ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ

ಉಡುಪಿಯ ಆದರ್ಶ ಆಸ್ಪತ್ರೆಯು ಕಳೆದ ಕೆಲವು ವರ್ಷಗಳಿಂದ ಶಿಕ್ಷಕ ದಿನಾಚರಣೆಯನ್ನು ಆಚರಿಸುತ್ತಾ  ಬಂದಿದೆ. ಸಾಧಕ ಶಿಕ್ಷಕರನ್ನು ಗುರುತಿಸಿ ಗೌರವಿಸುವ ಮಹತ್ವದ  ಕೆಲಸವನ್ನು ಆದರ್ಶ ಆಸ್ಪತ್ರೆ ಮಾಡುತ್ತಿದೆ. ಇದಕ್ಕೆ ಮುಖ್ಯ ಕಾರಣ ಶಿಕ್ಷಕರ ಮೇಲೆ ನಮ್ಮ ಆಸ್ಪತ್ರೆಗೆ ಇರುವ ಕಾಳಜಿ ಹಾಗೂ ಗೌರವ. ಸಾಧಕ ಶಿಕ್ಷಕರನ್ನು ಗುರುತಿಸಿ, ಗೌರವಿಸುವ ಮೂಲಕ ಇತರ ಶಿಕ್ಷಕರಿಗೆ ಈ ಹಾದಿಯಲ್ಲಿ ಸಾಗುವಂತೆ ಹುರಿದುಂಬಿಸುವುದು. ಆ ಮೂಲಕ ಆದರ್ಶ ಸಮಾಜ ನಿರ್ಮಾಣಕ್ಕೆ ಶ್ರಮಿಸುವುದು. ಆದರ್ಶ ಆಸ್ಪತ್ರೆಯು ಈ ನಿಟ್ಟಿನಲ್ಲಿ ಮಾಡುವ ಅಳಿಲ ಸೇವೆ ಇದು.
ಆರೋಗ್ಯಪೂರ್ಣ ಸಮಾಜ ನಿರ್ಮಾಣ ಶಿಕ್ಷಕನಿಂದ ಸಾಧ್ಯ ಎಂಬ ನಂಬಿಕೆ ನಮ್ಮದು. ಇದಕ್ಕೆ ಅಗತ್ಯವಾಗಿ ಬೇಕಾಗಿರುವುದು ಆರೋಗ್ಯವಂತ ಶಿಕ್ಷಕರ ನಿರ್ಮಾಣ. ಶಿಕ್ಷಕನಾದವನು ಆರೋಗ್ಯವಂತನಾಗಿದ್ದು, ಸದಾ ಉತ್ಸಾಹಿಯಾಗಿದ್ದರೆ, ಆ ಶಿಕ್ಷಕನ ಶಿಷ್ಯರೂ ಅದನ್ನೇ ಅನುಸರಿಸುತ್ತಾರೆ. ಹಾಗಾಗಿ ಶಿಕ್ಷಕರಿಗೆ ಉಚಿತ ಆರೋಗ್ಯ ತಪಾಸಣೆಯ ಮೂಲಕ ಶಿಕ್ಷಣ ಕ್ಷೇತ್ರದ ಆರೋಗ್ಯವನ್ನು ಕಾಪಾಡುವತ್ತ ಒಂದು ಪ್ರಯತ್ನ ನಮ್ಮದು.
ಈ ನಿಟ್ಟಿನಲ್ಲಿ ಆದರ್ಶ ಆಸ್ಪತ್ರೆ ಹಾಗೂ ಶಾಲಾ ಶಿಕ್ಷಣ ಇಲಾಖೆ, ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ   ಡಾ| ಸರ್ವಪಳ್ಳಿ ರಾಧಾಕೃಷ್ಣನ್‌ನವರ ಜನ್ಮಜಯಂತಿ ಹಾಗೂ ಉಡುಪಿ ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕ ಪ್ರಧಾನ ಸಮಾರಂಭ, ಶಿಕ್ಷಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ದಿನಾಂಕ ೧೦.೦೯.೨೦೨೩ನೇ ಭಾನುವಾರ ಬೆಳಿಗ್ಗೆ ಗಂಟೆ ೯-೩೦ಕ್ಕೆ ಆದರ್ಶ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ ಎಸ್ ಇವರು ಸಮಾರಂಭವನ್ನು ಉದ್ಘಾಟಿಸಿ ಶಿಕ್ಷಕರನ್ನು ಸನ್ಮಾನಿಸಿರುವರು. ಗೌರವಾನ್ವಿತ ಮುಖ್ಯ ಅತಿಥಿಗಳಾಗಿ ರಶ್ಮಿ ಎಸ್ ಆರ್ ಸಹಾಯಕ ಆಯುಕ್ತರು ಕುಂದಾಪುರ ವಿಭಾಗ,  ಗಣಪತಿ ಕೆ – ಉಪನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ ಉಡುಪಿ ಜಿಲ್ಲೆ, ಉಡುಪಿ, ಎ ಪಿ ಭಟ್ – ಎಂ ಎಸ್ ಸಿ ಪಿ ಹೆಚ್ ಡಿ ಖಗೋಳ ಭೌತಶಾಸ್ತ್ರ ತಜ್ಞರು ಹಾಗೂ ಆಡಳಿತಾಧಿಕಾರಿ ಪೂರ್ಣ ಪ್ರಜ್ಞಾ ಕಾಲೇಜು ಉಡುಪಿ,   ಅಶೋಕ್ ಕಾಮತ್, ಜಿಲ್ಲಾ ಶಿಕ್ಷಣ ತಜ್ಞರು, ಪ್ರೊ| ಎ ರಾಜಾ ಎಂ ಎಸ್,  ಖ್ಯಾತ ನರರೋಗ ಶಸ್ತ್ರ ಚಿಕಿತ್ಸಾ ತಜ್ಞರು, ಆದರ್ಶ ಆಸ್ಪತ್ರೆ, ಉಡುಪಿ ಹಾಗೂ ವಿಮಲಾ ಚಂದ್ರಶೇಖರ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಆದರ್ಶ ಆಸ್ಪತ್ರೆ ಉಡುಪಿ ಭಾಗವಹಿಸಲಿರುವರು.
ಈ ಸಮಾರಂಭದಲ್ಲಿ ಉಡುಪಿ ಜಿಲ್ಲೆಯ ೫ ವಲಯಗಳ ಶಿಕ್ಷಕರುಗಳಿಗೆ, ಪ್ರತೀ ವಲಯದಲ್ಲಿ ಪ್ರಾಥಮಿಕ ವಿಭಾಗದಲ್ಲಿ ಸರಕಾರಿ, ಅನುದಾನಿತ, ಅನುದಾನರಹಿತ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಸರಕಾರಿ, ಅನುದಾನಿತ, ಅನುದಾನರಹಿತ. ಒಟ್ಟು ೩೦ ಶಿಕ್ಷಕರುಗಳಿಗೆ ಆದರ್ಶ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಉಡುಪಿ ಜಿಲ್ಲೆಯ ಎಲ್ಲಾ ಶಿಕ್ಷಕರುಗಳಿಗೆ ತಜ್ಷ ವೈದ್ಯರಿಂದ ಆರೂಗ್ಯ ತಪಾಸಣೆ, ರಕ್ತದ ಸಕ್ಕರೆಯ ಅಂಶ, ಕೊಬ್ಬಿನಾಂಶ, ಇ.ಸಿ.ಜಿ, ಹೃದಯದ ಸ್ಕ್ಯಾನಿಂಗ್  (ಇಕೋ) ಹಾಗೂ ಟಿಎಂಟಿ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುವುದು. ಉಡುಪಿ ಜಿಲ್ಲೆಯ ಎಲ್ಲಾ ಶಿಕ್ಷಕರುಗಳು ಈ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಉಚಿತ ಆರೋಗ್ಯ ಉಚಿತ ತಪಸಣಾ ಶಿಬಿರದಲ್ಲಿ ಭಾಗವಹಿಸಿ ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಆದರ್ಶ ಆಸ್ತತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ| ಜಿ ಎಸ್ ಚಂದ್ರಶೇಖರ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಗಣಪತಿ ಕೆ ರವರು ವಿನಂತಿಸಿಕೊoಡಿರುತ್ತಾರೆ.
 
 
 
 
 
 
 
 
 
 
 

Leave a Reply