ರವಿ ಕಟಪಾಡಿಯ  ಸೀ ಫೋಕ್ ಅವತಾರ

ಉಡುಪಿ: ಪ್ರತಿ ವರ್ಷದಂತೆ ಈ ವರ್ಷವೂ ಶ್ರೀಕೃಷ್ಣ ಜಯಂತಿಯ ಪ್ರಯುಕ್ತ ಹಗಲು ವೇಷ ಧರಿಸಿರುವ ರವಿ ಕಟಪಾಡಿ ಸಮುದ್ರ ಜೀವಿಯ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ರೀತಿ ವೇಷ ಧರಿಸಿ ಅವರು ಬಡ ಮಕ್ಕಳ ವೈದ್ಯಕೀಯ ಚಿಕಿತ್ಸೆಯ ವೆಚ್ಚವನ್ನು ಭರಿಸುತ್ತಾ ಬಂದಿದ್ದಾರೆ.

ಕಳೆದ ಎಂಟು ವರ್ಷಗಳಿಂದ ರವಿ ಕಟಪಾಡಿ ಈ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬಂದಿದ್ದು ಇದುವರೆಗೂ 90 ಲಕ್ಷಕ್ಕೂ ಹೆಚ್ಚು ಹಣವನ್ನು ಸಂಗ್ರಹಿಸಿದ್ದಾರೆ ಮತ್ತು ಅಗತ್ಯವಿರುವ 65 ಕ್ಕೂ ಹೆಚ್ಚು ಬಡ ಮಕ್ಕಳಿಗೆ ನೆರವಾಗಿದ್ದಾರೆ.

ಈ ಬಾರಿ ಸಮುದ್ರ ಜೀವಿ ಸೀ ಫೋಕ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಭಾರಿ ಜನರ ಬಳಿ ಹಣವನ್ನು ಯಾಚಿಸುವುದಿಲ್ಲ ಎಂಬ ಹೇಳಿಕೆ ಕೊಟ್ಟಿದ್ದು, ಜನರೇ ನನ್ನ ಬಳಿ ಬಂದು ಹಣ ನೀಡುವಂತೆ ಕರೆ ಕೊಟ್ಟಿದ್ದರು.

 
 
 
 
 
 
 
 
 
 
 

Leave a Reply