ರೋಟರಿ ಜಿಲ್ಲಾ ಸಮ್ಮೇಳನ  “ಜಯ ಹೋ- 2023 

ಉಡುಪಿ, ಚಿಕ್ಕಮಗಳೂರು, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳನ್ನೊಳಗೊಂಡ ರೋಟರಿ ಜಿಲ್ಲೆ 3182ರ 7ನೆಯ ಜಿಲ್ಲಾಸಮ್ಮೇಳನ ಮೂರು ದಿನಗಳ ಕಾಲ ಉಡುಪಿಯಲ್ಲಿ ಜರುಗಲಿದೆ. ಜಯ ಹೋ 2023, ಶೀರ್ಷಿಕೆಯಡಿಯಲ್ಲಿ ಕನೆಕ್ಟ್ ಆಗೋಣ ಘೋಷಣೆಯೊಂದಿಗೆ ಬಿ ಎಂ ಎಂ ಆಡಿಟೋರಿಯಂ, ಮಿಶನ್ ಆಸ್ಪತ್ರೆ ರಸ್ತೆ, ಉಡುಪಿಯಲ್ಲಿ ಇದೇ ಮಾರ್ಚ್ ತಿಂಗಳ 3,4 ಮತ್ತು 5 ರಂದು ಸಂಪನ್ನಗೊಳ್ಳಲಿದೆ.

ರೋಟರಿ ಜಿಲ್ಲಾ ಸಮ್ಮೇಳನವನ್ನು ಮೈಸೂರಿನ ರಾಜಮಾತೆ ಡಾ ಪ್ರಮೋದ ದೇವಿ ಒಡೆಯರ್ ರವರು ಉದ್ಘಾಟಿಸಲಿದ್ದಾರೆ. ಉದ್ಘಾಟನ ಸಮಾರಂಭದಲ್ಲಿ ಬೆಂಗಳೂರಿನ ನಾರಾಯಣ ಇನ್ಸಿಟ್ಯೂಟ್ಆಫ್ ನ್ಯೂರೋ ಸೈನ್ಸಸ್ ನ ನಿರ್ದೇಶಕರಾದ ಡಾ ತಿಮ್ಮಪ್ಪ ಹೆಗ್ಡೆಯವರು ನಿಯೋಜಿತ ಭಾಷಣ ಮಾಡಲಿದ್ದಾರೆ. ರೋಟರಿ ಜಿಲ್ಲಾ 3201ರ ಮಾಜಿ ಜಿಲ್ಲಾ ಗವರ್ನರ್ ರೊ ಎ.ವಿ. ಪತಿ ಮತ್ತು ಅವರ ಧರ್ಮಪತ್ನಿ ಶ್ರೀಮತಿ ವೀಣಾ ಪತಿಯವರು ಅಂತಾರಾಷ್ಟ್ರೀಯ ರೋಟರಿ ಆಧ್ಯಕ್ಷರ ಪ್ರತಿನಿಧಿಯಾಗಿ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಆತಿಥೇಯ ರೋಟರಿ ಜಿಲ್ಲೆಯ  ಗೌರವಾನ್ವಿತ ಜಿಲ್ಲಾ ಗವರ್ನರ್ ರೊ ಡಾ ಜಯಗೌರಿಯವರು ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ. 
 
ಸಮ್ಮೇಳನ ಸಮಿತಿಯ ಅಧ್ಯಕ್ಷರಾದ ಮಾಜಿ ಜಿಲ್ಲಾ ಗವರ್ನರ್ ಡಾ ಎಚ್ ಶಾಂತಾರಾಮ್, ಜಿಲ್ಲಾ ತರಬೇತು ದಾರರಾದ ಮಾಜಿ ಜಿಲ್ಲಾ ಗವರ್ನರ್ ರೊ. ಅಭಿನಂದನ್ ಶೆಟ್ಟಿ, ಜಿಲ್ಲಾ ಸಲಹೆಗಾರರಾದ ಮಾಜಿ ಜಿಲ್ಲಾ ಗವರ್ನರ್ ಡಿ ಎಸ್ ರವಿ, ಜಿಲ್ಲಾ ರೋಟರಿ ಫೌಂಡೇಶನ್ ಛೇರ್‌ಮನ್ ಮಾಜಿ ಜಿಲ್ಲಾ ಗವರ್ನರ್ ಡಾ ಪಿ ನಾರಾಯಣ, ನಿಯೋಜಿತ ಜಿಲ್ಲಾ ಗವರ್ನರ್ ರೊ ಬಿ ಸಿ ಗೀತಾ, ಡಿಜಿಎನ್ ರೊ ಸಿ ಎ ದೇವಾನಂದ್, ಡಿಜಿಎನ್‌ಡಿ ರೊ. ಪಾಲಾಕ್ಷ,  ಮಾಜಿ ಜಿಲ್ಲಾ ಗವರ್ನರ್‌ಗಳಾದ ಡಾ ಭರತೇಶ್, ಬಿ ಎನ್ ರಮೇಶ್, ರಾಜಾರಾಮ ಭಟ್, 11ವಲಯಗಳ ಅಸಿಸ್ಟೆಂಟ್ ಗವರ್ನರುಗಳು, ವಲಯ ನಾಲ್ಕರ ಕ್ಲಬ್ಬುಗಳ ಅಧ್ಯಕ್ಷರು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿರುತ್ತಾರೆ, ಎಂದು ಸಮ್ಮೇಳನ ಸಮಿತಿಯ ಉಪಸಭಾಪತಿ ರೊ ಡಾ ಗಿರಿಜಾ ಪತ್ರಿಕಾ ಗೋಷ್ಠಿಯಲ್ಲಿಂದು ತಿಳಿಸಿದರು.

ಆರ೦ಭದಲ್ಲಿ ಅತಿಥಿಗಳನ್ನು ಆಕರ್ಷಕ ಮೆರವಣಿಗೆಯೊಂದಿಗೆ ಬರಮಾಡಿಕೊಂಡು, ಅತಿಥಿಗಳ ಪಾಲ್ಗೊಳ್ಳು ವಿಕೆಯೊಂದಿಗೆ ರಾಷ್ಟ್ರಧ್ವಜಾರಾಹೋಣ, ರೋಟರಿ ಧ್ವಜ ಅರಳಿಸುವಿಕೆ, ಪ್ರದರ್ಶನ ಮಳಿಗೆಗಳ ಉದ್ಘಾಟನೆ, ತುಳುನಾಡ ವೈಭವವನ್ನು ಸಾರುವ ತುಳುನಾಡ ದರ್ಶಿನಿಯ ಅನಾವರಣ ನಡೆಯಲಿದೆ. ಮರುದಿನದ ವಿಚಾರ ಸಂಕಿರಣಗಳ ಕಲಾಪಗಳು ಅಂತಾರಾಷ್ಟ್ರೀಯ ರೋಟರಿಯ ಮಾಜಿ ನಿರ್ದೇಶಕರಾದ ರೊ ಡಾ. ಮನೋಜ್ ದೇಸಾಯಿಯವರ ಮುಖ್ಯ ಭಾಷಣದೊಂದಿಗೆ ಆರಂಭಗೊಳ್ಳಲಿದೆ. 
 
ಮರುದಿನ ಅಪರಾಹ್ನದ ತನಕ ನಡೆಯಲಿರುವ ಈ ವರ್ಷದ ಜಿಲ್ಲಾ ಯೋಜನೆಗಳಾದ ಮಕ್ಕಳಲ್ಲಿ ಕಲಿಕಾ ನ್ಯೂನತೆಗಳನ್ನು ಗುರುತಿಸುವುದು; ಚರ್ಮ ಮತ್ತು ಅಂಗಾಗ ದಾನವನ್ನು ಉತ್ತೇಜಿಸುವುದು, ಸ್ತ್ರೀಶಕ್ತೀಕರಣ, ಜಲ ಯಾತ್ರಾ ಮತ್ತು ಇ ತ್ಯಾಜ್ಯ ಮತ್ತು ಪ್ಲಾಸ್ಟಿಕ್ ಮುಕ್ತ ಆಂದೋಲನ ಕುರಿತಾದ ವಿವಿಧ ಗೋಷ್ಟಿಗಳು, ಚರ್ಚಾ ಗೋಷ್ಠಿಗಳಲ್ಲಿ ಡಾ ಭಗೀರಥ್ ಆರ್, ಖ್ಯಾತ ಹೃದ್ರೋಗ ತಜ್ಞರು, ಬೆಂಗಳೂರು, ಡಾ ಅರ್ಪನಾ ಅಯ್ಯಂಗಾರ್, ಪೇಡಿಯಾಟ್ರಿಕ್ ನೆಫ್ರೊಲೋಜಿಸ್ಟ್, ಬೆಂಗಳೂರು; ಶ್ರೀಮತಿ ಲಿಜಮಾಲ್ ಜೋಸೆಫ್, ಚೀಫ್ ಟ್ರಾನ್ಸ್ಪ್ಲಾಂಟ್ ಕೋಆರ್ಡಿನಟರ್, ಬೆಂಗಳೂರು,  ಶ್ರೀ ರಾಜೇಶ್ ಪ್ರಸಾದ್, ಕರ್ನಾಟಕ ಸರಕಾರದ ಶಿಕ್ಷಣ ಇಲಾಖಾ ಮುಖ್ಯ ಕಾರ್ಯದರ್ಶಿ,  ಶ್ರೀಮತಿ ಪವಿತ್ರಾ ಮುದ್ದಯ್ಯ. ದಿ ವೈಮರ್ ಫೌಂಡೇಶನ್, ಬೆಂಗಳೂರು; ಶ್ರೀ ಕೂರ್ಮಾ ರಾವ್, ಮಾನ್ಯ ಜಿಲ್ಲಾಧಿಕಾರಿಗಳು, ಉಡುಪಿ; ಶ್ರೀಮತಿ ಕವಿತಾ ರತ್ನ, ನಿರ್ದೇಶಕರು, ಅಡ್ವೊಕೆಸಿ, ದಿ ಕನ್ಸರ್ನ್ ಫಾರ್ ವರ್ಕಿಂಗ್ ಚಿಲ್ಡ್ರನ್  ಡಾ ಕರ್ನಲ್ ಎ.ಟಿ. ಕೃಷ್ಣ ರಾವ್, ಪೇಡಿಯಾಟ್ರಿಕ್ ಹೆಮಾಟೋಲಾಜಿಸ್ಟ್ ಮತ್ತು ಡಾ ರಂಜಿತ್ ಕುಮಾರ್ ಶೆಟ್ಟಿ ಗೈನಕಾಲೊಜಿಸ್ಟ್ ಮುಂತಾದ ಸಂಪನ್ಮೂಲ ವಿದ್ವಾಂಸರು ಭಾಗವಹಿಸಿ ತಮ್ಮ ಜ್ಞಾನವನ್ನು ಹಂಚಿಕೊಳ್ಳಲಿದ್ದಾರೆ. ಸಿನಿ ನಟ ಶ್ರೀ ದೊಡ್ಡಣ್ಣರವರ ಹಾಸ್ಯರಸ ಧಾರೆ ಹರಿಯಲಿದೆ.

ಮನುಕುಲದ ಸೇವೆಗೆ ಸಂಪೂರ್ಣ ಸಮರ್ಪಿಸಿಕೊಂಡಿರುವ ರೋಟರಿಯು ವಿವಿಧತೆ, ಸರ್ವರಿಗೂ ಸಮಾನ ಅವಕಾಶ ಹಾಗೂ ಎಲ್ಲರನ್ನೂ ಒಳಗೊಳ್ಳುವಿಕೆಯ ಬದ್ಧತೆಯನ್ನು ಹೊಂದಿದೆ. ಪ್ರತಿ ದಿನ ನಡೆಯುವ ಸಾಂಸ್ಕೃತಿಕ  ಕಾರ್ಯಕ್ರಮಗಳಲ್ಲಿ ಯಕ್ಷಗುರು ಶ್ರೀ ಸಂಜೀವ ಸುವರ್ಣರ ನಿರ್ದೇಶನದಲ್ಲಿ ಕರಾವಳಿ
ಕರ್ನಾಟಕದ ಗಂಡುಮೆಟ್ಟಿನ ಕಲೆ ಯಕ್ಷಗಾನದ ಪ್ರದರ್ಶನ, ಮಣಿಪಾಲದ ಖ್ಯಾತ ಸಂಗೀತ ತಜ್ಞ ಟಿ ರಂಗ ಪೈ ಮತ್ತು ಉಸ್ತಾದ್ ರರಫೀಕ್  ಖಾನ್ ರವರ ವಯೋಲಿನ್- ಸಿತಾರ್ ಜುಗಲ್ಬಂದಿ, ವಿದುಷಿ ಮಂಜರಿ ಮತ್ತು ಬಳಗದವರಿಂದ ಶಾಸ್ತ್ರೀಯ  ನೃತ್ಯ ಪ್ರಸ್ತುತಿ.
ಲೋಕೇಶ್ ತಂಡದವರಿ೦ದ ಸಂಗೀತ ರಸಮಂಜರಿ, ಸ್ನೇಹ ಆಚಾರ್ಯ ಮತ್ತು ತಂಡದವರಿ೦ದ ನೃತ್ಯ ಕಾರ್ಯಕ್ರಮ, ಡಿಆರ್‌ಆರ್ ಮಹಾಲಸಾ ಕಿಣಿ ಮತ್ತು ಬಳಗದ ಫ್ಯಾಶನ್ ಶೋ, ಮೂಡುಬಿದ್ರಿಯ ಆಳ್ವಾಸ್‌ರವರಿಂದ  ಸಾಂಸ್ಕೃತಿಕ ವೈಭವ, ಉಡುಪಿಯ ಪ್ರಶಾಂತ್ ಆ್ಯಂಡ್ ಗ್ರೂಪ್‌ರವರಿಂದ ಸಿನಿ ಮತ್ತು ಸಮಕಾಲೀನ ನೃತ್ಯವೈವಿಧ್ಯ ಹಾಗೂ ಶ್ರೀ ಸುಪ್ರೀತ್ ಸಫಲಿಗಾರವರ ಗಾನವೈವಿಧ್ಯಗಳು ಹೊಸ ರಂಜನಾ ಲೋಕವನ್ನು ಸೃಷ್ಟಿಸಲಿವೆ.
 
ಜಯ ಹೋ ಸಮ್ಮೇಳನದ ಸಮಾರೋಪ ಸಮಾರಂಭವು ಮಾರ್ಚ್ ಐದರಂದು ಆತಿಥೇಯ ರೋಟರಿ ಜಿಲ್ಲೆ 3182ರ ಗೌರವಾನ್ವಿತ ಜಿಲ್ಲಾ ಗವರ್ನರ್ ರೊ ಡಾ ಜಯಗೌರಿಯವರ ಅಧ್ಯಕ್ಷತೆಯಲ್ಲಿ ಜರಗಲಿದ್ದು, ಅಂತಾರಾಷ್ಟ್ರೀಯ ರೋಟರಿ ಅಧ್ಯಕ್ಷರ ಪ್ರತಿನಿಧಿ ಪಿಡಿಜಿ ರೊ ಎ ವಿ ಪತಿ ಸಮಾರೋಪ ಭಾಷಣಗೈಯ ಲಿದ್ದಾರೆ ಎಂದು ಡಾ ಗಿರಿಜಾ ತಿಳಿಸಿದರು. ಪತ್ರಿಕಾ ಗೋಷ್ಟಿಯಲ್ಲಿ ಸಮ್ಮೇಳನ ಸಮಿತಿಯ ಕಾರ್ಯದರ್ಶಿ ರೊ ರೇಣು ಜಯರಾಮ್, ಜಿಲ್ಲಾ ಕಾರ್ಯದರ್ಶಿ (ಆಡಳಿತ) ರೊ. ಅಮಿತ್ ಅರವಿಂದ್, ಜಿಲ್ಲಾ ಕಾರ್ಯದರ್ಶಿ (ಕಾರ್ಯಕ್ರಮ) ರೊ. ಸುಬ್ರಹ್ಮಣ್ಯ ಬಾಸ್ರಿ ಕೆ ಎಸ್, ವಲಯ ನಾಲ್ಕರ ಅಸಿಸ್ಟೆಂಟ್ ಗವರ್ನರ್ ರೊ. ರಾಮಚಂದ್ರ ಉಪಾಧ್ಯಾಯ ಮತ್ತು ಜಿಲ್ಲಾ ಜತೆ ಕಾರ್ಯದರ್ಶಿ (ಆಡಳಿತ) ರೊ ಪ್ರಶಾಂತ್ ಹೆಗ್ದೆ ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply