂಢಿಸಿಕೊಂಡಿರುತ್ತಾರೆ ಮಕ್ಕಳು ಸಹ ಅವರ ಜೊತೆಯಲ್ಲಿ ಕುಳಿತು ಧಾರಾವಾಹಿಗಳನ್ನು ವೀಕ್ಷಿಸುತ್ತಾರೆ ಇದರಿಂದ ಮಕ್ಕಳು ಹೆಚ್ಚು ಟಿವಿ ಮೊಬೈಲ್ ನೋಡುವುದರಿಂದ ಮುಂದಿನ ದಿನಗಳಲ್ಲಿ ಅವರಿಗೆ ಕಣ್ಣಿನ ಸಮಸ್ಯೆ ಮಾನಸಿಕ ಸಮಸ್ಯೆಗಳು ಬರುವ ಸಂಭವವೇ ಜಾಸ್ತಿ. 

ಪೋಷಕರು ಅದೇ ಸಮಯವನ್ನು ಮಕ್ಕಳ ಜೊತೆಯಲ್ಲಿ ಕುಳಿತು ಅವರೊಡನೆ ಪಾಠದ ವಿಷಯಗಳನ್ನು ಮಾತನಾಡುವುದು ಕಥೆಗಳನ್ನು ಹೇಳುವುದು ಭಜನೆ ಹಾಡುಗಳನ್ನು ಹೇಳಿಸುವುದನ್ನು ಮಾಡಿಸಿದರೆ ಅವರಲ್ಲಿ ಕಲಿಕೆಯ ಜೊತೆಗೆ ಸಂಸ್ಕಾರಗಳನ್ನು ಬೆಳೆಸಲು ಸಾಧ್ಯವಾದಿತು ಮಕ್ಕಳು ಪೋಷಕರನ್ನು ಅನುಸರಿಸುವುದರಿಂದ ಅನುಕರಣೆ ಮಾಡುವುದರಿಂದ ಮನೆಯಲ್ಲಿ ಒಳ್ಳೆಯ ಮಾತುಗಳನ್ನೇ ಆಡಬೇಕು ಕೆಲವು ಪೋಷಕರು ಮಕ್ಕಳನ್ನು ಅತಿ ಮುದ್ದಾಗಿ ಬೆಳೆಸುತ್ತಾರೆ ಮಕ್ಕಳಿಗೆ ಪ್ರೀತಿ ತೋರಿಸುವುದು ನಿಜ ಅತಿಯಾದರೆ ಅಮೃತವೂ ವಿಷಯ ಎಂಬಂತೆ ಮಕ್ಕಳನ್ನು ಅತಿಯಾಗಿ ಮುದ್ದು ಮಾಡಬಾರದು ಮಾಡುವುದು ಒಳ್ಳೆಯದಲ್ಲ.

ತಾವು ಕಷ್ಟಪಟ್ಟು ಬೆಳೆದಿದ್ದೇವೆ ನಮ್ಮ ಮಕ್ಕಳು ಕಷ್ಟಪಡಬಾರದು ಎಂಬ ಭಾವನೆ ಕೆಲವು ಪೋಷಕರಲ್ಲಿ ಇರುತ್ತದೆ ಇದೇ ಮುಂದೆ ಮಕ್ಕಳು ತಮ್ಮ ಜೀವನವನ್ನು ರೂಪಿಸಿ ಕೊಳ್ಳುವಲ್ಲಿ ತೊಡಕಾಗುವುದು ಅದರ ಬದಲು ಮನೆಯ ಸಣ್ಣಪುಟ್ಟ ಕೆಲಸ ಗಳನ್ನು ಅವರಿಂದಲೇ ಮಾಡಿಸುವ ಮೂಲಕ ಬದುಕುವ ಕಲೆಯನ್ನು ಅವರಿಗೆ ಕಲಿಸಿಕೊಡಬೇಕು ಬದುಕಿನ ರೀತಿ ರಿವಾಜುಗಳನ್ನು ಮಿತವ್ಯಯದ ಕಲ್ಪನೆಯನ್ನು ಅವರಲ್ಲಿ ಮೂಡಿಸಬೇಕು ಯಾವುದೇ ಕಾರಣಕ್ಕೂ ತಮ್ಮ ಮಕ್ಕಳನ್ನು ಇತರ ಮಕ್ಕಳೊಂದಿಗೆ ಹೋಲಿಸದೆ ನಿಂದಿಸದೆ ಅವರಲ್ಲಿ ಆತ್ಮಸ್ಥೈರ್ಯವನ್ನು ಮೂಡಿಸಬೇಕು ಪೋಷಕರು ಮಕ್ಕಳ ಕಲಿಕೆಗೆ ಶಿಕ್ಷಕರೊಂದಿಗೆ ಕೈ ಜೋಡಿಸಿಬೇಕು ಶಿಕ್ಷಕರ ಸ್ಥಾನವನ್ನು ಅನಿವಾರ್ಯವಾಗಿ ತುಂಬುವ ಮೂಲಕ ಮಕ್ಕಳ ಶೈಕ್ಷಣಿಕ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು .ಮಹಾಮಾರಿ ಕರೇೂನದ ಕರಿನೆರಳು ಆದಷ್ಟು ಬೇಗ ತೊಲಗಿ ಮಕ್ಕಳ ಶೈಕ್ಷಣಿಕ ಭವಿಷ್ಯ ಬೆಳಗುವಂತಾಗಲಿ.

 
 
 
 
 
 
 
 
 
 
 

Leave a Reply