ಯಕ್ಷಗಾನದ ರೂಪಾಂತರ ಬೆಂಬಲಿಸಲು ಬಾ.ಸಾಮಗ ಕರೆ

ಉಡುಪಿ: ಕರಾವಳಿಯಲ್ಲಿ ಜನಮೆಚ್ಚುಗೆ ಪಡೆದಿರುವ ಯಕ್ಷಗಾನವು ನಮ್ಮ ಬದುಕಿನ ಧ್ಯೇಯ ಧೋರಣೆ ಗಳ ಅಭಿರುಚಿಗೆ ಹೊಂದಿಕೊ೦ಡು ಹಾಡುಗಾರಿಕೆ, ಕುಣಿತ, ಅರ್ಥಗಾರಿಕೆ, ವೇಷಭೂಷಣವು ಇತಿ-ಮಿತಿಯಲ್ಲಿ ರೂಪಾಂತರಗೊ೦ಡಿದ್ದು ಇದು ಯಕ್ಷಗಾನದ ಪ್ರಗತಿಗೆ ಪೂರಕವಾಗಿರುವುದರಿಂದ ರೂಪಾಂತರವನ್ನು ಕಲಾಪ್ರೇಮಿಗಳು ಬೆಂಬಲಿಸಬೆಕೇ೦ದು ದೆಹಲಿ ಕನ್ನಡಿಗ, ತುಳುವೆರ್ ಪ್ರತಿಕೆಗಳ ಸಂಪಾದಕ ಬಾ. ಸಾಮಗ ಅವರು ಕರೆ ನೀಡಿದ್ದರು.

ಅವರು ಶ್ರೀ ಮಹಾಗಣಪತಿ ಯಕ್ಷಗಾನ ಕಲಾ ಸಂಘವು ಫೆ. 27ರಂದು ಉಡುಪಿ ಬೆಳ್ಕೆಳೆಯಲ್ಲಿ ಏರ್ಪಡಿಸಿದ ೪೫ನೇ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.

ಯಕ್ಷಗಾನಕ್ಕೆ ಭಾಷೆಯ ಬಂಧನ ಸರಿಯಲ್ಲವೆಂದ ಸಾಮಗ ಅವರು ತುಳು ಭಾಷೆಯ ಯಕ್ಷಗಾನವು ತುಳು ಸಂಸ್ಕೃತಿಯನ್ನು ಪಸರಿಸಲು ಕಳೆದ ಶತಮಾನದಿಂದಲೂ ಗಣನೀಯ ಸೇವೆ ಸಲ್ಲಿಸಿದ್ದು ಯಕ್ಷಗಾನದಲ್ಲಿ ನೂತನ ಅಧ್ಯಾಯ ಆರಂಭಿಸಿ ಯಕ್ಷಗಾನದ ಆರ್ಥಿಕ ಅಭ್ಯುದಯದಲ್ಲಿ ಇತಿಹಾಸ ಸೃಷ್ಠಿಸಿರುವುದರಿಂದ ಬಡಗುತಿಟ್ಟು, ತೆಂಕುತಿಟ್ಟು ಪ್ರಕಾರಗಳಂತೆ ಪ್ರತ್ಯೇಕ ತುಳುತಿಟ್ಟು ಎಂದು ಗೌರವಿಸುವುದು ಅವಶ್ಯವೆಂದರು.
ಕರ್ನಾಟಕ ಸರ್ಕಾರವು ತುಳು ಯಕ್ಷಗಾನ ಸಂಸ್ಕೃತಿ ಸಂಗ್ರಹಾಲಯ ಸ್ಥಾಪಿಸಿ  ತುಳು ಯಕ್ಷಗಾನ ಕಲಾವಿದರಿಗೆ ಪ್ರತ್ಯೇಕ ಪ್ರಶಸ್ತಿ ನೀಡಿ ಸ್ಮಾರಕ ನಿರ್ಮಿಸುವುದರೊಂದಿಗೆ ದೇಶ ವಿದೇಶಗಳಲ್ಲಿ ತುಳು ಯಕ್ಷಗಾನ ಬಯಲಾಟ ಪ್ರರ್ದಶಿಸಲು ವ್ಯವಸ್ಥೆ ಮಾಡಬೇಕೆಂದು ಸಾಮಗ ಅವರು ಅಗ್ರಹಿಸಿದರು.
ಭಾಗವತ ಪಿ.ಎನ್. ಲಕ್ಷö್ಮಣ ಹಂದೆ ಅಧ್ಯಕ್ಷತೆ ವಹಿಸಿದ್ದರು. ಯಕ್ಷಗಾನ ವೇಷದಾರಿ ಹಾಲಾಡಿ ಕೃಷ್ಣ ಮೊಗವೀರ ಅವರನ್ನು ಸನ್ಮಾನಿಸಲಾಯಿತು. ಗುರು ರತ್ನಾಕರ ಆಚಾರ್ಯ ಅವರನ್ನು ಗೌರವಿಸಲಾ ಯಿತು. ಮುಖ್ಯ ಆರ್ಚಕ ಗೋಪಾಲ ಭಟ್ ಉದ್ಘಾಟಿಸಿದರು. ಸುರೇಶ್ ಉಗ್ಗೆಲ್‌ಬೆಟ್ ಪ್ರಾರ್ಥಿಸಿದರು. ಸಂಘದ ಅಧ್ಯಕ್ಷ ಸುಧಾಕರ್ ಜತ್ತನ್ ಕಾರ್ಯಕ್ರಮಉಪಸ್ಥಿತರಿದ್ದರು. 

 
 
 
 
 
 
 
 
 
 
 

Leave a Reply